/newsfirstlive-kannada/media/post_attachments/wp-content/uploads/2025/06/Traffic-lesson-on-students.jpg)
ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನೋ ಹಾಗೆ ಭಾರತದ ಭವಿಷ್ಯ ರೂಪಿಸೋ ಮಕ್ಕಳಿಗೆ ಬಾಲ್ಯದಿಂದಲೇ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಲು ಶಿಕ್ಷಣ ಇಲಾಖೆ ಪ್ಲಾನ್ ಮಾಡಿದೆ. ಪ್ರಾಥಮಿಕ ಶಿಕ್ಷಣದಲ್ಲೇ ಸಂಚಾರಿ ಸಂದೇಶಗಳನ್ನ ಮಕ್ಕಳ ಮುಂದಿಟ್ಟು ಸುಖಕರ ಪ್ರಯಾಣದ ಸಂದೇಶ ಸಾರಲು ಸಜ್ಜಾಗಿದೆ.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ದೇಶದ ಮುಂದಿನ ಭವಿಷ್ಯ ನಿರ್ಧಾರ ಮಾಡೋದು ಇಂದಿನ ಈ ಪುಟ್ಟಾಣಿ ಮಕ್ಕಳೇ. ಹೀಗಾಗಿ ಶಿಕ್ಷಣದ ರೂಪದಲ್ಲೇ ಮಕ್ಕಳಿಗೆ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಲು ರಾಜ್ಯ ಶಿಕ್ಷಣ ಇಲಾಖೆ ಪ್ಲಾನ್ ಮಾಡಿದೆ.
ಇನ್ಮುಂದೆ ಪಠ್ಯಪುಸ್ತಕದಲ್ಲಿ ಇರುತ್ತೆ ಟ್ರಾಫಿಕ್ ಬಗ್ಗೆ ಪಾಠ
ಸಂಚಾರ ನಿಯಮ ಉಲ್ಲಂಘನೆ ಮತ್ತು ಅಪಘಾತ ಪ್ರಕರಣಗಳು ಹೆಚ್ಚುತ್ತಿರೋ ಹಿನ್ನೆಲೆ ಶಾಲಾ ಹಂತದಲ್ಲೇ ಮಕ್ಕಳಲ್ಲಿ ಸಂಚಾರ ವ್ಯವಸ್ಥೆ ಮತ್ತು ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಈ ಸಂಬಂಧ ಪೊಲೀಸ್​ ಇಲಾಖೆಯೇ ಪಠ್ಯಕ್ರಮ ಸಿದ್ಧಪಡಿಸಿ ವಿವಿಧ ತರಗತಿಯ ಪಠ್ಯಕ್ರಮದಲ್ಲಿ ಅಳವಡಿಸಲು ಸಿದ್ಧತೆ ನಡೆಸಿದೆ.
ಮಕ್ಕಳಿಗೆ ‘ಟ್ರಾಫಿಕ್’ ಪಾಠದ ಪ್ಲಾನ್ ಏನು?
2, 4, 6, 7, 9ನೇ ತರಗತಿ ಮಕ್ಕಳಿಗೆ ಸಂಚಾರ ಸುರಕ್ಷತೆ ಪಠ್ಯ ಅವಳಿಸಲು ನಿರ್ಧರಿಸಲಾಗಿದೆ.. ಟ್ರಾಫಿಕ್ ಪೊಲೀಸರಿಂದ ಸಿದ್ಧಪಡಿಸಿರುವ ಪಠ್ಯವನ್ನ 2025-26ನೇ ಸಾಲಿನ ಪಠ್ಯ ಕ್ರಮದಲ್ಲಿ ಅಳವಡಿಸಲು ಶಿಕ್ಷಣೆ ಇಲಾಖೆ ಮುಂದಾಗಿದೆ. ಟ್ರಾಫಿಕ್ ಲೈಟ್, ಟ್ರಾವೆಲ್, ವೈಯಕ್ತಿಕ ಸುರಕ್ಷತೆ, ರೋಡ್ ಸೆಫ್ಟಿ, ‘ಸಡಕ್ ಕೀ ರಕ್ಷಾ ಸಬ್ ಕೀ ಸುರಾಕ್ಷಾ’ ಅಧ್ಯಯಗಳು ಅಳವಡಿಕೆಯಾಗಲಿವೆ. ಪಠ್ಯ ರಚನೆ ಅಥವಾ ಪರಿಷ್ಕರಣೆ ವೇಳೆ ಸಮಿತಿ ಅಧ್ಯಕ್ಷರ ಗಮನಕ್ಕೆ ತಂದು ಮುಂದಿನ ಕ್ರಮ.
ಇದನ್ನೂ ಓದಿ: 11 ಕುಟುಂಬಸ್ಥರ ನೋವು ಕೇಳಲು ಮುಂದಾದ ತನಿಖಾಧಿಕಾರಿ; ಹೇಳಿಕೆ ದಾಖಲಿಸಲು ಡೇಟ್ ಫಿಕ್ಸ್!
ದಿನೇ ದಿನೇ ಹೆಚ್ಚಾಗ್ತಿರೋ ಟ್ರಾಫಿಕ್ ರೂಲ್ಸ್​ ಉಲ್ಲಂಘನೆ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸರು ಇಂತದೊಂದು ಪ್ಲಾನ್​ ರೂಪಿಸಿದ್ದು ನಿಜಕ್ಕೂ ಮೆಚ್ಚುವಂತದ್ದಾಗಿದೆ. ಆದ್ರೆ ಅದನ್ನ ಕಲಿತು, ಅರಿತು ಅದರಂತೆ ನಡೆದು ಸ್ವಾಸ್ಥ್ಯ ಸಮಾಜಕ್ಕೆ ಶ್ರಮಿಸೋದು ಮಕ್ಕಳ ಜವಾಬ್ದಾರಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ