ಮೂರಂತಸ್ತಿನ ಮನೆಯಲ್ಲಿ ದುರಂತ.. ರಮಾನಂದ ಶೆಟ್ಟಿ ದಂಪತಿ ಸಾವಿಗೆ ಕಾರಣವೇನು? ಆಗಿದ್ದೇನು?

author-image
admin
Updated On
ಮೂರಂತಸ್ತಿನ ಮನೆಯಲ್ಲಿ ದುರಂತ.. ರಮಾನಂದ ಶೆಟ್ಟಿ ದಂಪತಿ ಸಾವಿಗೆ ಕಾರಣವೇನು? ಆಗಿದ್ದೇನು?
Advertisment
  • ದುರಂತದಲ್ಲಿ ನಿನ್ನೆ ಪತಿ ಸಾವು.. ಇವತ್ತು ಪತ್ನಿ ದುರ್ಮರಣ
  • ಮಗನೊಂದಿಗೆ ರೀಲ್ಸ್ ಮಾಡಿ ಖ್ಯಾತಿ ಪಡೆದಿದ್ದ ಅಶ್ವಿನಿ
  • ತಂದೆ-ತಾಯಿಯನ್ನ ಕಳ್ಕೊಂಡು ಇಬ್ಬರು ಮಕ್ಕಳು ಅನಾಥ

ಉಡುಪಿ: ಮೂರಂತಸ್ತಿನ ಮನೆ, ಬಾರ್ ಮಾಲೀಕ. ಇಬ್ಬರು ಮಕ್ಕಳೊಂದಿಗೆ ಸುಖವಾಗಿದ್ದ ಈ ದಂಪತಿಗೆ ಮನೆಗೆ ಅಳವಡಿಸಿದ್ದ ACಯೇ ಯಮನಂತೆ ಎರಗಿದ ಹೃದಯವಿದ್ರಾವಕ ಘಟನೆಯಿದು. ಎಸಿಯಿಂದಾಗಿ ಸಂಭವಿಸಿದ ಶಾರ್ಟ್‌ ಸರ್ಕ್ಯೂಟ್‌ ಇಡೀ ಮನೆಯನ್ನೇ ಆಹುತಿ ಪಡೆದಿದ್ದು ಮನೆಯೊಳಗಿದ್ದ ದಂಪತಿಯೂ ಸುಟ್ಟು ಹೋಗಿದ್ದಾರೆ.

ಇದನ್ನೂ ಓದಿ: ಬದುಕು ಸುಟ್ಟ ಬೆಂಕಿ.. ಅಪ್ಪ-ಅಮ್ಮನ ಕಳೆದುಕೊಂಡು ಅನಾಥರಾದ ರಮಾನಂದ ಶೆಟ್ಟಿ ಮಕ್ಕಳು.. 

ಶಾರ್ಟ್‌ ಸರ್ಕ್ಯೂಟ್‌ನಿಂದ ಮನೆಯಲ್ಲಿ ಅಗ್ನಿ ಅವಘಡ
ದುರಂತದಲ್ಲಿ ನಿನ್ನೆ ಪತಿ ಸಾವು.. ಇವತ್ತು ಪತ್ನಿ ದುರ್ಮರಣ

ಉಡುಪಿಯ ಅಂಬಲಪಾಡಿಯಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದ್ದ ಭೀಕರ ಅಗ್ನಿ ದುರಂತಕ್ಕೆ ದಂಪತಿ ಇಬ್ಬರು ಪ್ರಾಣತೆತ್ತಿದ್ದಾರೆ. ಬಾರ್‌ ಅಂಡ್ ರೆಸ್ಟೋರೆಂಟ್ ಮಾಲೀಕ ರಮಾನಂದ್ ಶೆಟ್ಟಿ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಮನೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಅಕ್ಕ ಪಕ್ಕದ ಮನೆಯವರು ಕಿಟಕಿಗಳನ್ನ ಒಡೆದು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದರು. ಆದ್ರೆ ಅದೆಷ್ಟೇ ಪ್ರಯತ್ನ ಪಟ್ಟರೂ ವಿಧಿಯಾಟಕ್ಕೆ ಇಬ್ಬರು ಉಸಿರು ಚೆಲ್ಲಿದ್ದಾರೆ. ಮನೆ ಮಾಲೀಕ ರಮಾನಂದ್ ಶೆಟ್ಟಿ ಪ್ರಾಣ ಒತ್ತೆ ಇಟ್ಟು ಪತ್ನಿ ಅಶ್ವಿನಿ ಹಾಗೂ ಇಬ್ಬರು ಮಕ್ಕಳನ್ನ ರಕ್ಷಣೆ ಮಾಡಿದ್ರು. ಆದ್ರೆ ದುರಾದೃಷ್ಟಶಾತ್ ಅವರೇ ಮೊದಲು ಜೀವ ತೆತ್ತಿದ್ದರು. ಪತಿಯ ಸಾವಿನ ಬೆನ್ನಲ್ಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತ್ನಿ ಅಶ್ವಿನಿ ಕೂಡ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

publive-image

ಅಗ್ನಿ ದುರಂತಕ್ಕೆ ಇಬ್ಬರು ದಂಪತಿಗಳಿಬ್ಬರು ದಾರುಣವಾಗಿ ಸಾವನ್ನಪ್ಪಿದ್ದು, ಬೆಂಕಿ ಕೆನ್ನಾಲಿಗೆ ಇಡೀ ಮನೆಯನ್ನೇ ಆಹುತಿಗೆ ಪಡೆದಿದೆ. ಬೆಂಕಿಯಿಂದಾಗಿ ಉಸಿರಾಡಲು ಸಾಧ್ಯವಾಗದೇ ಮೆದುಳು ಹಾಗೂ ಶ್ವಾಸಕೋಶ ಬ್ಲಾಕ್‌ ಆಗಿದ್ದರಿಂದ ನಿನ್ನೆ ಸಂಜೆ ಅಶ್ವಿನಿ ಸಾವನ್ನಪ್ಪಿದ್ದಾರೆ. ಸದ್ಯ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಇಬ್ಬರು ಮಕ್ಕಳಿಗೆ ಚಿಕಿತ್ಸೆ ಮುಂದುವರೆದಿದೆ.

ಇದನ್ನೂ ಓದಿ: ರಮಾನಂದ್ ಶೆಟ್ಟಿ ಸಾವಿನ ಬೆನ್ನಲ್ಲೇ ಅವರ ಪತ್ನಿಯೂ ನಿಧನ.. ರೀಲ್ಸ್ ಮೂಲಕ ಖ್ಯಾತಿ ಗಳಿಸಿದ್ದ ಅಶ್ವಿನಿ

ಮಗನೊಂದಿಗೆ ರೀಲ್ಸ್ ಮಾಡಿ ಖ್ಯಾತಿ ಪಡೆದಿದ್ದ ಅಶ್ವಿನಿ ಕುಟುಂಬದೊಂದಿಗೆ ಫುಲ್ ಖುಷ್ ಖುಷಿಯಾಗಿದ್ದರು. ಬೆಂಕಿ ನರ್ತನಕ್ಕೆ ರಮಾನಂದ ಶೆಟ್ಟಿ ಹಾಗೂ ಅಶ್ವಿನಿ ಮೃತಪಟ್ಟರೆ, ತಂದೆ-ತಾಯಿಯನ್ನ ಕಳ್ಕೊಂಡು ಇಬ್ಬರು ಮಕ್ಕಳು ಅನಾಥರಾಗಿದ್ದು ಮಾತ್ರ ದುರಂತ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment