ಸಂಭ್ರಮ ತಂದ ದುರಂತ.. ಗೆಲುವಿನ ಖುಷಿಯಲ್ಲಿದ್ದ 11 ಅಭಿಮಾನಿಗಳ ಹೃದಯ ಕ್ಷಣದಲ್ಲೇ ಸ್ತಬ್ಧ!

author-image
Veena Gangani
Updated On
ಸಂಭ್ರಮ ತಂದ ದುರಂತ.. ಗೆಲುವಿನ ಖುಷಿಯಲ್ಲಿದ್ದ 11 ಅಭಿಮಾನಿಗಳ ಹೃದಯ ಕ್ಷಣದಲ್ಲೇ ಸ್ತಬ್ಧ!
Advertisment
  • ಕಾಲ್ತುಳಿತದಲ್ಲಿ ಜೀವಬಿಟ್ಟ ಪಾನಿಪುರಿ ವ್ಯಾಪಾರಿಯ ಮಗ
  • ಘೋರ ದುರಂತದಲ್ಲಿ 11 ಮಂದಿ ಅಮಾಯಕರು ಬಲಿ
  • ಒಂದು ವರ್ಷದ ಹಿಂದೆ ಮದುವೆಯಾಗಿದ್ದ ಅಕ್ಷತಾ ನಿಧನ

ಬೆಂಗಳೂರು: ಅದೆಷ್ಟೋ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ ನಿನ್ನೆ ಬರಸಿಡಿಲು ಬಡಿದಂತೆ ಆಗಿತ್ತು. ಚಿನ್ನಸ್ವಾಮಿ ಮೈದಾನಕ್ಕೆ ಬಂದಿದ್ದ ತಮ್ಮ ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ನಾ ಮುಂದು, ತಾ ಮುಂದು ಅಂತ ಓಡೋದಕ್ಕೆ ಶುರು ಮಾಡಿದ್ದಾರೆ.

publive-image

ಆದ್ರೆ ಇದೇ ವೇಳೆ ಯಾರು ಊಹಿಸಲಾರದ ಘಟನೆ ನಡೆದು ಹೋಗಿದೆ. ಏಕಾಏಕಿ ಚಿನ್ನಸ್ವಾಮಿ ಮೈದಾನಕ್ಕೆ ಅಪಾರ ಅಭಿಮಾನಿಗಳು ಹರಿದು ಬಂದ ಪರಿಣಾಮ ಏಕಾಏಕಿ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಈ ಘೋರ ದುರಂತದಲ್ಲಿ 11 ಮಂದಿ ಅಮಾಯಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

[caption id="attachment_126566" align="alignnone" width="800"]ಭೂಮಿಕ್ ಭೂಮಿಕ್[/caption]

ನೆಚ್ಚಿನ ಆರ್​ಸಿಬಿ ಆಟಗಾರರನ್ನು ನೋಡೋಕೆ ಅಂತ ಬಂದಿದ್ದ ಭೂಮಿಕ್ ಕಾಲ್ತುಳಿತದಲ್ಲಿ ಉಸಿರು ಚೆಲ್ಲಿದ್ದಾರೆ. ನಾಗಸಂದ್ರ ಮೂಲದ ಭೂಮಿಕ್ (20)​, ಫ್ರೆಂಡ್ಸ್​ ಜೊತೆ ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದಿದ್ದ. ಆತನ ಎಲ್ಲಾ ಸ್ನೇಹಿತರು ಕ್ರೀಡಾಂಗಣದ ಒಳಗೋದ್ರೆ, ಭೂಮಿಕ್ ಮಾತ್ರ ಆಚೆಗೆ ಸಿಲುಕಿಕೊಂಡಿದ್ದ ಆದರೆ ಇದೇ ವೆಲೆ ಕಾಲ್ತುಳಿತದಲ್ಲಿ ಜೀವಬಿಟ್ಟಿದ್ದಾನೆ.

[caption id="attachment_126568" align="alignnone" width="800"]ಅಕ್ಷತಾ ಅಕ್ಷತಾ[/caption]

RCB ಅಭಿಮಾನಿಗಳ​ ನಡುವೆ ನೂಕುನುಗ್ಗಲು ವೇಳೆ ಉತ್ತರ ಕನ್ನಡ ಜಿಲ್ಲೆಯ ಅಕ್ಷತಾ ಸಾವನ್ನಪ್ಪಿದ್ದಾರೆ. ಒಂದು ವರ್ಷದ ಹಿಂದೆ ಮದುವೆಯಾಗಿದ್ದ ಅಕ್ಷತಾ ಹಾಗೂ ಪತಿ ಆಶಯ್ ಇಬ್ಬರು ಬೆಂಗಳೂರು ನಗರದ ಕಮ್ಮನಹಳ್ಳಿಯಲ್ಲಿ ವಾಸವಾಗಿದ್ರು. ಇಬ್ಬರು
ಒಟ್ಟಿಗೆ ಸ್ಟೇಡಿಯಂಗೆ ಬಂದಿದ್ರು. ಈ ವೇಳೆ ಕಾಲ್ತುಳಿತವಾಗಿ ಗಂಡನ ಎದುರೆ ಪತ್ನಿ ಪ್ರಾಣಬಿಟ್ಟಿದ್ದಾರೆ. ಬೌರಿಂಗ್ ಆಸ್ಪತ್ರೆಯಲ್ಲಿ ಅಕ್ಷತಾ ಮರಣೋತ್ತರ ಪರೀಕ್ಷೆ ಅಂತ್ಯಗೊಂಡಿದ್ದು, ಕುಟುಂಬಸ್ಥರಿಗೆ ಮೃತದೇಹವನ್ನ ಹಸ್ತಾಂತರಿಸಲಾಗಿದೆ.

[caption id="attachment_126569" align="alignnone" width="800"]ಸಹನಾ ಸಹನಾ[/caption]

ಕಾಲ್ತುಳಿತದಲ್ಲಿ ಕೋಲಾರ ಮೂಲದ ಯುವತಿ ಸಾವನ್ನಪ್ಪಿದ್ದಾಳೆ. ಕೆಜಿಎಫ್ ತಾಲೂಕಿನ ಬಡಮಾಕನಹಳ್ಳಿ ಗ್ರಾಮದ ಸುರೇಶ ಬಾಬು ಮತ್ತು ಮಂಜುಳಾ ಅವರ ಪುತ್ರಿ ಸಹನಾ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ಲು. RCB ಸೆಲಬ್ರೇಷನ್ ನೋಡಲು ಸ್ನೇಹಿತರ ಜೊತೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ಲು. ಆದ್ರೆ ಕಾಲ್ತುಳಿತದಲ್ಲಿ ಜೀವಬಿಟ್ಟಿದ್ದಾಳೆ. ಸದ್ಯ ಸಹನಾ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ಹಸ್ತಾಂತರಿಸಲಾಗಿದೆ. ಸಹನಾ ಮೃತದೇಹವನ್ನು ಕೋಲಾರ ನಗರದ ಎಸ್.ಜಿ. ಬಡಾವಣೆಯಲ್ಲಿ ಇರುವ ನಿವಾಸ ಕೊಂಡೊಯ್ಯಲಾಗಿದೆ. ಸಹನಾ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

[caption id="attachment_126570" align="alignnone" width="800"]ಪ್ರಜ್ವಲ್ ಪ್ರಜ್ವಲ್[/caption]

ಚಿನ್ನಸ್ವಾಮಿ ಕ್ರಿಡಾಂಗಣದ ಬಳಿ ನೂಕು ನುಗ್ಗಲು ಉಂಟಾಗಿ ಚಿಕ್ಕಬಳ್ಳಾಪುರದ ಪ್ರಜ್ವಲ್ ನಿಧನರಾಗಿದ್ದಾರೆ. ಇಂಜಿನಿಯರಿಂಗ್ ಮುಗಿಸಿ ನಿನ್ನೆ ಒಂದು ಖಾಸಗಿ ಕಂಪನಿಯಲ್ಲಿ ಇಂಟರ್​ ವ್ಯೂ ಮುಗಿಸಿದ್ದರು. ಪ್ರಜ್ವಲ್ ವಿಜಯೋತ್ಸವಕ್ಕೆ ಹೋಗಿದ್ದು ಮನೆಯವರಿಗೆ ಗೊತ್ತಿರಲಿಲ್ಲ. ಟಿವಿ ನೋಡಿ ಮನೆಯವರೇ ಅಭಿಮಾನಿಗಳಿಗೆ ಬೈಯ್ತಿದ್ರಂತೆ. ಸುಮ್ಮನೆ ಜನ ಇಲ್ಲಿಗೆ ಎಲ್ಲಾ ಹೋಗಿದ್ದಾರೆ ಅಂತ. ಆದ್ರೆ ತಮ್ಮ ಮಗ ಕೂಡ ಸ್ಟೇಡಿಯಂಗೆ ಹೋಗಿದ್ದ ಅನ್ನೋದು ಪ್ರಜ್ವಲ್ ಸಾವಿನ ಸುದ್ದಿ ತಿಳಿದ ತಕ್ಷಣವೇ ಗೊತ್ತಾಗಿದ್ದು. ಸದ್ಯ, ಮರಣೋತ್ತರ ಪರೀಕ್ಷೆ ನಡೆಸಿ ಪ್ರಜ್ವಲ್ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.

[caption id="attachment_126567" align="alignnone" width="800"]ದಿವ್ಯಾನ್ಷಿ ದಿವ್ಯಾನ್ಷಿ[/caption]

ಕಾಲ್ತುಳಿತ ದುರಂತದಲ್ಲಿ 14 ವರ್ಷದ ಬಾಲಕಿ ದಿವ್ಯಾನ್ಷಿ ಮೃತಪಟ್ಟಿದ್ದಾರೆ. ಯಲಹಂಕ ಕಣ್ಣೂರಿನ ನಿವಾಸಿ ಶಿವಕುಮಾರ್, ಅಶ್ವಿನಿ ದಂಪತಿ‌ ಮಗಳಾದ ದಿವ್ಯಾನ್ಷಿ ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದಳು. ದಿವ್ಯಾನ್ಷಿ ಚಿನ್ನಸ್ವಾಮಿ ಸ್ಟೇಡಿಯಂಗೆ ಚಿಕ್ಕಮ್ಮ ರಚನಾ ಇನ್ನಿಬರ ಜೊತೆ ಬಂದಿದ್ರು. ದಿವಾನ್ಷಿ ಕಾಲ್ತುಳಿತಕ್ಕೆ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

[caption id="attachment_126553" align="alignnone" width="800"]ವಿದ್ಯಾರ್ಥಿ ಶಿವಲಿಂಗ ವಿದ್ಯಾರ್ಥಿ ಶಿವಲಿಂಗ[/caption]

ದ್ವಿತೀಯ ಪಿಯುಸಿಗೆ ಸೇರಲು ಟಿಸಿ ತರಲು ಬಂದಿದ್ದ ವಿದ್ಯಾರ್ಥಿ ಶಿವಲಿಂಗ ಕಾಲ್ತುಳಿತಕ್ಕೆ ಸಿಲುಕಿ ಪ್ರಾಣಬಿಟ್ಟಿದ್ದಾನೆ. ಯಾದಗಿರಿಯ ರಾಮಸಂದ್ರ ಮೂಲದ ವಿದ್ಯಾರ್ಥಿ ಶಿವಲಿಂಗ, ಯಲಹಂಕ ಕಣ್ಣೂರಿನಲ್ಲಿ ವಾಸವಾಗಿದ್ದರು. ತಂದೆ ತಾಯಿ ಇಬ್ಬರು ಗಾರೆ ಕೆಲಸ ಮಾಡಿ ಶಿವಲಿಂಗನನ್ನ ಓದಿಸುತ್ತಿದ್ದರು, ಆದ್ರೆ, ಟಿಸಿ ತರಲು ಬೆಂಗಳೂರಿಗೆ ಬಂದಿದ್ದ ಶಿವಲಿಂಗ ಆರ್​ಸಿಬಿಯ ವಿಜಯೋತ್ಸವವನ್ನ ಕಣ್ತುಂಬಿಕೊಳ್ಳಲು ನೇರವಾಗಿ ಸ್ಟೇಡಿಯಂಗೆ ಬಂದಿದ್ದಾನೆ. ಈ ವೇಳೆ ಕಾಲ್ತುಳಿತಕ್ಕೆ ಸಿಲುಕಿ ದುರಂತ ಅಂತ್ಯ ಕಂಡಿದ್ದಾನೆ. ಬೌರಿಂಗ್ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದ್ದು, ಯಾದಗಿರಿಯ ರಾಮಸಂದ್ರ ಗ್ರಾಮಕ್ಕೆ ಮೃತದೇಹ ರವಾನಿಸಲಾಗುತ್ತದೆ.

[caption id="attachment_126571" align="alignnone" width="800"]ಪೂರ್ಣಚಂದ್ರ ಪೂರ್ಣಚಂದ್ರ[/caption]

ಮಂಡ್ಯದಿಂದ ಸೆಲಬ್ರೇಷನ್​ ನೋಡಲು ಬಂದಿದ್ದ 26 ವರ್ಷದ ಪೂರ್ಣಚಂದ್ರ ಕೂಡ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾನೆ. ಕೆ.ಆರ್ ಪೇಟೆ ರಾಯಸಮುದ್ರದ ನಿವಾಸಿಯಾಗಿರೋ ಪೂರ್ಣಚಂದ್ರ ಸಿವಿಲ್ ಇಂಜಿನಿಯರ್ ಕೆಲಸ ಮಾಡ್ತಿದ್ದ. ಕಾಲ್ತುಳಿತದಲ್ಲಿ ಅಸ್ವಸ್ಥನಾಗ್ತಿದ್ದಂತೆ ಸಿಪಿಆರ್​ ನೀಡಲಾಯ್ತು. ಆದ್ರೂ ಪೂರ್ಣಚಂದ್ರ ಬದುಕುಳಿಲಿಲ್ಲ. ಸದ್ಯ ಪೂರ್ಣಚಂದ್ರ ಮೃತದೇಹ ಹುಟ್ಟೂರು ತಲುಪಿದೆ. ಮಗನ ದೇವವನ್ನು ನೋಡಿದ ಕುಟುಂಬಸ್ಥರು ಕಣ್ಣೀರು ಇಡುತ್ತಿದ್ದಾರೆ.

publive-image

ಕಾಲ್ತುಳಿತದಲ್ಲಿ ತಮಿಳುನಾಡಿನ ಕೊಯಮತ್ತೂರಿನ ದೇವಿ ಎಂಬುವವರು ನಿಧನರಾಗಿದ್ದಾರೆ. ಇವರು ದೇವಿ (29) ಬೆಂಗಳೂರಿನ ರಾಮಮೂರ್ತಿನಗರದಲ್ಲಿ ವಾಸವಾಗಿದ್ದರು. ಇದೀಗ ಮೃತದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ತಮಿಳುನಾಡಿನ ಕೊಯಮತ್ತೂರಿಗೆ ಮೃತದೇಹ ರವಾನಿಸಲಾಗುತ್ತದೆ. ಆದ್ರೆ ಮೃತ ದೇವಿ ಫೋಟೋ ಲಭ್ಯವಾಗಿಲ್ಲ.

publive-image

ಬೆಂಗಳೂರಿನಲ್ಲಿ ಕಾಲ್ತುಳಿತದಲ್ಲಿ ಅಂಬೇಡ್ಕರ್ ಕಾಲೇಜಿನ ಡೆಂಟಲ್ ವಿದ್ಯಾರ್ಥಿ ಶ್ರವಣ್ (20) ಮೃತಪಟ್ಟಿದ್ದಾನೆ. ವಿದ್ಯಾರ್ಥಿ ಮೃತದೇಹ ಚಿಕ್ಕಬಳ್ಳಾಪುರದ ಚಿಂತಾಮಣಿಯ ಕುರುಟಹಳ್ಳಿ ಗ್ರಾಮವನ್ನ ತಲುಪಿದೆ. ಮೃತದೇಹ ಮನೆಗೆ ಬರ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

[caption id="attachment_126557" align="alignnone" width="800"]ಚಿನ್ಮಯಿ ಶೆಟ್ಟಿ ಚಿನ್ಮಯಿ ಶೆಟ್ಟಿ[/caption]

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಯಕ್ಷ ಕಲಾವಿದೆ ಆಗಿರೋ ಬಹುಮುಖಿ ಪ್ರತಿಭೆ ಚಿನ್ಮಯಿ ಶೆಟ್ಟಿ ಜೀವಬಿಟ್ಟಿದ್ದಾಳೆ. ಇವರು ಬ್ಯಾಸ್ಕೆಟ್ ಬಾಲ್ ಪ್ಲೇಯರ್ ಕೂಡ ಆಗಿದ್ದರು. 'ಯಕ್ಷತರಂಗ ಬೆಂಗಳೂರು' ರಲ್ಲಿ ಯಕ್ಷಗಾನ ಕಲಿಯುತ್ತಿದ್ದರು. ಮುದ್ದಾದ ಮಗಳ ಮೇಲೆ ಪೋಷಕರು ಬೆಟ್ಟದಷ್ಟು ಕನಸು ಕಟ್ಟಿಕೊಂಡಿದ್ದರು. ಆದ್ರೆ ಮುದ್ದಾದ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

[caption id="attachment_126573" align="alignnone" width="800"]ಮನೋಜ್ ಮನೋಜ್[/caption]

ಕಾಲ್ತುಳಿತದಲ್ಲಿ ಪಾನಿಪುರಿ ವ್ಯಾಪಾರಿಯ ಮಗ ಮನೋಜ್ ಎಂಬುವವರು ಜೀವಬಿಟ್ಟಿದ್ದಾರೆ. ಇವರ ತಂದೆ ಪಾನಿಪುರಿ ಮಾರಾಟ ಮಾಡಿ ಮಗನನ್ನ ಓದಿಸುತ್ತಿದ್ದರಂತೆ. ಬೆಂಗಳೂರಿನ ಯಲಹಂಕದ ರೆಸಿಡೆನ್ಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ. ಮೂಲತಃ ತುಮಕೂರಿನ ಕುಣಿಗಲ್​ನ ಯಡಿಯೂರಿನವರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment