10,000 ಅಡಿ ಮೇಲಿಂದ ಹಾರಿದ ಸ್ಕೈವ್ ಡ್ರೈವರ್ ಕೇಸ್‌ಗೆ ಟ್ವಿಸ್ಟ್.. ದುರಂತಕ್ಕೆ ಕಾರಣವೇನು?

author-image
admin
Updated On
10,000 ಅಡಿ ಮೇಲಿಂದ ಹಾರಿದ ಸ್ಕೈವ್ ಡ್ರೈವರ್ ಕೇಸ್‌ಗೆ ಟ್ವಿಸ್ಟ್.. ದುರಂತಕ್ಕೆ ಕಾರಣವೇನು?
Advertisment
  • ನೋಡೋದಕ್ಕೆ ಸುಂದರಿ.. ಬೆಕ್ಕಿನ ಕಣ್ಣಿನ ಹುಡುಗಿ ಈಕೆ!
  • 400ಕ್ಕೂ ಹೆಚ್ಚು ಬಾರಿ ಆಕಾಶದಿಂದ ಭೂಮಿಗೆ ಹಾರಿದ್ದಳು
  • 10 ಸಾವಿರ ಅಡಿಯಿಂದ ಬಿದ್ದು ಪ್ರಾಣ ಬಿಡಲು ಕಾರಣವೇನು?

ಕೆಲವೊಂದು ಸಾರಿ ಲೈಫ್​ನಲ್ಲಿ ಪ್ರೀತಿ ಅನ್ನೋದು ಸಿಗದೇ ಹೋದ್ರೆ ಮನುಷ್ಯ ಎಂಥಾ ನಿರ್ಧಾರವನ್ನ ಬೇಕಾದ್ರೂ ಮಾಡಿಬಿಡ್ತಾನೆ. ಯಾಕಂದ್ರೆ ಪ್ರೀತಿ ಕೊಡೋ ನೋವು ಅಂಥದ್ದು. ಒಂದು ನಾವಿಷ್ಟ ಪಟ್ಟವರು ನಮಗೆ ಸಿಗಲ್ಲ ಅನ್ನೋದು ಗೊತ್ತಾದ್ರೆ ಹೃದಯ ಒಡೆದು ಚೂರು ಚೂರು ಆಗುತ್ತೆ. ಈ ಸ್ಟೋರಿಯಲ್ಲಿ ಜಸ್ಟ್ 32 ವರ್ಷದ ಸುಂದರಿ ಪ್ರೇಮ ವೈಫಲ್ಯದ ಕಾರಣಕ್ಕೆ ಬದುಕಿಗೆ ಗುಡ್‌ಬೈ ಹೇಳಿದ್ದಾಳೆ. ಸಾಯೋದಕ್ಕೆ ಈಕೆ ಮಾಡಿದ ಪ್ಲಾನ್ ಎಂತಾದ್ದು ಅಂತ ಗೊತ್ತಾದ್ರೆ ನಿಜಕ್ಕೂ ನೀವು ಶಾಕ್ ಆಗ್ಬಿಡ್ತೀರಾ.

ಜೇಡೆ ಡ್ಯಾಮರೆಲ್​.. ನೋಡೋದಕ್ಕೆ ಸುಂದರಿ. ಬೆಕ್ಕಿನ ಕಣ್ಣಿನ ಹುಡುಗಿ ಈಕೆ. ಇನ್ನೂ ಬದುಕಿನ ಅರ್ಧದಷ್ಟು ಆಯಸ್ಸು ಬಾಕಿಯಿತ್ತು. ಅಷ್ಟರಲ್ಲೇ ಈ ಚೆಲುವೆ ದುಡುಕಿನ ನಿರ್ಧಾರ ಮಾಡಿಬಿಟ್ಟಿದ್ದಾಳೆ. ಪ್ರೀತಿಸಿದವನು ಸಿಗಲಿಲ್ಲ ಅನ್ನೋ ಒಂದೇ ಒಂದು ಕಾರಣಕ್ಕೆ ಮನಸು ಕೆಡಿಸಿಕೊಂಡಾಕೆ ಒಂದಲ್ಲ ಎರಡಲ್ಲ ಬರೋಬ್ಬರಿ 10 ಸಾವಿರ ಅಡಿ ಮೇಲಿಂದ ಹಾರಿ ಪ್ರಾಣ ಕಳ್ಕೊಂಡಿದ್ದಾಳೆ.

publive-image

ಇಂಟ್ರೆಸ್ಟಿಂಗ್ ವಿಚಾರ ಏನಂದ್ರೆ ಜೇಡೆ ಡ್ಯಾಮರೆಲ್​ ಒಬ್ಬಳು ಫೇಮಸ್‌ ಸ್ಕೈವ್ ಡ್ರೈವರ್.​ ಕಮ್ಮಿ ಅಂದ್ರೂ 400ಕ್ಕೂ ಹೆಚ್ಚು ಬಾರಿ ಡ್ಯಾಮರೆಲ್ ಆಕಾಶದಿಂದ ಭೂಮಿಗೆ ಹಾರಿದ್ದಾಳೆ. ಪ್ರತಿ ಬಾರಿ ಹಾರಿದಾಗ್ಲೂ ಈಕೆಯ ಪ್ಯಾರಚೂಟ್ ಓಪನ್ ಆಗ್ತಿತ್ತು. ಆದ್ರೆ ಈ ಬಾರಿ ಜಂಪ್ ಮಾಡ್ದಾಗ ಪ್ಯಾರಚೂಟ್ ಓಪನ್ ಆಗಲೇ ಇಲ್ಲ. ಆದ್ರೆ ಡ್ಯಾಮರೆಲ್ ಬೇಕಂತಲ್ಲೇ ಪ್ಯಾರಚೂಟ್ ಓಪನ್ ಮಾಡಿರಲಿಲ್ಲ. ಪರಿಣಾಮ 10 ಸಾವಿರ ಅಡಿಯಿಂದ ಬಿದ್ದು ಪ್ರಾಣ ಕಳ್ಕೊಂಡಿದ್ದಾಳೆ.

ಇದನ್ನೂ ಓದಿ: ಹುಷಾರ್​ ಕಣ್ರೀ.. ಕಪ್ಪಗೆ ಆಗಿಬಿಡ್ತೀನಿ ಅಂತ ಸೂರ್ಯನಿಂದ ದೂರವೇ ಇದ್ದವ ಮಹಿಳೆಗೆ ಬಿಗ್ ಶಾಕ್! 

ಸೌಥ್ ವೆಲ್ಸ್​ನಲ್ಲಿ ವಾಸವಿದ್ದ ಡ್ಯಾಮರೆಲ್ 26 ವರ್ಷದ ಬೆನ್ ಗುಡ್​ಫೆಲೋ ಅನ್ನೋನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳು. ಅವನಿಗಿಂತ 6 ವರ್ಷ ಚಿಕ್ಕ ಹುಡುಗ. ಪ್ರೀತಿಗೆ ವಯಸ್ಸು ಮುಖ್ಯವಲ್ಲ ಮನಸ್ಸು ಮುಖ್ಯ ಅಂತ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದಳು. ಒಂದಲ್ಲ ಎರಡಲ್ಲ ಬರೋಬ್ಬರಿ ಆರು ತಿಂಗಳು ಇಬ್ಬರು ಡೇಟಿಂಗ್ ಮಾಡಿದ್ರು. ಇಬ್ಬರು ಒಟ್ಟಿಗೆ ವಾಸವಿದ್ರು, ಒಟ್ಟೊಟ್ಟಿಗೆ ಸ್ಕೈ ಡೈವ್ ಕೂಡ ಮಾಡ್ತಿದ್ರು.

publive-image

ಸಾಯೋ ಹಿಂದಿನ ದಿನ ಬೆನ್ ಕಾಲ್ ಮಾಡಿ ನಿನಗೂ ನನಗೂ ಸಂಬಂಧವೇ ಇಲ್ಲ ಅಂತ ಹೇಳಿದ್ನಂತೆ. ಇದ್ರಿಂದ ಡ್ಯಾಮರೆಲ್ ಮನಸ್ಸು ಘಾಸಿಯಾಗಿತ್ತು. ಕೊನೆಗೆ ಸ್ಕೈವ್ ಮಾಡ್ತೀನಿ ಅಂತ ಬಂದಾಕೆ ನಭದಿಂದ ಜಿಗಿದು ಉಸಿರು ಕಳ್ಕೊಂಡಿದ್ದಾಳೆ. ಸದ್ಯ ಡೆತ್ ನೋಟ್‌ ಕೂಡ ಸಿಕ್ಕಿದೆ ಅಂತ ಹೇಳಲಾಗ್ತಿದ್ದು ಪೊಲೀಸರು ತನಿಖೆ ನಡೆಸ್ತಿದ್ದಾರೆ.

ಅದೇನೆ ಇರಲಿ ಪ್ರೀತಿ ಅನ್ನೋದು ಒಂದು ರೀತಿಯ ಚಕ್ರವ್ಯೂಹ ಇದ್ದ ಹಾಗೆ. ಒಮ್ಮೆ ಒಳ ನುಗ್ಗಿದ್ರೆ ಅದ್ರಿಂದ ಆಚೆ ಬರೋದಕ್ಕೆ ಮನಸ್ಸು ಪಕ್ಕವಾಗಿರಬೇಕು. ಇಲ್ಲವಾದ್ರೆ ಇಂಥಾ ದುರಂತ ತಪ್ಪಿದಲ್ಲ. ಆದ್ರೆ ಪ್ರೀತಿ ಸಿಗ್ಲಿಲ್ಲ ಅನ್ನೋ ಕಾರಣಕ್ಕೆ ಸಾವಿನ ಹಾದಿ ಹಿಡಿದಿದ್ದು ನಿಜಕ್ಕೂ ದುರಂತವೇ ಸರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment