newsfirstkannada.com

Lok Sabha Election: ಎಕ್ಸಿಟ್ ಪೋಲ್ ವಿಚಾರದಲ್ಲಿ ಕಾಂಗ್ರೆಸ್​ ಹೊಸ ನಿಲುವು.. ಭಾರೀ ಟೀಕೆ..!    

Share :

Published June 1, 2024 at 7:28am

  ಲೋಕಸಭೆ ಚುನಾವಣೆಯ 7 ಹಾಗೂ ಅಂತಿಮ ಹಂತದ ಮತದಾನದ ಶುರು

  ಪ್ರಧಾನಿ ಮೋದಿ ಸೇರಿದಂತೆ ಒಟ್ಟು 904 ಅಭ್ಯರ್ಥಿಗಳ ಹಣೆ ಬರಹ ನಿರ್ಧಾರ

  ಸಂಜೆ 6.30ರ ನಂತರವೇ ಎಕ್ಸಿಟ್‌ ಪೋಲ್‌ ಪ್ರಕಟಿಸುವಂತೆ ಖಡಕ್‌ ಸೂಚನೆ

ಇಡೀ ವಿಶ್ವವೇ ತುದಿಗಾಲಲ್ಲಿ ನಿಂತು ಕಾಯುತ್ತಿರುವ ಭಾರತದ ಲೋಕಸಭೆ ಚುನಾವಣೆಯು ನಿರ್ಣಾಯಕ ಹಂತಕ್ಕೆ ತಲುಪಿದೆ. 2024ರ ಲೋಕಸಭೆ ಚುನಾವಣೆಯ ಏಳನೇ ಹಾಗೂ ಅಂತಿಮ ಹಂತದ ಮತದಾನದ ಶುರುವಾಗಿದೆ. ಅಂತಿಮ ಹಂತದಲ್ಲಿ ಒಟ್ಟು ಏಳು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಚಂಡೀಗಢ ಸೇರಿದಂತೆ 57 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮತಗಟ್ಟೆಗಳ ಬಿಗಿ ಬಂದೋಬಸ್ತ್​ ನಿಯೋಜಿಸಲಾಗಿದೆ.

ಪ್ರಧಾನಿ ಮೋದಿ ಸೇರಿ ಪ್ರಮುಖ ಅಭ್ಯರ್ಥಿಗಳು ಕಣದಲ್ಲಿ

ದೇಶಾದ್ಯಂತ 543 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್​ 19ರಿಂದ ಚುನಾವಣಾ ಪ್ರಕ್ರಿಯೆ ಆರಂಭವಾಗಿತ್ತು. ಈಗಾಗಲೇ 6 ಹಂತಗಳಲ್ಲಿ 486 ಲೋಕಸಭೆ ಕ್ಷೇತ್ರಗಳಿಗೆ ಚುನಾವಣಾ ಪೂರ್ಣಗೊಂಡಿದೆ. ಅಂತಿಮ ಹಂತದಲ್ಲಿ 57 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದು, ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ ಸಚಿವ ಅನುರಾಗ್ ಠಾಕೂರ್, ನಟಿ ಕಂಗನಾ ರಣಾವತ್ ಸೇರಿದಂತೆ 904 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು 10.06 ಕೋಟಿ ಮತದಾರರು ಹಕ್ಕು ಚಲಾಯಿಸುವ ಅರ್ಹತೆ ಹೊಂದಿದ್ದಾರೆ.

ಎಲ್ಲೆಲ್ಲಿ ನಡೆಯಲಿದೆ ಎಲೆಕ್ಷನ್!

 • ಪಂಜಾಬ್‌ 13 ಕ್ಷೇತ್ರಗಳು
 • ಹಿಮಾಚಲ ಪ್ರದೇಶ 04 ಕ್ಷೇತ್ರಗಳು
 • ಉತ್ತರ ಪ್ರದೇಶ 13 ಕ್ಷೇತ್ರಗಳು
 • ಪಶ್ಚಿಮ ಬಂಗಾಳ 09 ಕ್ಷೇತ್ರಗಳು
 • ಬಿಹಾರ 08 ಕ್ಷೇತ್ರಗಳು
 • ಒಡಿಶಾ 06 ಕ್ಷೇತ್ರಗಳು
 • ಜಾರ್ಖಂಡ್‌ 03 ಕ್ಷೇತ್ರಗಳು

ಇದರೊಂದಿಗೆ ಒಡಿಶಾದ 42 ಮತ್ತು ಹಿಮಾಚಲ ಪ್ರದೇಶದ ಆರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನವೂ ಇಂದೇ ನಡೆಯಲಿದೆ. ಭಾರತದಲ್ಲಿ ಮೂರನೇ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪಣತೊಟ್ಟಿರುವ ಮೋದಿ, ಅಬ್ಬರದ ಪ್ರಚಾರ ನಡೆಸಿದ್ರು. ಕೊನೆ ಹಂತದ ಬಹಿರಂಗ ಪ್ರಚಾರಕ್ಕೆ ತೆರೆ ಬೀಳ್ತಿದ್ದಂತೆ ಪ್ರಧಾನಿ ಮೋದಿ ಕನ್ಯಾಕುಮಾರಿಗೆ ತೆರಳಿ, ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ್ದ ಸ್ಥಳದಲ್ಲಿ 45 ಗಂಟೆಗಳ ಧ್ಯಾನ ಕೈಗೊಂಡಿದ್ದಾರೆ. ಇವತ್ತು ಮಧ್ಯಾಹ್ನ ಅವರು ಧ್ಯಾನವನ್ನು ಮುಕ್ತಾಯ ಮಾಡಲಿದ್ದಾರೆ.

ಮತದಾನ ಮುಗಿಯುತ್ತಿದ್ದಂತೆ ಎಕ್ಸಿಟ್​ ಪೋಲ್ ಭವಿಷ್ಯ ಬಯಲು​

ಲೋಕಸಭಾ ಚುನಾವಣೆಯ 7ನೇ ಹಂತದ ಮತದಾನ ಮುಗಿದ ಬಳಿಕ ಹೊರಬೀಳಲಿರುವ ಎಕ್ಸಿಟ್‌ ಪೋಲ್‌ ಬಗ್ಗೆ ದೇಶಾದ್ಯಂತ ತೀವ್ರ ಕುತೂಹಲ ಮೂಡಿದೆ. ಸಂಜೆ ಎಕ್ಸಿಟ್‌ ಪೋಲ್‌ ಪ್ರಕಟವಾಗಲಿದ್ದು, ಯಾರಿಗೆ ವಿಜಯಮಾಲೆ ಸಿಗಲಿದೆ ಅನ್ನೋದರ ಬಗ್ಗೆ ವಿವಿಧ ಸಮೀಕ್ಷೆಗಳು ಭವಿಷ್ಯ ನುಡಿಯಲಿವೆ. ಸಂಜೆ 6.30ರ ನಂತರವೇ ಎಕ್ಸಿಟ್‌ ಪೋಲ್‌ ಪ್ರಕಟಿಸಬೇಕು. ಇದಕ್ಕೂ ಮೊದಲು ಪ್ರಕಟಿಸುವಂತಿಲ್ಲವೆಂದು ಚುನಾವಣಾ ಆಯೋಗ ಖಡಕ್‌ ಸೂಚನೆ ಕೂಡ ನೀಡಿದೆ.

ಮತ್ತೊಂದೆಡೆ ಕಾಂಗ್ರೆಸ್​ ನಾಯಕರು ಎಕ್ಸಿಟ್​ ಪೋಲ್​ ಚರ್ಚೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ದು, ಕಾಂಗ್ರೆಸ್​ ನಾಯಕರು ಫಲಿತಾಂಶಕ್ಕೂ ಮೊದಲೇ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ವಿಶ್ವದಲ್ಲೇ ಅತಿದೊಡ್ಡ ಪ್ರಜ್ವಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತದಲ್ಲಿ ಮತಹಬ್ಬ ಅಂತಿಮ ಘಟ್ಟ ತಲುಪಿದೆ. ಈ ಬಾರಿ ದೇಶದ ಜನತೆ ಬದಾವಣೆ ಬಯಸಿದ್ದಾರಾ ಅಥವಾ ಮೂರನೇ ಬಾರಿ ಪ್ರಧಾನಿಗೆ ಜೈ ಹೋ ಹೇಳ್ತಾರಾ ಅನ್ನೋದು ಜೂನ್​ 4ರಂದು ಬಹಿರಂಗವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Lok Sabha Election: ಎಕ್ಸಿಟ್ ಪೋಲ್ ವಿಚಾರದಲ್ಲಿ ಕಾಂಗ್ರೆಸ್​ ಹೊಸ ನಿಲುವು.. ಭಾರೀ ಟೀಕೆ..!    

https://newsfirstlive.com/wp-content/uploads/2024/01/KHARGE_ODISHA_MODI.jpg

Load More