/newsfirstlive-kannada/media/post_attachments/wp-content/uploads/2024/04/ttd1.jpg)
ಅಮರಾವತಿ: ತಿರುಪತಿ ತಿರುಮಲ ದೇವಸ್ಥಾನ ನಿರ್ವಹಣೆಗೆ ಒಳಪಟ್ಟಿರುವ ಶ್ರೀನಿವಾಸ ಮಂಗಾಪುರದ ಕಲ್ಯಾಣ ವೆಂಕಟೇಶ್ವರ ಸ್ವಾಮಿ ದೇವಾಲಯದ ವಾರ್ಷಿಕ ಪುಷ್ಪ ಯಜ್ಞ ನೆರವೇರಿದೆ. ಈ ಪುಷ್ಪ ಯಜ್ಞ ಒಂದಲ್ಲಾ ಎರಡಲ್ಲಾ ಬರೋಬ್ಬರಿ 3 ಸಾವಿರ ಕೆಜಿ ನಾನಾ ಬಗೆಯ ಹೂವುಗಳನ್ನು ಬಳಸಲಾಗಿದೆ.
/newsfirstlive-kannada/media/post_attachments/wp-content/uploads/2024/04/ttd2.jpg)
ಹೌದು, ಗುರುವಾರ ಸಂಜೆ ಶ್ರೀನಿವಾಸ ಮಂಗಾಪುರದ ಕಲ್ಯಾಣ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಪುಷ್ಪ ಯಜ್ಞ ವಿಜೃಂಭಣೆಯಿಂದ ನಡೆದಿತ್ತು. ಈ ಮೆರವಣಿಗೆಯಲ್ಲಿ ದೇವತೆಗಳಿಗೆ ಪುಷ್ಪ ಸ್ನಾನ ಮಾಡಲು ಒಂದಲ್ಲಾ ಎರಡಲ್ಲಾ ಬರೋಬ್ಬರಿ 3 ಕಿಲೋ ಮತ್ತು ಅರ್ಧ ಡಜನ್ ಬಗೆ ಬಗೆಯ ಎಲೆಗಳ ಹಾಗೂ ಹೂವುಗಳನ್ನು ಬಳಸಲಾಗಿದೆ.
/newsfirstlive-kannada/media/post_attachments/wp-content/uploads/2024/04/ttd.jpg)
ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆಯವರೆಗೆ ನಡೆದ ಯಾಗದಲ್ಲಿ ಅರ್ಧ ಡಜನ್ ವಿಧದ ಎಲೆಗಳನ್ನು ಸಹ ಪ್ರದರ್ಶಿಸಲಾಯಿತು ಎಂದು ಟಿಟಿಡಿ ಪ್ರಕಟಣೆಯಲ್ಲಿ ತಿಳಿಸಿದೆ. ಶ್ರೀನಿವಾಸ ಮಂಗಾಪುರದ ಕಲ್ಯಾಣ ವೆಂಕಟೇಶ್ವರ ಸ್ವಾಮಿ ಪುಷ್ಪ ಸ್ನಾನ ಮಾಡಲು ಗುಲಾಬಿ, ಮಲ್ಲಿಗೆ, ಲಿಲ್ಲಿ, ನೈದಿಲೆ ಮತ್ತು ಮುಂತಾದ ಹೂವುಗಳನ್ನು ಅಧಿಕಾರಿಗಳು ಬುಟ್ಟಿಗಳಲ್ಲಿ ತಂದು ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us