newsfirstkannada.com

ಸೆಲ್ಫಿ ಹುಚ್ಚು.. ನೀರಿನಲ್ಲಿ ಕೊಚ್ಚಿ ಹೋದ ಬೆಂಗಳೂರಿನ ಪ್ರವಾಸಿಗ ಇನ್ನೂ ಪತ್ತೆ ಆಗಿಲ್ಲ..

Share :

Published August 4, 2023 at 7:28am

Update August 4, 2023 at 7:39am

    ಅನಾಹುತದ ಮೇಲೆ ಅನಾಹುತ ನಡೆದ್ರೂ ಎಚ್ಚೆತ್ತಿಕೊಳ್ಳದ ಜನ

    ಮೂವರು ಸ್ನೇಹಿತರ ಜೊತೆ ಹಾರಂಗಿಗೆ ಬಂದಿದ್ದವ ನೀರುಪಾಲು

    ತಡರಾತ್ರಿಯಾದ್ರೂ ಪತ್ತೆಯಾಗದ ಪ್ರವಾಸಿಗ, ಮುಂದುವರಿದ ಶೋಧ

ಅದ್ಯಾಕೋ ಈ ಬಾರಿ ಮುಂಗಾರು ಅಬ್ಬರಿಸಿದ್ದು ಕಮ್ಮಿ.. ಆದ್ರೆ ದುರಂತಗಳಿಗೆ ಸಾಕ್ಷಿಯಾಗಿದ್ದೇ ಹೆಚ್ಚು.. ಈ ಬಾರಿ ಮಳೆಯಿಂದಾಗಿ ಸಾವು-ನೋವಿನ ಸರಮಾಲೆಗಳು ಸಂಭವಿಸಿವೆ. ಕೊಲ್ಲೂರಿನ ಅರಿಶಿನಗುಂಡಿ ಫಾಲ್ಸ್ ದುರಂತ ಮಾಸುವ ಮುನ್ನವೇ ಸೆಲ್ಫಿ ಹುಚ್ಚಿಗೆ ಪ್ರವಾಸಿಗರೊಬ್ಬರು ಕೊಚ್ಚಿ ಹೋದ ಘಟನೆ ನಡೆದಿದೆ.

ಹಾರಂಗಿ ಜಲಾಶಯದ ಬಳಿ ಮತ್ತೊಂದು ದುರಂತ!

ಕಳೆದ ಜುಲೈ 23ರಂದು ಅರಿಶಿನಗುಂಡಿ ಜಲಪಾತದಲ್ಲಿ ಫೋಟೋ, ವಿಡಿಯೋ ತೆಗೆಯಲು ಹೋಗಿ ಭದ್ರಾವತಿಯ ಶರತ್​ ನೀರಿನಲ್ಲಿ ಕೊಚ್ಚಿ ಹೋಗಿದ್ದ.. ಬಳಿಕ ಶವವಾಗಿ ಪತ್ತೆಯಾಗಿದ್ದ.. ಈಗ ಅಂಥದ್ದೇ ಪ್ರಕರಣ ಮರುಕಳುಸಿದೆ.. ಕೊಡಗಿನ ಕುಶಾಲನಗರದ ಹಾರಂಗಿ ಜಲಾಶಯದ ನೀರಿನಲ್ಲಿ ಬೆಂಗಳೂರು ಮೂಲದ ಸಂದೀಪ್ ಎಂಬ ವ್ಯಕ್ತಿ ಕೊಚ್ಚಿ ಹೋಗಿದ್ದಾನೆ. ಸೆಲ್ಫಿ ಹುಚ್ಚಿಗೆ ಜೀವವನ್ನೇ ಕಳೆದುಕೊಂಡಿದ್ದಾನೆ.

ಸೆಲ್ಫಿಯಿಂದ ಆಪತ್ತು!

  • ಮೂವರು ಸ್ನೇಹಿತರ ಜೊತೆ ಹಾರಂಗಿಗೆ ಬಂದಿದ್ದ ಸಂದೀಪ್
  • ಡ್ಯಾಂನ ಎದುರಿನ ಸೇತುವೆ ಮೇಲೆ ಸೆಲ್ಫಿ ತೆಗೆಯುವಾಗ ಘಟನೆ
  • ಸೆಲ್ಫಿ ತೆಗೆಯಲು ಹೋಗಿ ಜಾರಿ ಬಿದ್ದು ಕೊಚ್ಚಿ ಹೋದ ಸಂದೀಪ್
  • ಸಂದೀಪ್ ರಕ್ಷಣೆ ಮಾಡಲು ಪ್ರಯತ್ನಿಸಿದ ಮೂವರು ಸ್ನೇಹಿತರು
  • ಕೊಚ್ಚಿ ಹೋಗ್ತಿದ್ದ ಸಂದೀಪ್​ರನ್ನ ರಕ್ಷಿಸಲು ಸ್ನೇಹಿತರ ಯತ್ನ
  • ನೀರಿನ ಹೊರಹರಿವು ಹೆಚ್ಚಿದ್ದರಿಂದ ಕೊಚ್ಚಿ ಹೋದ ಸಂದೀಪ್

ತಡರಾತ್ರಿಯಾದ್ರೂ ಪತ್ತೆಯಾಗದ ಸಂದೀಪ್ ಮೃತದೇಹ!

ಹಾರಂಗಿ ಜಲಾಶಯದಲ್ಲಿ ಸಂದೀಪ್ ಕೊಚ್ಚಿ ಹೋದ ಸಂಗತಿ ತಿಳಿಯುತ್ತಿದ್ದಂತೆ ಶೋಧ ಕಾರ್ಯಾಚರಣೆ ನಡೆಸಲಾಯ್ತು.. ತಡರಾತ್ರಿವರೆಗೂ ಸಂದೀಪ್​​ಗಾಗಿ ಅಗ್ನಿಶಾಮಕ ಸಿಬ್ಬಂದಿ ಹುಡುಕಾಡಿದ್ರು.. ಸಂದೀಪ್ ನದಿಗೆ ಬಿದ್ದ ತಕ್ಷಣ ಅಧಿಕಾರಿಗಳು ಜಲಾಶಯದ ನೀರನ್ನು ನಿಲ್ಲಿಸಲಾಗಿತ್ತು. ಒಂದು ವೇಳೆ ನೀರು ಬಿಟ್ಟರೆ ಮೃತದೇಹ ದೂರಕ್ಕೆ ಕೊಚ್ಚಿ ಹೋಗುವ ಸಾಧ್ಯತೆ ಇತ್ತು. ಹೀಗಾಗಿ ಜಲಾಶಯದಿಂದ ನೀರನ್ನ ನಿಲ್ಲಿಸಲಾಗಿತ್ತು.. ಆದ್ರೆ ಒಳಹರಿವು ಹೆಚ್ಚಿರೋದ್ರಿಂದ ಹೆಚ್ಚು ಹೊತ್ತು ಡ್ಯಾಂ ನೀರು ನಿಲ್ಲಿಸಲು ಆಗಿಲ್ಲ. ಇನ್ನು ಪ್ರವಾಸಿಗರ ಹುಚ್ಚಾಟದಿಂದ ಅವರೇ ಅಪಾಯ ತಂದುಕೊಳ್ತಿದ್ದಾರೆ ಅಂತ ಸ್ಥಳೀಯರು ಆರೋಪಿಸಿದ್ದಾರೆ..

ಘಟನಾ ಸ್ಥಳಕ್ಕೆ ಶಾಸಕ ಮಂಥರ್​ಗೌಡ ಭೇಟಿ, ಪರಿಶೀಲನೆ

ಸಂದೀಪ್ ಹುಡುಕುವ ಕಾರ್ಯಾಚರಣೆಗೆ ಅಗ್ನಿಶಾಮಕ ತಂಡದ ಜೊತೆ ದುಬಾರಿಯಿಂದ ರಾಫ್ಟಿಂಗ್ ಪರಿಣಿತರನ್ನು ಕರೆಸಿಕೊಳ್ಳಲಾಯ್ತು.. ನಿನ್ನೆ ತಡರಾತ್ರಿ ಆಗಿದ್ದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದು ಇವತ್ತು ಬೆಳಗ್ಗೆ 8 ಗಂಟೆಯಿಂದ ಮತ್ತೆ ಕಾರ್ಯಾಚರಣೆ ಆರಂಭ ಆಗಲಿದೆ.. ನಿನ್ನೆ ಸ್ಥಳಕ್ಕೆ ಭೇಟಿ ನೀಡಿದ ಮಡಿಕೇರಿ ಶಾಸಕ ಮಂಥರ್​ಗೌಡ ಈ ದುರಂತ ಬೇಸರ ತರಿಸಿದೆ.. ಇಂತಹ ಘಟನೆಗಳು ನಡೆಯದಂತೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.

ಸ್ಮಾರ್ಟ್​​ಫೋನ್ ಯುಗದಲ್ಲಿ ಸೆಲ್ಫಿ ಗೀಳು ಸಿಕ್ಕಾಪಟ್ಟೆ ಜಾಸ್ತಿಯಾಗಿದೆ.. ಸೆಲ್ಫಿ, ಫೋಟೋ, ವಿಡಿಯೋ, ರೀಲ್ಸ್ ಮಾಡಲು ಹೋಗಿ ಹಲವರು ಅಪಾಯವನ್ನು ಮೈಮೇಲೆ ಎಳೆದುಕೊಳ್ತಿದ್ದಾರೆ.. ಪ್ರವಾಸಿ ತಾಣಗಳಲ್ಲಿ ಸೂಕ್ತ ಭದ್ರತೆ ಒದಗಿಸುವ ಕಾರ್ಯವನ್ನು ಕಟ್ಟುನಿಟ್ಟಾಗಿ ಮಾಡಬೇಕಿದೆ.. ಇನ್ನು ಪ್ರವಾಸಿಗರೂ ಕೂಡ ಪ್ರವಾಸಿ ತಾಣಗಳ ಅಪಾಯದ ಬಗ್ಗೆ ಅರಿತು ವರ್ತಿಸಬೇಕಿದೆ.. ಅಪಾಯ ಇರುವ ಸ್ಥಳಗಳಲ್ಲಿ ಎಚ್ಚರಿಕೆಯಿಂದ ಇರಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೆಲ್ಫಿ ಹುಚ್ಚು.. ನೀರಿನಲ್ಲಿ ಕೊಚ್ಚಿ ಹೋದ ಬೆಂಗಳೂರಿನ ಪ್ರವಾಸಿಗ ಇನ್ನೂ ಪತ್ತೆ ಆಗಿಲ್ಲ..

https://newsfirstlive.com/wp-content/uploads/2023/08/SELFIEE.jpg

Load More