ಹೆಚ್ಚು ಸದ್ದು-ಗದ್ದಲ ಇಲ್ಲದೇ ದುಬಾರಿ ಟ್ರಾಫಿಕ್ ರೂಲ್ಸ್​ ಜಾರಿ; ಮೊದಲಿಗಿಂತ 10 ಪಟ್ಟು ದಂಡ ಬೀಳಲಿದೆ..!

author-image
Ganesh
Updated On
ಹೆಚ್ಚು ಸದ್ದು-ಗದ್ದಲ ಇಲ್ಲದೇ ದುಬಾರಿ ಟ್ರಾಫಿಕ್ ರೂಲ್ಸ್​ ಜಾರಿ; ಮೊದಲಿಗಿಂತ 10 ಪಟ್ಟು ದಂಡ ಬೀಳಲಿದೆ..!
Advertisment
  • ವಾಹನ ಸವಾರರೇ ಎಚ್ಚರ ಎಚ್ಚರ, ಬೀಳುತ್ತೆ ಭಾರೀ ದಂಡ
  • ಹೆಲ್ಮೆಟ್ ಇಲ್ಲದೇ ಓಡಿಸಿದ್ರೆ 1000 ರೂಪಾಯಿ ಫೈನ್ ಕಟ್ಟಬೇಕು
  • ಡ್ರಂಕ್ ಅಂಡ್​ ಡ್ರೈವ್​ಗೆ 10 ಸಾವಿರ ದಂಡ, 6 ವರ್ಷ ಜೈಲು ಶಿಕ್ಷೆ

ದೇಶದಲ್ಲಿ ಹೆಚ್ಚು ಸದ್ದು ಗದ್ದಲವಿಲ್ಲದೆ ದುಬಾರಿ ಟ್ರಾಫಿಕ್ ದಂಡ ವಿಧಿಸುವ ನಿಯಮ ಜಾರಿಯಾಗಿದೆ. ಟ್ರಾಫಿಕ್ ನಿಯಮ ಉಲಂಘನೆಗೆ 10 ಪಟ್ಟು ಹೆಚ್ಚಿನ ದಂಡ ವಿಧಿಸುವ ಆದೇಶವನ್ನು ಸರ್ಕಾರ ಪಾಸ್ ಮಾಡಿದೆ. ಮಾರ್ಚ್ 1 ರಿಂದಲೇ ದುಬಾರಿ ದಂಡದ ನಿಯಮ ಜಾರಿಗೆ ಬಂದಿದೆ.

ಏನು ಹೇಳ್ತಿದೆ ನಿಯಮ..?

  1.  ಡ್ರಂಕ್ ಅಂಡ್ ಡ್ರೈವಿಂಗ್​ಗೆ 10 ಸಾವಿರ ರೂಪಾಯಿ ದಂಡ, 6 ತಿಂಗಳು ಜೈಲುಶಿಕ್ಷೆ ವಿಧಿಸಲು ಅವಕಾಶ ಇದೆ. ಈ ಮೊದಲು ಡ್ರಂಕ್ ಅಂಡ್ ಡ್ರೈವಿಂಗ್​ಗೆ 1 ಸಾವಿರ ರೂಪಾಯಿ ದಂಡ ಇತ್ತು. ಡ್ರಂಕ್ ಅಂಡ್ ಡ್ರೈವಿಂಗ್ ಪುನಾರಾವರ್ತನೆಯಾದರೆ 15 ಸಾವಿರ ರೂಪಾಯಿ ದಂಡ 2 ವರ್ಷ ಜೈಲುಶಿಕ್ಷೆ ವಿಧಿಸಲಾಗುತ್ತದೆ.
  2.  ಡ್ರೈವಿಂಗ್ ವೇಳೆ ಮೊಬೈಲ್ ಪೋನ್ ಬಳಕೆ ಮಾಡಿದರೆ 5 ಸಾವಿರ ರೂಪಾಯಿ ದಂಡ. ಹಿಂದೆ ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ ಮಾಡಿದರೆ 500 ರೂಪಾಯಿ ದಂಡ ವಿಧಿಸಲಾಗುತ್ತಿತ್ತು.
  3.  ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಿದರೆ ಒಂದು ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಅಲ್ಲದೇ 3 ತಿಂಗಳು ಕಾಲ ಡ್ರೈವಿಂಗ್ ಲೈಸೆನ್ಸ್ ಸಸ್ಪೆಂಡ್ ಕೂಡ ಮಾಡಬಹುದು. ಈ ಮೊದಲು ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಿದರೆ 100 ರೂಪಾಯಿ ದಂಡ ವಿಧಿಸಲಾಗುತ್ತಿತ್ತು. ಇನ್ನು ಕಾರಿನ ಸೀಟ್ ಬೆಲ್ಟ್ ಹಾಕದಿದ್ದರೆ ಒಂದು ಸಾವಿರ ರೂಪಾಯಿ ದಂಡ ವಿಧಿಸಲು ಸಾರಿಗೆ ಇಲಾಖೆ ಆದೇಶ ಮಾಡಿದೆ.
  4.  ವ್ಯಾಲಿಡ್ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸಿದರೆ 5 ಸಾವಿರ ರೂಪಾಯಿ ದಂಡ ಬೀಳಲಿದೆ.
  5.  ವಾಹನದ ಇನ್ಸೂರೆನ್ಸ್ ಇಲ್ಲದೇ ವಾಹನ ಚಲಾಯಿಸಿದರೇ 2 ಸಾವಿರ ರೂಪಾಯಿ ದಂಡ ಕಟ್ಟಬೇಕು
  6.  ಮಾಲಿನ್ಯ ಸರ್ಟಿಫಿಕೇಟ್ ಇಲ್ಲದೆ ವಾಹನ ಚಲಾಯಿಸಿದರೆ 10 ಸಾವಿರ ರೂಪಾಯಿ ದಂಡ ಹಾಗೂ 6 ತಿಂಗಳು ಜೈಲುಶಿಕ್ಷೆ, ಸಮುದಾಯ ಸೇವೆ
  7.  ಬೈಕ್​ನಲ್ಲಿ ಟ್ರಿಪಲ್ ರೈಡಿಂಗ್ ಮಾಡಿದರೆ ಒಂದು ಸಾವಿರ ರೂಪಾಯಿ ದಂಡ ಬೀಳಲಿದೆ
  8.  ನಿರ್ಲಕ್ಷ್ಯದ ಚಾಲನೆ ಮಾಡಿದರೆ 5 ಸಾವಿರ ರೂಪಾಯಿ ದಂಡ ಕಟ್ಟಬೇಕು
  9.  ಅಂಬ್ಯುಲೆನ್ಸ್​ಗೆ ರಸ್ತೆ ಬಿಡದೆ ವಾಹನ ಚಲಾಯಿಸಿದ 10 ಸಾವಿರ ರೂಪಾಯಿ ದಂಡ ಕಟ್ಟಬೇಕು
  10.  ಸಿಗ್ನಲ್ ಜಂಪ್ ಮಾಡಿದ್ರೆ 5 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ
  11.  ವಾಹನಗಳನ್ನು ಓವರ್ ಲೋಡ್ ಮಾಡಿ ಚಲಾಯಿಸಿದರೆ 20 ಸಾವಿರ ರೂಪಾಯಿ ದಂಡ
  12.  10-ಅಪ್ರಾಪ್ತರು ವಾಹನ ಚಲಾಯಿಸಿದರೆ 25 ಸಾವಿರ ರೂಪಾಯಿ ದಂಡ ಹಾಗೂ 3 ವರ್ಷ ಜೈಲುಶಿಕ್ಷೆ
  13.  ವಾಹನದ ನೋಂದಾಣಿ ಕೂಡ ರದ್ದು ಮಾಡಲಾಗುತ್ತದೆ. 25 ವರ್ಷ ಆಗುವವರೆಗೂ ಡ್ರೈವಿಂಗ್ ಲೈಸೆನ್ಸ್ ಸಿಗಲ್ಲ.

ಇದನ್ನೂ ಓದಿ: ಉಸಿರು ಬಿಗಿ ಹಿಡಿದು ಕೂತಿದ್ದ ಸುನೀತಾ ವಿಲಿಯಮ್ಸ್.. ಹೇಗಿತ್ತು ಕೊನೆಯ ಆ ಕ್ಷಣ? ಟಾಪ್ 10 ಫೋಟೋ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment