ಚೆನ್ನೈ ಗೆಲುವಿಗೆ ಟಾಸ್ ಫಿಕ್ಸಿಂಗ್ ಅನುಮಾನ? ಮ್ಯಾಚ್ ರೆಫರಿ ಕಿವಿಯಲ್ಲಿ ಧೋನಿ ಹೇಳಿದ್ದೇನು? VIDEO

author-image
admin
Updated On
ಚೆನ್ನೈ ಗೆಲುವಿಗೆ ಟಾಸ್ ಫಿಕ್ಸಿಂಗ್ ಅನುಮಾನ? ಮ್ಯಾಚ್ ರೆಫರಿ ಕಿವಿಯಲ್ಲಿ ಧೋನಿ ಹೇಳಿದ್ದೇನು? VIDEO
Advertisment
  • ಸತತ 5 ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್
  • ಲಕ್ನೋ ಸ್ಟೇಡಿಯಂನಲ್ಲಿ ನಿನ್ನೆ ಟಾಸ್ ವೇಳೆ ಅಸಲಿಗೆ ಆಗಿದ್ದೇನು?
  • CSK ನಾಯಕ ಧೋನಿ ಆಯ್ಕೆ ಮಾಡಿದ್ದು ಹೆಡ್‌? ಅಥವಾ ಟೇಲ್ಸ್‌?

IPL 18ನೇ ಆವೃತ್ತಿಯಲ್ಲಿ ಸತತ 5 ಸೋಲುಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಕಂಗೆಟ್ಟಿತ್ತು. ಆದ್ರೆ ನಿನ್ನೆ ಲಕ್ನೋ ಎದುರು ಧೋನಿ ನಾಯಕತ್ವದ CSK ಗೆಲುವಿನ ಹಳಿಗೆ ಮರಳಿದೆ. ಲಕ್ನೋ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಇನ್ನೂ 3 ಬಾಲ್‌ ಬಾಕಿ ಇರುವಂತೆ ಚೆನ್ನೈ ಸೂಪರ್ ಕಿಂಗ್ಸ್‌ ರೋಚಕ ಗೆಲುವು ಸಾಧಿಸಿದೆ.

ಆದ್ರೆ, ಈ ಗೆಲುವಿನ ಬೆನ್ನಲ್ಲೇ ಚೆನ್ನೈ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದಿದೆ. ಇದಕ್ಕೆ ಪೂರಕ ಎಂಬಂತೆ ಟಾಸ್‌ ವೇಳೆ ನಡೆದ ಈ ಘಟನೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಲಕ್ನೋ ವಿರುದ್ಧದ ಪಂದ್ಯದಲ್ಲಿ ಟಾಸ್ ವೇಳೆ ಧೋನಿ, ಮ್ಯಾಚ್ ರೆಫರಿ ಕಿವಿಯಲ್ಲಿ ತನ್ನ ನಿರ್ಧಾರ ತಿಳಿಸಿದ್ದರು.

publive-image

ಇದನ್ನೂ ಓದಿ: ಗಾಯಕ್ವಾಡ್ ಬದಲಿಗೆ CSK ಸೇರಿದ 17 ವರ್ಷದ ಹುಡುಗ.. ಧೋನಿ ನಂಬಿಕೆಯಿಟ್ಟ ಆಯುಷ್​ ಯಾರು..? 

ಅತ್ತ ಟಾಸ್ ಹೆಡ್ ಬೀಳುತ್ತಿದ್ದಂತೆ ಇತ್ತ ಕಡೆಯಿಂದ ಕಾಮೆಂಟೇಟರ್ ಮುರಳಿ ಕಾರ್ತಿಕ್, ಧೋನಿ ಆಯ್ಕೆ ಟೇಲ್ಸ್ ಅಲ್ವಾ ಎಂದು ಕೇಳಿದ್ದಾರೆ. ಆದರೆ ಮ್ಯಾಚ್​ ರೆಫರಿ ಹೆಡ್ಸ್ ಎಂದಿದ್ದಾರೆ.

publive-image

ಇದೀಗ ಈ ಟಾಸ್ ಪ್ರಕ್ರಿಯೆ ವಿಡಿಯೋ ವೈರಲ್ ಆಗಿದ್ದು, ಅನೇಕರು ಮ್ಯಾಚ್‌ ಫಿಕ್ಸಿಂಗ್ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದಾರೆ.


">April 15, 2025

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment