/newsfirstlive-kannada/media/post_attachments/wp-content/uploads/2025/03/RAMDAN-TRAFFIC-RULES.jpg)
ರಂಜಾನ್ ಹಬ್ಬದ ಪ್ರಯುಕ್ತವಾಗಿ ನಗರದ ಹಲವು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಪೊಲೀಸರು ನಿರ್ಬಂಧ ಹೇರಿದ್ದಾರೆ. ಬನ್ನೇರುಘಟ್ಟ ರಸ್ತೆಯ ಗುರುಪ್ಪನಪಾಳ್ಯ ಜಂಕ್ಷನ್ನಲ್ಲಿ ಸಂಚಾರ ನಿರ್ಬಂಧವಿದ್ದು, ಸಾಗರ್ ಅಪೋಲೋ ಜಂಕ್ಷನ್ನಿಂದ ಗುರಪ್ಪನಪಾಳ್ಯ ಜಂಕ್ಷನ್ವರೆಗೆ ಸಂಚಾರಕ್ಕೆ ನಿರ್ಬಂಧವಿದೆ. ಸಾಯಿರಾಂ ಜಂಕ್ಷನ್ನಿಂದ ಗುರಪ್ಪನಪಾಳ್ಯ ಜಂಕ್ಷನ್ವರೆಗೆ. ಗುರಪ್ಪನಪಾಳ್ಯ ಜಂಕ್ಷನ್ನಿಂದ ರೆಡ್ಡಿ ಆಸ್ಪತ್ರೆ ಜಂಕ್ಷನ್ವರೆಗೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು.ಬದಲಿಗೆ ಪರ್ಯಾಯ ಮಾರ್ಗ ಬಳಸಲು ಸಂಚಾರ ಪೊಲೀಸರು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ:ಕೃಷ್ಣಾ ನದಿಗೆ ಸ್ನಾನ ಮಾಡಲು ಹೋಗಿದ್ದ ಮೂವರು ಬಾಲಕರು ನಾಪತ್ತೆ.. ಓರ್ವನ ದೇಹ ಪತ್ತೆ
ಇನ್ನು ಡೈರಿ ಸರ್ಕಲ್ನಿಂದ ಬರುವ ವಾಹನಗಳು ತಿಕಕ್ ನಗರ, ಸ್ವಾಗತ ಜಂಕ್ಷನ್, ಜಯನಗರ ಈಸ್ಟ್ ಎಂಡ್ ಮೂಲಕ ಜಯದೇವ ಆಸ್ಪತ್ರೆಯಿಂದ ಬನ್ನೇರುಘಟ್ಟಕ್ಕೆ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ.ಬನ್ನೇರುಘಟ್ಟ ರಸ್ತೆಯಿಂದ ಬರುವ ವಾಹನಗಳು ಜೇಡಿಮರ ಜಂಕ್ಷನ್, ಜಯದೇವ, ಈಸ್ಟ್ ಎಂಡ್, ಸ್ವಾಗತ ಜಂಕ್ಷನ್ ಮೂಲಕ ಡೈರಿ ಸರ್ಕಲ್ ತಲುಪಬಹುದು.
ಅದೇ ರೀತಿ ನಾಗವಾರ ಪಾಟರಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧವಿದೆ.ನಾಗರವಾರ ಜಂಕ್ಷನ್ನಿಂದ ಪಾಟರಿ ರಸ್ತೆ ಸರ್ಕಲ್ವರೆಗೆ ಸಂಚಾರಕ್ಕೆ ನಿರ್ಬಂಧವಿದೆ. ಬದಲಿಗೆ ಪರ್ಯಾಯ ಮಾರ್ಗ ಬಳಸಲು ಸಂಚಾರ ಪೊಲೀಸರು ಸೂಚನೆ ನೀಡಿದ್ದಾರೆ. ನಾಗಾವಾರ ಕಡೆಯಿಂದ ಬರುವ ವಾಹನಗಳು ಹೆಣ್ಣೂರು ಜಂಕ್ಷನ್, ಕಾಚರಕನಹಳ್ಳಿ, ಲಿಂಗರಾಜಪುರಂ, ಪುಲಿಕೇಶಿನಗರ ಪೊಲೀಸ್ ಠಾಣೆ ಮತ್ತು ಹೇನ್ಸ್ ರಸ್ತೆಯ ಮೂಲಕ ಸಂಚಾರ ಕೈಗೊಳ್ಳಬಹುದು.
ಇದನ್ನೂ ಓದಿ: ನಾನು ಕರ್ನಾಟಕದವಳು, ಕರ್ನಾಟಕದಲ್ಲೇ ಬೆಳೆದಿದ್ದು.. ನಟಿ ರಶ್ಮಿಕಾ ಮಂದಣ್ಣ ಈಗ ಯಾಕಿಂಗೆ ಹೇಳಿದ್ರು?
ಶಿವಾಜಿನಗರ ಕಡೆಯಿಂದ ಸಂಚರಿಸುವ ವಾಹನಗಳು. ಸೆನ್ಸರ್ ರಸ್ತೆ, ಕೋಲ್ಸ್ ರಸ್ತೆ, ವೀಲರ್ಸ್ ರಸ್ತೆ ಮೂಲಕ ನಾಗರವಾರ, ಬಾಣಸವಾಡಿ ಕಡೆಗೆ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು ಬೆಳಗ್ಗೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಂಚಾರ ಮಾರ್ಪಾಡು ಮಾಡಲಾಗಿದೆ ಎಂದು ಪೊಲೀಸರು ಆದೇಶ ಹೊರಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ