/newsfirstlive-kannada/media/post_attachments/wp-content/uploads/2025/05/CTR_CAR_ACCIDENT_NEW.jpg)
ಚಿತ್ರದುರ್ಗ: ಟ್ರ್ಯಾಕ್ಟರ್ಗೆ ಭಯಾನಕವಾಗಿ ಕಾರೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ 11 ತಿಂಗಳ ಗಂಡು ಮಗು ಹಾಗೂ 2 ವರ್ಷದ ಹೆಣ್ಣು ಮಗು ಸೇರಿ ನಾಲ್ವರು ಉಸಿರು ಚೆಲ್ಲಿದ್ದಾರೆ. ಹೊಳಲ್ಕೆರೆ ತಾಲೂಕಿನ ಶಿವಗಂಗಾ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದೆ.
ಅರೇಹಳ್ಳಿ ಗ್ರಾಮದ ಗಂಗಮ್ಮ (60), ಸೊಸೆ ಕಾವ್ಯ (30), ಹನ್ಸಿಕಾ (2) ಹಾಗೂ 11 ತಿಂಗಳ ಗಂಡು ಮಗು ಘಟನೆಯಲ್ಲಿ ಕಣ್ಮುಚ್ಚಿದ್ದಾರೆ. ಕಾರು ಚಾಲನೆ ಮಾಡುತ್ತಿದ್ದ ಗಂಗಮ್ಮ ಅವರ ಮಗ ಯಶವಂತ್ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ:ಆರೋಗ್ಯದ ಬಗ್ಗೆ ಸಿಂಗರ್ ಅರ್ಚನಾ ಉಡುಪ ಸ್ಪಷ್ಟನೆ.. ಕ್ಯಾನ್ಸರ್ ಬಗ್ಗೆ ಹೇಳಿದ್ದೇನು?
ಟ್ರ್ಯಾಕ್ಟರ್ ಹೊಳಲ್ಕೆರೆ ಕಡೆಗೆ ಚಲಿಸುತ್ತಿತ್ತು. ಈ ವೇಳೆ ಚಿತ್ರಹಳ್ಳಿ ಶಿವಗಂಗಾ ಪೆಟ್ರೋಲ್ ಬಂಕ್ ಬಳಿ ಹಿಂದೆಯಿಂದ ವೇಗವಾಗಿ ಬಂದ ಕಾರು, ಟ್ರ್ಯಾಕ್ಟರ್ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಈ ಟ್ರ್ಯಾಕ್ಟರ್ಗೆ ಯಾವುದೇ ರಿಪ್ಲೆಕ್ಟರ್ ಇರಲಿಲ್ಲ. ಇದರಿಂದ ಕಾರು ಚಾಲನೆ ಮಾಡುತ್ತಿದ್ದ ಯಶವಂತ್ಗೆ ಏನೂ ಕಾಣಿಸದೇ ಡಿಕ್ಕಿ ಹೊಡೆದಿದ್ದಾನೆ. ಈ ಕುರಿತು ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ