/newsfirstlive-kannada/media/post_attachments/wp-content/uploads/2025/07/Sanju-smson.jpg)
IPL ಸೀಸನ್ 18ರ ಅಂತ್ಯವಾಗಿ ತಿಂಗಳು ಉರುಳೋಕೆ ಮುನ್ನವೇ ಮುಂದಿನ ಸೀಸನ್ನ ಸಿದ್ಧತೆ ಶುರುವಾಗಿದೆ. ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗಳಲ್ಲಂತೂ ಬಿರುಸಿನ ಚಟುವಟಿಕೆಗಳು ನಡೀತಿವೆ. ಈ ಸೀಸನ್ನಲ್ಲಿ ಹೀನಾಯ ಪರ್ಫಾಮೆನ್ಸ್ ನೀಡಿದ ಚೆನ್ನೈ ತಂಡ ಬಲಿಷ್ಠ ತಂಡ ಕಟ್ಟೋಕೆ ಹೊಸ ಪ್ಲಾನ್ ರೆಡಿಮಾಡಿದೆ. ನಾಯಕನನ್ನೆ ತ್ಯಾಗ ಮಾಡಲು ಯೆಲ್ಲೋ ಆರ್ಮಿ ಹೊರಟಿದೆ.
ಮುಂದಿನ ಸೀಸನ್ಗೆ ಬಲಿಷ್ಠ ತಂಡ ಕಟ್ಟೋಕೆ ಈಗಾಗಲೇ ಸಿದ್ಧತೆ ಆರಂಭಿಸಿರೋ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕಣ್ಣು ಸಂಜು ಸ್ಯಾಮ್ಸನ್ ಮೇಲೆ ಬಿದ್ದಿದೆ. ಸಂಜು ಕರೆತರೋಕೆ ಎಷ್ಟರಮಟ್ಟಿಗೆ ಸಿದ್ಧತೆ ನಡೆದಿದೆ ಅಂದ್ರೆ, ಎಂಥಾ ತ್ಯಾಗಕ್ಕಾದ್ರೂ ಚೆನ್ನೈ ಫ್ರಾಂಚೈಸಿ ರೆಡಿಯಾಗಿದೆ. ಒಬ್ಬ ಸಂಜು ಸ್ಯಾಮ್ಸನ್ಗಾಗಿ ಇಬ್ಬರು ಆಟಗಾರರನ್ನ ನೀಡುವ ಪ್ರಸ್ತಾವವನ್ನ ಈಗಾಗಲೇ ಚೆನ್ನೈ ಇಟ್ಟಿದೆ. ಶಿವಂ ದುಬೆ, ಆರ್.ಅಶ್ವಿನ್ನ ಬಿಟ್ಟುಕೊಡೋಕೆ ರೆಡಿಯಾಗಿರೋದು ಹಳೇ ಸುದ್ದಿ. ಇದೀಗ ಪ್ಲಾನ್ ಬಿ ಕೂಡ ರೆಡಿಯಾಗಿದೆ.
ಇದನ್ನೂ ಓದಿ: 25 ಕೋಟಿ ಕಾರ್ಮಿಕರು, ರೈತರಿಂದ ಆಕ್ರೋಶ! ಭಾರತ್ ಬಂದ್ನಲ್ಲಿ ಏನಿರುತ್ತೆ, ಏನಿರಲ್ಲ..?
ಸಿಎಸ್ಕೆ ಫ್ರಾಂಚೈಸಿಯಿಂದ ಹೊರ ಬಿತ್ತು ಶಾಕಿಂಗ್ ಸುದ್ದಿ
ಒಂದು ವೇಳೆ ಅಶ್ವಿನ್, ದುಬೆಯನ್ನ ಬಿಟ್ಟು ಕೊಡೋ ಪ್ಲಾನ್ ಎ ವರ್ಕೌಟ್ ಆಗಲಿಲ್ಲ ಅಂದ್ರೆ ಪ್ಯಾನ್-ಬಿ ಕೂಡ ರೆಡಿಯಾಗಿದೆ. ಸಿಎಸ್ಕೆ ಫ್ರಾಂಚೈಸಿ ಮಾಡಿರುವ ಪ್ಲಾನ್ ಬಿ ಅಭಿಮಾನಿಗಳಲ್ಲಿ ಅಚ್ಚರಿ ತರಿಸದೇ ಇರಲ್ಲ. ಸಂಜು ಸ್ಯಾಮ್ಸನ್ಗಾಗಿ ತಂಡದ ಹಾಲಿ ನಾಯಕ ಋತುರಾಜ್ ಗಾಯಕ್ವಾಡ್ನೇ ಬಿಟ್ಟು ಕೊಡೋಕೆ ಚೆನ್ನೈ ತಂಡ ರೆಡಿಯಾಗಿದೆ.
ಋತುರಾಜ್ ಟ್ರೇಡ್ಗೆ ಮುಂದಾಗಿದ್ದೇಕೆ ಚೆನ್ನೈ ತಂಡ?
ಋತುರಾಜ್ ಗಾಯಕ್ವಾಡ್ ಚೆನ್ನೈ ಫ್ರಾಂಚೈಸಿ ಇದೀಗ ಧೋನಿಯ ಉತ್ತರಾಧಿಕಾರಿ ಎಂದೇ ಬಿಂಬಿಸಿತ್ತು. ಇದೀಗ ನೋಡಿದ್ರೆ ನಾಯಕನನ್ನೇ ತ್ಯಾಗ ಮಾಡಲು ಹೊರಟಿದೆ. ತಂಡದ ಮುಂದಿನ ಭವಿಷ್ಯದ ದೃಷ್ಟಿಯಿಂದ ಋತುರಾಜ್ ಗಾಯಕ್ವಾಡ್ನ ಟ್ರೇಡ್ ಮಾಡಿ ಸಂಜು ಸ್ಯಾಮ್ಸನ್ನ ಕರೆ ತರೋಕೆ ದೃಢ ನಿರ್ಧಾರ ಮಾಡಿದೆ. ಇಬ್ಬರ ಪ್ರೈಸ್ 18 ಕೋಟಿಯಾಗಿದ್ದು ಹಣಕಾಸಿನ ಲೆಕ್ಕಾಚಾರದಲ್ಲೂ ಪರ್ಫೆಕ್ಟ್ ಮ್ಯಾಚ್ ಆಗುತ್ತೆ.
ಋತುರಾಜ್ ತ್ಯಾಗಕ್ಕೆ ಮುಂದಾಗಿದ್ದೇಕೆ?
- ಋತುರಾಜ್ ಕ್ಯಾಪ್ಟನ್ಶಿಪ್ ಎಫೆಕ್ಟಿವ್ ಇಲ್ಲ
- T20 ಕ್ರಿಕೆಟ್ಗೆ ಬೇಕಾದ ಅಗ್ರೆಶನ್ ಇಲ್ಲ
- ಅಪ್ರೋಚ್ ಸಪ್ಪೆ, ಟ್ಯಾಕ್ಟಿಕ್ಸ್ ಹೇಳಿಕೊಳ್ಳುವಂತಿಲ್ಲ
- ಧೋನಿ ಉತ್ತರಾಧಿಕಾರಿಯಾಗಲು ಸಮರ್ಥ ಅನಿಸಿಲ್ಲ
- ಕನ್ಸಿಸ್ಟೆನ್ಸಿ ಕಾಟ. ಪ್ಲೇಯರ್ಸ್ ಫ್ರೆಂಡ್ಲಿ ಕ್ಯಾಪ್ಟನ್ ಅಲ್ಲ
ಸೂಪರ್ ಕಿಂಗ್ಸ್ನ ಪ್ಲಾನ್-ಸಿ ಮತ್ತಷ್ಟು ಸೂಪರ್
ಪ್ಲ್ಯಾನ್ ಬಿ ಅಡಿಯಲ್ಲಿ ಋತುರಾಜ್ ಕೊಟ್ಟು ಸಂಜುವನ್ನ ಟ್ರೇಡ್ ಮಾಡಲು ಹೊರಟಿರೋ ಚೆನ್ನೈ ಮತ್ತೊಂದು ಬ್ಯಾಕ್ಅಪ್ ಪ್ಲ್ಯಾನ್ ಮಾಡಿದೆ. ಅಸಲಿಗೆ ಚೆನ್ನೈಗೆ ಬೇಕಾಗಿರೋದು ಒಬ್ಬ ಒಳ್ಳೆ ವಿಕೆಟ್ ಕೀಪರ್. ವಿಕೆಟ್ ಕೀಪರ್ಗೆ ಗಾಳ ಹಾಕಲು ಪ್ಲಾನ್ ಸಿ ಕೂಡ ರೆಡಿಯಾಗಿದೆ.
ಇದನ್ನೂ ಓದಿ: ಇವತ್ತು ಭಾರತ್ ಬಂದ್.. ಕಾರ್ಮಿಕ ಸಂಘಟನೆಗಳ ಡಿಮ್ಯಾಂಡ್ ಏನೇನು..?
ಚೆನ್ನೈನ ಪ್ಲ್ಯಾನ್-ಸಿ ಏನು?
ಧೋನಿ ಯಾವ ಕ್ಷಣದಲ್ಲಿ ನಿವೃತ್ತಿ ಹೇಳ್ತಾರೆ ಅನ್ನೋದನ್ನ ಹೇಳೋಕಾಗಲ್ಲ. ಹೀಗಾಗಿ ಚೆನ್ನೈ ಫ್ರಾಂಚೈಸಿ ಒಬ್ಬ ಸಮರ್ಥ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಹುಡುಕಾಟದಲ್ಲಿದೆ. ಒಂದು ವೇಳೆ ಸ್ಯಾಮ್ಸನ್ ಟ್ರೇಡಿಂಗ್ ಪ್ಲಾನ್ ಫೇಲ್ ಆದ್ರೆ ಮತ್ತೊಂದು ಆಪ್ಶನ್ ರೆಡಿಯಿದೆ. ರಾಜಸ್ಥಾನ್ ತಂಡದಲ್ಲಿರೋ ದೃವ್ ಜುರೇಲ್ ವರ್ಗಾವಣೆಯ ಬಗ್ಗೆ ಚರ್ಚೆ ನಡೆದಿದೆ. ಜುರೇಲ್ ಒಬ್ಬ ಒಳ್ಳೆ ವಿಕೆಟ್ ಕೀಪರ್ ಮಾತ್ರವಲ್ಲ. ಟಿ20 ಕ್ರಿಕೆಟ್ಗೆ ಹೇಳಿ ಮಾಡಿಸಿದ ಬ್ಯಾಟ್ಸ್ಮನ್. ವಯಸ್ಸು ಇನ್ನೂ 24 ಆಗಿರೋದ್ರಿಂದ ಭವಿಷ್ಯದ ಆಟಗಾರ. ಹಲ ವರ್ಷಗಳ ಕಾಲ ತಂಡದಲ್ಲಿ ಇರಬಲ್ಲರು.
ರಾಜಸ್ಥಾನ್ ಫ್ರಾಂಚೈಸಿಯಲ್ಲಿ ಏನ್ ನಡೀತಿದೆ?
ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯಲ್ಲೂ ಚಟುವಟಿಕೆಗಳು ಗರಿಗೆದರಿವೆ. ಲಂಡನ್ನಲ್ಲಿ ಈಗಾಗಲೇ ಒಂದು ರೌಂಡ್ ಮೀಟಿಂಗ್ ಮಾಡಿ ರಾಹುಲ್ ದ್ರಾವಿಡ್ ಹಾಗೂ ಫ್ರಾಂಚೈಸಿಯ ಮ್ಯಾನೇಜ್ಮೆಂಟ್ ಚರ್ಚೆ ನಡೆಸಿದ್ದಾರೆ. ಟ್ರೇಡಿಂಗ್ನಲ್ಲಿ ಯಾರನ್ನ ಕೊಟ್ಟು, ಯಾರನ್ನ ತೆಗೆದುಕೊಳ್ಳ ಬೇಕು ಎಂಬ ಚರ್ಚೆ ನಡೆದಿದೆ. ಈ ವೇಳೆ ಸಂಜು ಸ್ಯಾಮ್ಸನ್ ಚೆನ್ನೈಗೆ ಹೋಗಲು ಆಸಕ್ತಿ ಹೊಂದಿರೋ ಬಿಗ್ ಅಪ್ಡೇಟ್ ಸಿಕ್ಕಿದೆ. ಸಂಜುವಿನ ಈ ನಿರ್ಧಾರದ ಹಿಂದೆ ನೇಮ್ ಅಂಡ್ ಫೇಮ್ನ ಲೆಕ್ಕಾಚಾರವಿದೆ.
ಸಂಜುಗೆ ಆಸಕ್ತಿ ಯಾಕೆ..?
ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ನ ಮೋಸ್ಟ್ ಸಕ್ಸಸ್ಫುಲ್ ಫ್ರಾಂಚೈಸಿ. 5 ಟ್ರೋಫಿ ಗೆದ್ದಿರೋ ತಂಡದ ಪರ ಮಿಂಚಿದ್ರೆ ಎಲ್ಲರೂ ಗಮನಿಸ್ತಾರೆ. ಸೌತ್ ಇಂಡಿಯಾದ ಫ್ರಾಂಚೈಯಿಯಾಗಿರೋದ್ರಿಂದ ಭಾಷೆ, ಕಲ್ಚರ್ ಎಲ್ಲಾ ಗೊತ್ತು ಹೊಂದಾಣಿಕೆ ಸುಲಭವಾಗುತ್ತೆ. ಹೆಚ್ಚಿನ ಮನ್ನಣೆಯೂ ಸಿಗೋ ನಿರೀಕ್ಷೆಯಿದೆ. ಪಕ್ಕದ ರಾಜ್ಯದ ಆಟಗಾರ ಆಗಿರೋದ್ರಿಂದ ಫ್ಯಾನ್ಸ್ಗೆ ಬೇಗ ಒಪ್ಪಿಕೊಳ್ಳಲಿದ್ದಾರೆ. ವೈಯಕ್ತಿಕವಾಗಿಯೂ ಫ್ಯಾನ್ ಬೇಸ್ ಹೆಚ್ಚಾಗಲಿದೆ.
ಇದನ್ನೂ ಓದಿ: ಅತಿಯಾಗಿ ಮೊಬೈಲ್ ಬಳಸುವ ಮುನ್ನ ಎಚ್ಚರ.. ಆರೋಗ್ಯಕ್ಕೆ ಅಪಾಯ ಗ್ಯಾರಂಟಿ..!
ಸಂಜುವಿನಂತೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕೂಡ ಜನಪ್ರೀಯತೆಯ ಲೆಕ್ಕಾಚಾರ ಹಾಕಿದೆ. ಧೋನಿ ತಂಡದಿಂದ ದೂರಾದ್ರೆ ಕ್ರೌಡ್ಫುಲ್ ಮಾಡೋ ಸಾಮರ್ಥ್ಯ ಋತುರಾಜ್ಗಿಲ್ಲ ಅನ್ನೋದು ಚೆನ್ನೈ ತಂಡಕ್ಕೆ ಈಗಾಗಲೇ ಗೊತ್ತಾಗಿದೆ. ಪಕ್ಕದ ರಾಜ್ಯದ ಆಟಗಾರನಾಗಿರೋದ್ರಿಂದ ಸಂಜುವನ್ನ ಕರೆ ತಂದ್ರೆ ಫ್ಯಾನ್ಸ್ ಬೇಗ ಒಪ್ಪಿಕೊಳ್ತಾರೆ ಅನ್ನೋ ನಿರೀಕ್ಷೆ ಚೆನ್ನೈ ಫ್ರಾಂಚೈಸಿಯಲ್ಲೂ ಇದೆ. ಸಮರ್ಥ ವಿಕೆಟ್ ಕೀಪರ್, ಕ್ಯಾಪ್ಟನ್ ಎಲ್ಲವೂ ತಂಡಕ್ಕೆ ಸಿಕ್ಕಂತಾಗುತ್ತೆ. ಹೀಗಾಗಿಯೇ ಕಂಪ್ಲೀಟ್ ಪ್ಯಾಕೇಜ್ ಸಂಜು ಖರೀದಿಗೆ ಕಸರತ್ತು ನಡೆಸ್ತಿದೆ. ಅಂತಿಮವಾಗಿ ಏನಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ಇದನ್ನೂ ಓದಿ: ಪರಾರಿ ಆಗಿರುವ ಉಗ್ರನ ತಾಯಿಯೂ ಅರೆಸ್ಟ್.. ಬೆಂಗಳೂರಲ್ಲಿ ಉಗ್ರರ ಜೈಲು ಜಾಲ ಹೇಗೆ ನಡೀತಿತ್ತು..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ