newsfirstkannada.com

ಬೆಂಗಳೂರಿನ ಈ ಪ್ರದೇಶದಲ್ಲಿ ವಿಪರೀತ ಟ್ರಾಫಿಕ್​​; ಜೀವಭಯದಲ್ಲಿ ಬದುಕುತ್ತಿರೋ ಸ್ಥಳೀಯರು!

Share :

Published February 10, 2024 at 10:16pm

Update February 10, 2024 at 10:18pm

    ಜೀವ ಭಯದಲ್ಲಿಯೇ ರಸ್ತೆ ದಾಟಬೇಕಿದೆ ಪಾದಚಾರಿಗಳು

    ಸ್ಕೈವಾಕ್ ನಿರ್ಮಾಣಕ್ಕೆ ಸಾರ್ವಜನಿಕರಿಂದ ಆಗ್ರಹ

    3 ವರ್ಷದಿಂದ ಪರದಾಡುತ್ತಿರೋ ಸಂಸದ ತೇಜಸ್ವಿ ಸೂರ್ಯ

ಬೆಂಗಳೂರು: ಸದಾ ದಟ್ಟಣೆಯಿಂದ ಕೂಡಿರುವ ಬನಶಂಕರಿ‌ ಜಂಕ್ಷನ್​ನಲ್ಲಿ ನಿತ್ಯ ಜನರು ಪರದಾಡ್ತಿದ್ದಾರೆ.‌ ಮೆಟ್ರೋ ಅದರ‌ ಪಕ್ಕದಲ್ಲೇ ಬಿಎಂಟಿಸಿ ಬಸ್ ವ್ಯವಸ್ಥೆಯಿದೆ. ಆದ್ರೆ ಇಷ್ಟೆಲ್ಲಾ ವ್ಯವಸ್ಥೆ ಇದ್ರೂ ಜನ ನಿತ್ಯ ಸರ್ಕಸ್ ಮಾಡಬೇಕಿದೆ.‌ ಹಲವು ದಶಕದಿಂದ ಜನ ಇಲ್ಲಿ ಜೀವಭಯದಲ್ಲಿಯೇ ರಸ್ತೆ ದಾಟುತ್ತಿದ್ದಾರೆ. ಆದ್ರೆ ಇಷ್ಟೇಲಾ ಆದ್ರೂ ಇದಕ್ಕೆ ಮುಕ್ತಿ ಕಾಣಿಸಲು ಒಂದೇ ಒಂದು ಸ್ಕೈವಾಕ್ ಇಲ್ಲಿ ನಿರ್ಮಾಣ ಆಗಿಲ್ಲ.

ಸಿಲಿಕನ್‌ ಸಿಟಿ ಬೆಂಗಳೂರಿನಲ್ಲಿ ಸಂಚಾರದಟ್ಟಣೆ ನಿರ್ವಹಣೆಗಾಗಿಯೇ ಸರ್ಕಾರ ಹತ್ತಾರು ಕೋಟಿ ರೂಪಾಯಿ ಸುರಿತಿದೆ. ನೂರಾರು ಕಿ.ಮೀ. ಮೆಟ್ರೋ ಮಾರ್ಗ, ರಸ್ತೆಗಳು, ಸುರಂಗಗಳು, ಫ್ಲೈ ಒವರ್​ಗಳು ನಿರ್ಮಾಣವಾಗಿವೆ. ಇದರಿಂದ ಪ್ರಯಾಣಿಕರಿಗೆ ಅನುಕೂಲವೂ ಆಗ್ತಾಯಿದೆ. ಆದರೆ ಟ್ರಾಫಿಕ್ ಕಂಟ್ರೊಲ್​ಗೆ ಪಬ್ಲಿಕ್ ಟಾನ್ಸ್ಪೋರ್ಟ್ ಬಳಸಿ ಅಂತಿರುವ ಸರ್ಕಾರ.‌ ಇದಕ್ಕೆ‌ ಅನುಕೂಲವಾಗಲು ಅಗತ್ಯ ಕ್ರಮ ಕೈಗೊಳ್ಳುವುದನ್ನೇ ಮರೆತಂತೆ ಕಾಣ್ತಿದೆ. 100-200 ಮೀಟರ್‌ ಅಂತರದ ನಡುವೆ ಸಂಪರ್ಕ ಕೊಂಡಿ ನಿರ್ಮಿಸಲು ಎಡವುತ್ತಿರೋದು ಜನರ ಗೋಳಾಟಕ್ಕೆ ಕಾರಣವಾಗಿದೆ.‌

ಒಂದು ಕಡೆ ಬನಶಂಕರಿ ದೇವಿಯ ದೇವಸ್ಥಾನ. ಎದುರು ಭಾಗದಲ್ಲಿಯೇ ಮೆಟ್ರೋ ನಿಲ್ದಾಣ. ಅದರ ಪಕ್ಕದಲ್ಲೇ ಬಿಎಂಟಿಸಿ, ಟಿಟಿಎಂಸಿ. ಆದರೆ ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಲು ಜನ ಅದೆಷ್ಟು ಪರದಾಡ್ತಿದ್ದಾರೆ. ಯಮರೂಪಿಯಂತೆ ನುಗ್ಗಿಬರುವ ವಾಹನಗಳಿಂದ ತಪ್ಪಿಸಿಕೊಂಡು ರಸ್ತೆ ದಾಟುವ ಸಾಹಸ. ಜೀವ ಭಯದಲ್ಲೇ ಓಡಾಬೇಕಾದ ಪರಿಸ್ಥಿತಿ. ಸ್ವಂತ ವಾಹನದಲ್ಲಿ ಬಂದರೆ ಇಲ್ಲದ ಪಾರ್ಕಿಂಗ್‌ ವ್ಯವಸ್ಥೆ. ಸಮೂಹ ಸಾರಿಗೆ ಸಹವಾಸ ಬೇಡ ಅಂತ ಆಟೋ ಹತ್ತಬೇಕಾದರೂ ರಸ್ತೆ ದಾಟುವ ಅನಿವಾರ್ಯತೆ. ಇನ್ನೂ ಒಂದು ಸ್ಕೈವಾಕ್‌ ನಿರ್ಮಿಸಲು ಬೆಂಗಳೂರಿನ ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಕಳೆದ ಮೂರು ವರ್ಷದಿಂದ ಪರದಾಡ್ತಿದ್ದಾರಂತೆ.‌ ಪತ್ರ ಬರೆದಿದ್ದರು ಇದುವರೆಗೆ ಅದು ಆಗಿಲ್ಲ. ಬಿಬಿಎಂಪಿ, ಬಿಎಂಆರ್‌ಸಿಎಲ್‌, ಬಿಎಂಟಿಸಿ ನಡುವೆಯೇ ಫೈಲ್‌ ಓಡಾಡುತ್ತಿದೆಯಂತೆ.

ಇಂತಹ ಹತ್ಕಕ್ಕೂ ಹೆಚ್ಚು ಮಿಸ್ಸಿಂಗ್‌ ಲಿಂಕ್‌ಗಳು ಹಲವು ವರ್ಷಗಳಿಂದ ಸಂಪರ್ಕ ಕೊಂಡಿಗಾಗಿ ಕಾದುಕುಳಿತಿವೆ. ಸಾವಿರಾರು ಕೋಟಿ ಮೊತ್ತದ ಯೋಜನೆಗಳ ಅನುಷ್ಠಾನದಲ್ಲಿರುವ ಉತ್ಸಾಹ ಹತ್ತಾರು ಕೋಟಿ ಮೊತ್ತದಲ್ಲಿ, ಕೆಲವೇ ತಿಂಗಳುಗಳಲ್ಲಿ ಮಾಡಿ ಮುಗಿಸಬಹುದಾದ ಈ ಸೇತುವೆಗಳ ನಿರ್ಮಾಣದಲ್ಲಿ ಸರ್ಕಾರಕ್ಕಾಗಲಿ, ಅಧಿಕಾರಿಗಳಿಗಾಗಲಿ ಇಲ್ಲವಾಗಿದೆ. ಇನ್ನಾದ್ರೂ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿನ ಈ ಪ್ರದೇಶದಲ್ಲಿ ವಿಪರೀತ ಟ್ರಾಫಿಕ್​​; ಜೀವಭಯದಲ್ಲಿ ಬದುಕುತ್ತಿರೋ ಸ್ಥಳೀಯರು!

https://newsfirstlive.com/wp-content/uploads/2024/02/bng-73.jpg

Load More