ರಾಕಿ ಭಾಯ್​​​ಗೆ ಸವಾಲೆಸೆದ ಪ್ರಭಾಸ್​! ‘ಟಾಕ್ಸಿಕ್’ ಸಿನಿಮಾಗೆ ‘ದಿ ರಾಜಾಸಾಬ್’ ಫೈಟ್​​

author-image
AS Harshith
Updated On
ರಾಕಿ ಭಾಯ್​​​ಗೆ ಸವಾಲೆಸೆದ ಪ್ರಭಾಸ್​! ‘ಟಾಕ್ಸಿಕ್’ ಸಿನಿಮಾಗೆ ‘ದಿ ರಾಜಾಸಾಬ್’ ಫೈಟ್​​
Advertisment
  • ಒಂದೇ ದಿನ ಎರಡು ಸ್ಟಾರ್​ ನಟರ ಸಿನಿಮಾ ರಿಲೀಸ್​​!
  • ಬಾಕ್ಸ್​ ಆಫೀಸ್​ ಕ್ಲಾಶ್​​​.. ಯಶ್​ಗೆ ಡಾರ್ಲಿಂಗ್​​ ಪ್ರಭಾಸ್​​ ಸವಾಲು
  • ಗೀತು ಮೋಹನ್​​ದಾಸ್​​ ನಿರ್ದೇಶನದ ‘ಟಾಕ್ಸಿಕ್​’ ಸಿನಿಮಾ.. ರಿಲೀಸ್​ ಯಾವಾಗ?

ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಸಿನಿಮಾದಲ್ಲಿ ನಟಿಸುತ್ತಿರೋ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಈಗಾಗಲೇ ಈ ಸಿನಿಮಾದ ಶೂಟಿಂಗ್ ಶುರುವಾಗಿದೆ. ರಿಲೀಸ್ ಆಗೋ ದಿನಾಂಕವನ್ನೂ ಅನೌನ್ಸ್ ಮಾಡಲಾಗಿದೆ.

ಅಂದಹಾಗೆಯೇ ಮುಂದಿನ ವರ್ಷ ಏಪ್ರಿಲ್ 10 ರಂದು ‘ಟಾಕ್ಸಿಕ್’​ ವಿಶ್ವದಾದ್ಯಂತ ಬಿಡುಗಡೆಗೆ ಮಾಡುವ ಪ್ಲಾನ್ ಮಾಡಲಾಗಿದೆ. ಆದರೆ ಇದರ ಮಧ್ಯೆ ಡಾರ್ಲಿಂಗ್​ ಪ್ರಭಾಸ್ ನಟನೆಯ ‘ದಿ ರಾಜಾಸಾಬ್’ ಟೀಂ ಕೂಡ ಅಂದೇ ಬಿಡುಗಡೆ ಮಾಡ್ತೀವಿ ಅಂತಾ ಅನೌನ್ಸ್ ಮಾಡಿದೆ.

publive-image

ಇದನ್ನೂ ಓದಿ: ಹೊಸ ಲುಕ್​​ನಲ್ಲಿ ಬಿಗ್​ಬಾಸ್​ ಸಿರಿ ಲಕಲಕ.. ಏನ್ರಿ ಮೇಡಂ ಸ್ಟನ್ ಆಗಿಬಿಟ್ಟೆ ಎಂದ ಫ್ಯಾನ್ಸ್​..!

ಹೌದು. ‘ಟಾಕ್ಸಿಕ್’ ಮತ್ತು ‘ದಿ ರಾಜಾಸಾಬ್’ ಸಿನಿಮಾ ​ಒಂದೇ ದಿನ ರಿಲೀಸ್ ಆಗಲಿದೆ. ಇಬ್ಬರು ಸ್ಟಾರ್​ ನಟರ ಸಿನಿಮಾ ಏಪ್ರಿಲ್​ 10 ರಂದು ರಿಲೀಸ್​ ಆದರೆ ದೊಡ್ಡ ಕ್ಲ್ಯಾಶ್ ಆಗಲಿದೆ. ಮಾತ್ರವಲ್ಲದೆ, ಅಷ್ಟೇ ಕುತೂಹಲ ಕೂಡ ಕೆರಳಿಸಲಿದೆ. ಅದರಲ್ಲೂ ಕೆಜಿಎಫ್​ ಬಳಿಕ ಯಶ್​​ ‘ಟಾಕ್ಸಿಕ್’ ನಟಿಸುತ್ತಿದ್ದಾರೆ. ಬಹು ನಿರೀಕ್ಷೆಯ ಸಿನಿಮಾ ಇದಾಗಿದೆ.

ಇದನ್ನೂ ಓದಿ: 40, 50 ಅಲ್ಲ.. ವಯನಾಡ್‌ನಲ್ಲಿ ಸಾವಿನ ಸಂಖ್ಯೆ ಭಾರೀ ಏರಿಕೆ; ಸ್ಫೋಟಕ ಮಾಹಿತಿ ಬಿಚ್ಚಿಟ್ಟ ರಾಹುಲ್ ಗಾಂಧಿ

ಅತ್ತ ಪ್ರಭಾಸ್​​ ಬಾಹುಬಲಿಯಂತ ಹಿಟ್​ ಸಿನಿಮಾ ಕೊಟ್ಟ ಬಳಿಕ 5 ಸಿನಿಮಾ ಮಾಡಿದ್ದಾರೆ. 2017ರ ಬಳಿಕ ಸಾಹೋ, ರಾಧೆ, ಆದಿಪುರುಷ್​, ಸಲಾರ್​, ಕಲ್ಕಿ ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ ಈ ಸಿನಿಮಾಗಳು ಬಾಹುಬಲಿಯಷ್ಟು ಹಿಟ್​​ ಕೊಟ್ಟಿಲ್ಲ. ಇದೀಗ ಸಲಾರ್​ ಬಳಿಕ ‘ದಿ ರಾಜಾಸಾಬ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

publive-image

ಇದನ್ನೂ ಓದಿ: VIDEO: ಕಾಳಿ ನದಿಗೆ ಹಾರಿ ಬದುಕು ಮುಗಿಸಿದ ಮಹಿಳೆ.. ರಕ್ಷಿಸಲು ಮುಂದಾದಂತೆ ನೀರಿಗೆ ಜಿಗಿದಳು

ರಾಕಿ ಭಾಯ್ ನಟನೆಯ ಕೆಜಿಎಫ್​ 2  ಸಿನಿಮಾ ರಿಲೀಸ್​​ ಆಗಿ ಎರಡು ವರ್ಷವಾಗಿದೆ. ಸದ್ಯ ಯಶ್​ ಫೋಕಸ್​ ‘ಟಾಕ್ಸಿಕ್​’ ಸಿನಿಮಾ ಮೇಲಿದೆ. ಈ ಸಿನಿಮಾವನ್ನು ಗೀತು ಮೋಹನ್​​ದಾಸ್​​ ನಿರ್ದೇಶಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment