BREAKING: ಜಮ್ಮು ಕಾಶ್ಮೀರದಲ್ಲಿ ದುರಂತ.. ಬೆಂಗಳೂರು ಮೂಲದ ಮೂವರು ದಾರುಣ ಸಾವು

author-image
admin
Updated On
BREAKING: ಜಮ್ಮು ಕಾಶ್ಮೀರದಲ್ಲಿ ದುರಂತ.. ಬೆಂಗಳೂರು ಮೂಲದ ಮೂವರು ದಾರುಣ ಸಾವು
Advertisment
  • ಜಮ್ಮು ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ಬೆಂಗಳೂರಿನ ಇಡೀ ಕುಟುಂಬ
  • ಅಮರನಾಥ ಯಾತ್ರೆ ಸಮೀಪ ಝೋಜಿಲ್ ಪಾಸ್ ಬಳಿ ದುರಂತ
  • ಮೂವರ ಮೃತದೇಹವನ್ನು ಹೊರತೆಗೆದ CRPF ಮತ್ತು ಪೊಲೀಸರು

ಜಮ್ಮು ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ಬೆಂಗಳೂರು ಮೂಲದ ಮೂವರು ಸಾವನ್ನಪ್ಪಿದ್ದಾರೆ. ಅಮರನಾಥ ಯಾತ್ರೆ ಸಮೀಪದ ಝೋಜಿಲ್ ಪಾಸ್ ಬಳಿ ಈ ದುರ್ಘಟನೆ ಸಂಭವಿಸಿದೆ.

ಮೃತರನ್ನು ಬೆಂಗಳೂರಿನ ಒಂದೇ ಕುಟುಂಬದ ಮೂವರು ಎಂದು ಗುರುತಿಸಲಾಗಿದೆ. ತಂದ್ರ ದಾಸ್ (67) ಮೊನಾಲಿಸಾ ದಾಸ್ (41) ಮತ್ತೊಬ್ಬ ಪುರುಷ ಸಾವನ್ನಪ್ಪಿದ್ದಾರೆ. ಬಾಲಕಿ ಅದ್ರಿತಾ ಖಾನ್(9)ಗೆ ಗಾಯಗಳಾಗಿದೆ.

ಇದನ್ನೂ ಓದಿ:ಮೂರಂತಸ್ತಿನ ಮನೆಯಲ್ಲಿ ದುರಂತ.. ರಮಾನಂದ ಶೆಟ್ಟಿ ದಂಪತಿ ಸಾವಿಗೆ ಕಾರಣವೇನು? ಆಗಿದ್ದೇನು? 

ತಂದ್ರ ದಾಸ್‌ ಕುಟುಂಬ ಬೆಳ್ಳಂದೂರಿನ ಗ್ರೀನ್ ಗ್ಲೆನ್ ಲೇಔಟ್ ನಿವಾಸಿಗಳು. ಜಮ್ಮು ಕಾಶ್ಮೀರದಲ್ಲಿ ಬಾಡಿಗೆ ಕಾರಿನಲ್ಲಿ ಪ್ರಯಾಣ ಮಾಡ್ತಿದ್ದರು.

ಎದುರಿದ್ದ ಕಾರೊಂದು ಕೆಟ್ಟು ನಿಂತಿತ್ತು. ಈ ವೇಳೆ ಅದನ್ನು ನೋಡಲು ಚಾಲಕ ಕಾರಿನಿಂದ ಇಳಿದಿದ್ದ. ಆದರೆ ಹ್ಯಾಂಡ್ ಬ್ರೇಕ್ ಹಾಕಿರಲಿಲ್ಲ. ಹೀಗಾಗಿ ಕಾರು ಪ್ರಪಾತಕ್ಕೆ ಬಿದ್ದು ದುರಂತ ಸಂಭವಿಸಿದೆ. ಸಿಆರ್‌ಪಿಎಫ್ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಪ್ರಪಾತದಿಂದ ಮೂವರ ಮೃತದೇಹವನ್ನು ಹೊರತೆಗೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment