/newsfirstlive-kannada/media/post_attachments/wp-content/uploads/2024/12/RAIN-1.jpg)
ಬೆಂಗಳೂರು: ಫೆಂಗಲ್ ಎಫೆಕ್ಟ್ನಿಂದ ಆಚೆ ಬರುವ ಮುನ್ನವೇ ರಾಜ್ಯದ ಜನರಿಗೆ ಮತ್ತೊಂದು ಸೈಕ್ಲೋನ್ ಎದುರಾಗಿದೆ. ಪರಿಣಾಮ ಬೆಂಗಳೂರಿನಲ್ಲೂ ಇಂದು ಮತ್ತು ನಾಳೆ ಮಳೆಯ ವಾತವಾರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ದಕ್ಷಿಣ ಒಳನಾಡು ಸೇರಿದಂತೆ ಹಲವೆಡೆ ಮತ್ತೆ ಮಳೆ ಆರಂಭ ಆಗಿದೆ. 10 ದಿನದ ಅಂತರದಲ್ಲಿ ಬಂಗಾಳ ಕೊಲ್ಲಿಯಲ್ಲಿ ಮತ್ತೊಮ್ಮೆ ವಾಯಭಾರ ಕುಸಿತ ಸಂಭವಿಸಿದೆ. ಹೀಗಾಗಿ ಮತ್ತೆರಡು ದಿನ ಬೆಂಗಳೂರು ಥಂಡಾ ಥಂಡಾ ಕೂಲ್ ಕೂಲ್ ಆಗಿರಲಿದೆ.
ಇದನ್ನೂ ಓದಿ:10 ವರ್ಷದ ಹಿಂದಿನ ರಹಸ್ಯ ಬಯಲು.. ಈತ ಮಾಡಿದ್ದೆಲ್ಲವೂ ಪ್ರೇಯಸಿಗಾಗಿ..!
ಇನ್ನು ದಕ್ಷಿಣ ಒಳನಾಡಿನಲ್ಲಿ ಮಳೆಯ ವಾತಾವರಣ ಇದ್ದರೆ, ಮಲೆನಾಡಿನಲ್ಲಿ ಚಳಿ ಹೆಚ್ಚಳ ಸಾಧ್ಯತೆ ಇದೆ. ಡಿಸೆಂಬರ್ ಕಳೆದರೂ ರಾಜ್ಯದಲ್ಲಿ ಮಳೆ ಅಬ್ಬರ ಕಡಿಮೆಯಾಗಿಲ್ಲ. ಇನ್ನೆರೆಡು ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕೊಡಗು, ತುಮಕೂರು, ಚಿಕ್ಕಮಗಳೂರು, ಮೈಸೂರು, ಹಾಸನ, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಮಳೆ ಆಗಲಿದೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಸೂಚನೆ ನೀಡಿದೆ.
ಇದನ್ನೂ ಓದಿ:ಬೆಳಗಾವಿಯಲ್ಲಿ ಬಿಜೆಪಿ ಯುವ ಮುಖಂಡ ಅರೆಸ್ಟ್.. ಗಂಭೀರ ಆರೋಪ ಏನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ