/newsfirstlive-kannada/media/post_attachments/wp-content/uploads/2025/04/Pahalgama-rescue-guide.jpg)
ಕಳೆದ ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಅಟ್ಟಹಾಸ ಭಾರತೀಯರಿಗೆ ಕರಾಳ ಅಧ್ಯಾಯ. ಪಾಪಿ ಪಾಕಿಸ್ತಾನದ ರಕ್ತ ಬಿಜಾಸುರರ ನರಮೇಧ ಹೇಳಲು ಅಸಾಧ್ಯವಾದದ್ದು. ಉಗ್ರರ ದಾಳಿ ವೇಳೆ 26ಕ್ಕೂ ಹೆಚ್ಚು ಭಾರತೀಯರು ಪ್ರಾಣ ಬಿಟ್ಟಿದ್ರೆ ಬದುಕಿ ಉಳಿದವರದ್ದು ರೋಚಕ ಕಥೆ.
ಪಹಲ್ಗಾಮ್‌ನಲ್ಲಿ ಉಗ್ರರ ಗುಂಡಿನ ದಾಳಿ ವೇಳೆ ಟೂರಿಸ್ಟ್ ಗೈಡ್ ನಝಕತ್ ಅಹ್ಮದ್ ಶಾ ಅವರು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಈ ಮಗುವನ್ನ ರಕ್ಷಿಸಿದ್ದಾರೆ. ಗುಂಡು ತಗುಲಿದ್ರು ನನಗೆ ತಗುಲಲಿ. ಈ ಮಗುವಿಗೆ ಏನು ಆಗಬಾರದೆಂದು ಮಗುವನ್ನ ತಬ್ಬಿಕೊಂಡು ಕಾಪಾಡಿದ್ದಾರೆ.
ಅರವಿಂದ್ ಅಗರ್ವಾಲ್ ಅವರು ಪತ್ನಿ, ಮಗ ಜೊತೆ ಕಾಶ್ಮೀರದ ಪ್ರವಾಸಕ್ಕೆ ಬಂದಿದ್ರು. ದಾಳಿಯಲ್ಲಿ ಮಗುವಿಗೆ ಶೀಲ್ಡ್ನಂತೆ ರಕ್ಷಿಸಿದ್ದು ಟೂರಿಸ್ಟ್ ಗೈಡ್ ನಝಕತ್ ಅಹ್ಮದ್ ಶಾ ಅವರಾಗಿದ್ದಾರೆ. ಅರವಿಂದ್ ಅಗರ್ವಾಲ್ ಅವರು ಟೂರಿಸ್ಟ್ ಗೈಡ್ ಮಾಡಿದ ಸಹಾಯವನ್ನು ತಮ್ಮ ಇನ್ಸ್ಟಾದಲ್ಲಿ ಬರೆದು ಕೊಂಡಿದ್ದಾರೆ.
ಇದನ್ನೂ ಓದಿ: ಎರಡು ಜೀವ ಉಳಿಸಿದ ಹಸಿವು.. ಹನಿಮೂನ್ಗೆ ಬಂದ ಜೋಡಿ ಪಾರಾಗಿದ್ದೇ ಪವಾಡ..!
ಕಾಶ್ಮೀರದ ಟೂರಿಸ್ಟ್ ಗೈಡ್ ನಝಕತ್ ಅಹ್ಮದ್ ಶಾ ಈ ಕಾರ್ಯಕ್ಕೆ ಎಲ್ಲೆಡೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ