Advertisment

ಓದಿನಲ್ಲಿ ಮುಂದಿರೋದೆ ತಪ್ಪಾಯ್ತಾ! ವಿದ್ಯಾರ್ಥಿನಿಗೆ ಶಿಕ್ಷಕನ ಪತ್ನಿಯಿಂದ ಟಾರ್ಚರ್​.. ಸೂಸೈಡ್​​ ಮಾಡಿಕೊಂಡ ಬಾಲಕಿ

author-image
AS Harshith
Updated On
ಓದಿನಲ್ಲಿ ಮುಂದಿರೋದೆ ತಪ್ಪಾಯ್ತಾ! ವಿದ್ಯಾರ್ಥಿನಿಗೆ ಶಿಕ್ಷಕನ ಪತ್ನಿಯಿಂದ ಟಾರ್ಚರ್​.. ಸೂಸೈಡ್​​ ಮಾಡಿಕೊಂಡ ಬಾಲಕಿ
Advertisment
  • ಕ್ಲಾಸ್​​​ನಲ್ಲಿ ತನ್ನ ಮಗಳಿಗಿಂತ ಮುಂದಿದ್ದಾಳೆ ಎಂದು ಕಿರಿಕ್​​​
  • ಮನೆಗೆ ಕರೆಸಿ ರಾತ್ರಿಯಿಡಿ ಟೀಚರ್​​​ ಪತ್ನಿಯಿಂದ ಟಾರ್ಚರ್​
  • ಸಾಯುವ ಮುನ್ನ ಪತ್ರದಲ್ಲಿ ಎಳೆ ಎಳೆಯಾಗಿ ಬರೆದಿಟ್ಟ ಬಾಲೆ

ಈ ಬಾಲಕಿ ಏನ್ ಪಾಪ ಮಾಡಿದ್ಲೋ ಗೊತ್ತಿಲ್ಲ. ಈ ಜನ್ಮದಲ್ಲಿ ಮಾತ್ರ ಸಣ್ಣ ವಯಸ್ಸಿನಲ್ಲೆ, ಪಡಬಾರದ ಕಷ್ಟ ಪಟ್ಲು. ಇಷ್ಟೆ ಅಲ್ಲದೆ ಜೀವನವೇ ಬೇಡ ಅಂತಾ ಸೂಸೈಡ್ ಮಾಡಿಕೊಂಡಿದ್ದಾಳೆ. ಆದರೆ ಡೆತ್ ನೋಟ್ ಸಿಕ್ಕಾಗಲೇ ಗೊತ್ತಾಗಿದ್ದು, ಆತ್ಮಹತ್ಯೆಗೆ ನಿಜ ಕಾರಣ.

Advertisment

ಮುದುಡಿದ ಕನಸು

ಈ ಮುದ್ದು ಮುಖದ ಕಂದಮ್ಮನ ಹೆಸರು ಅರ್ಚನಾ. ವಯಸ್ಸು 15ರ ಆಸುಪಾಸು. ಆಸೆಗಳಿಗೇನು ಬರನಾ? ಕಂಡ ಕನಸುಗಳು ಅಷ್ಟೇ. ಅವು ನೂರೆಂಟು. ಅಂದದ ಶಾಲೆಯಲ್ಲಿ ಚಂದ ಪಾಠ ಕಲಿತಿದ್ದಾಕೆಗೆ ಅದೇನಾಯ್ತೋ ಏನೋ? ಆ ವಿಧಿಗೂ ಆಕೆ ಮೇಲೆ ಅದೆಂಥಾ ಕೋಪ ಇತ್ತೋ? ವಯಸ್ಸಲ್ಲದ ವಯಸ್ಸಲ್ಲಿ ಹೀಗೆ ಹೆಣವಾಗೋದು ಅಂದ್ರೆ ಏನರ್ಥ? ಅಂದಹಾಗೆಯೇ ಚಿಗುರುವ ಮುನ್ನವೇ ಈ ಮೊಳಕೆ ಸಾವಿನ ಹಾದಿ ತುಳಿದಿದೆ.

publive-image

ಇದನ್ನೂ ಓದಿ: ದರ್ಶನ್​​ಗೆ ಜೈಲಿನಲ್ಲಿ ಮತ್ತೊಂದು ಸಂಕಷ್ಟ.. ಜೈಲು ಆಸ್ಪತ್ರೆಯಲ್ಲೇ ಚಿಕಿತ್ಸೆ.. ಅಂಥದ್ದೇನಾಯ್ತು? 

ವಿದ್ಯಾರ್ಥಿನಿ ಕನಸಿಗೆ ಕೊಳ್ಳಿ ಇಟ್ಟ ಶಿಕ್ಷಕನ ಕುಟುಂಬ

ಇದು ಆಲದಕಟ್ಟೆ. ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಗ್ರಾಮ. ಇದೇ ಗ್ರಾಮದ ಈ ಅರ್ಚನಾ ಗೌಡಣ್ಣನವರ ಆತ್ಮಹತ್ಯೆಗೆ ಶರಣಾಗಿದ್ದಾಳೆ. 9ನೇ ತರಗತಿ ಓದ್ತಿದ್ದ ಈ ಕುಸುಮಬಾಲೆ, ಕಳೆದ ಮಂಗಳವಾರ ಡೆತ್​ನೋಟ್​ ಬರೆದಿದ್ದು, ಸುಂದರ ಬದುಕಿಗೆ ವಿದಾಯ ಹೇಳಿದ್ದಾಳೆ. ಆದ್ರೆ ಅದೇ ಸುಂದರ ಬಾಳ್ವೆಗೆ ತಾಯಿಯಂತಿದ್ದ ಗುರುವೇ ಕೊಳ್ಳಿ ಇಟ್ಟಿದ್ದಾಳೆ ಅಂತ ಗೊತ್ತಾಗಿದೆ.

Advertisment

ಕ್ಲಾಸಲ್ಲಿ ಫಸ್ಟ್​.. ಅದೇ ಸಾವಿಗೆ ಮುಳುವಾಯ್ತು!

ಇದು ಹಿರೇಕೆರೂರು ತಾಲೂಕಿನ ದೂದಿಹಳ್ಲಿಯಲ್ಲಿರು ಮೊರಾರ್ಜಿ ದೇಸಾಯಿ ವಸತಿ ಶಾಲೆ.. ಇದೇ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಅರ್ಚನಾ, ತನ್ನ ಸಾವಿಗೆ ಹಿಂದಿ ಶಿಕ್ಷಕರಾದ ಆರಿತವುಲ್ಲ ಕುಟುಂಬವೇ ಕಾರಣ ಅಂತ ಪತ್ರ ಬರೆದಿದ್ದಾಳೆ. ಎಲ್ಲದರಲ್ಲೂ ನಾನೇ ಮೊದಲು. ಆಟ, ಪಾಠದಲ್ಲಿ ನನ್ನ ಹೆಸರು ಮೊದಲು ಬರಬೇಕೆ ಎಂದು ಪಟ್ಟ ಕಷ್ಟವೇ ಕೊರಳಿಗೆ ನೇಣಿನ ಹಗ್ಗ ಬಿಗಿಸಿದೆ.

ಇದನ್ನೂ ಓದಿ: ವಿದ್ಯಾರ್ಥಿಗಳ ಜೊತೆ ಮಹಿಳಾ ಶಿಕ್ಷಕರು ಲೈಂಗಿಕ ಸಂಪರ್ಕ.. ಇಬ್ಬರು ಅರೆಸ್ಟ್!

publive-image

ಅರ್ಚನಾಳ ನೆಮ್ಮದಿಗೆ ಬೆಂಕಿ ಇಟ್ಟ ಶಾಲೆ ವಾತಾವರಣ

ಆರಿತವುಲ್ಲ ಮಗಳು ಝೋಯಾ ಮತ್ತು ಅರ್ಚನಾ ಒಂದೇ ಕ್ಲಾಸ್. ಇಬ್ಬರು ಸ್ನೇಹಿತರು, ಆದ್ರೆ ಓದಿನಲ್ಲಿ ಅರ್ಚನಾ ಮುಂದಿದ್ಲು. ಇದು ಝೋಯಾಳಿಗೆ ಸಹಿಸಿಕೊಳ್ಳಲು ಆಗಿಲ್ಲ. ಇದರಿಂದ ಪದೇ ಪದೇ ತನ್ನ ತಾಯಿಗೆ ಅರ್ಚನಾ ಮೇಲೆ ಕಂಪ್ಲೇಂಟ್​​​ ಮಾಡ್ತಿದ್ಲು. ಕ್ಲಾಸ್​​​ನಲ್ಲಿ ತನ್ನ ಮಗಳಿಗಿಂತ ಮುಂದಿದ್ದಾಳೆ ಅನ್ನೋದನ್ನ ತಿಳಿದ ಹೊಟ್ಟೆ ಕಿಚ್ಚಿನ ಮೊಟ್ಟೆ ಕೋಳಿ ಟೀಚರ್​​, ಮನೆಗೆ ಕರೆಸಿ ರಾತ್ರಿಯಿಡಿ ಟಾರ್ಚರ್​ ಕೊಟ್ಟಿದ್ಲಂತೆ. ಅತ್ತ ಕುಡುಕ ತಂದೆಯ ಕಾಟ ಮೀರಿ ಬೆಳೆಯುತ್ತಿದ್ದ ಅರ್ಚನಾಗೆ ಇತ್ತ ಶಾಲೆ ವಾತಾವರಣ ನೆಮ್ಮದಿಗೆ ಬೆಂಕಿ ಇಟ್ಟಿದೆ. ಈ ಎಲ್ಲಾ ಕಾರಣಕ್ಕೆ ಅರ್ಚನಾ ಸಾಯುವ ಮುನ್ನ ಪತ್ರದಲ್ಲಿ ಈ ಕುರಿತು ಎಳೆ ಎಳೆಯಾಗಿ ಬರೆದಿಟ್ಟು ಉಸಿರು ಚೆಲ್ಲಿದ್ದಾಳೆ.

Advertisment

ಇದನ್ನೂ ಓದಿ: ಕೇವಲ 1 ರೂಪಾಯಿ ಟ್ಯಾಕ್ಸ್​ ಕಟ್ಟಲು ಬರೋಬ್ಬರಿ 50 ಸಾವಿರ ಫೀಸು.. ಏನಿದು ಸ್ಟೋರಿ?

ಮಗಳ ಸಾವು.. ಹಣಕ್ಕೆ ಆಸೆಪಟ್ಟ ಕುಟುಂಬ

ಇನ್ನೂ ಇತ್ತ ಅರ್ಚನಾ ಸಾವಿಗೆ ಹಣ ಸಿಕ್ಕರೆ ಸಾಕು ಎಂದು ಕುಟುಂಬ ವಿಚಿತ್ರ  ರೀತಿ ವರ್ತಿಸಿದೆ. ಶಾಲೆಗೆ ತೆರಳಿ ಹಿಂದಿ ಶಿಕ್ಷಕ ಅರಿತವುಲ್ಲನಿಗೆ 5 ಲಕ್ಷಕ್ಕೆ ಹಣದ ಡಿಮ್ಯಾಂಡ್ ಇಟ್ಟಿದೆ. ಪತ್ನಿ-ಮಗಳನ್ನು ಕಾಪಾಡಲು ಅರಿತವುಲ್ಲ 1 ಲಕ್ಷ ಕೊಟ್ಟು ಕೈ ತೊಳೆದ್ಕೊಂಡಿದ್ದಾನೆ. ದುಡ್ಡಿನ ವ್ಯವಹಾರ ಮುಗಿಸಿ ಕುಟುಂಬಸ್ಥರು ಶವವನ್ನ ದಫನ್ ಮಾಡಿದ್ದಾರೆ.

publive-image

ಇದನ್ನೂ ಓದಿ: ಮದುವೆ ಆಗದವರಿಗೆ ಸಿಹಿಸುದ್ದಿ; ಪ್ರೇಮಿಗಳಿಗೆ ಅನುಕೂಲ; ಇಲ್ಲಿದೆ ಇಂದಿನ ಭವಿಷ್ಯ

Advertisment

ಮನೆಯಲ್ಲಿ ಓದಲು ಆಗಲಿಲ್ಲ. ಶಾಲೆಯಲ್ಲಿ ವಾತವಾರಣ ಸರಿಯಿರಲಿಲ್ಲ. ಶಿಕ್ಷಕರು ಹೆಣ ಹಾಕಿ ಭಕ್ಷಕರಾದ್ರು. ಹೆತ್ತವರು ಹಣಕ್ಕೆ ಬಾಯ್ತೆರೆದ್ರು. ಏನು ಅರಿಯದ ಆಕೆ ಮಣ್ಣಲ್ಲಿ ಮಣ್ಣಾಗಿ ಹೋಗಿದ್ಲು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment