/newsfirstlive-kannada/media/post_attachments/wp-content/uploads/2025/06/Chinnaswamy-Stadium-stampede-3.jpg)
ಈ ಸಲ IPL ಚಾಂಪಿಯನ್ RCB ವಿಜಯೋತ್ಸವ, ಸಂಭ್ರಮ ಘೋರ ದುರಂತಕ್ಕೆ ಸಾಕ್ಷಿಯಾಗಿದೆ. ಕಾಲ್ತುಳಿತ, ನೂಕು ನುಗ್ಗಲಿನಲ್ಲಿ ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದ್ದು, ಸಂಬಂಧಿಕರು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಚಿನ್ನಸ್ವಾಮಿ ಸ್ಟೇಡಿಯಂ ಒಳಗೆ ಹೋಗಲು ಲಕ್ಷ, ಲಕ್ಷ ಜನರು ಮುಗಿ ಬಿದ್ದಿದ್ದು, ಒಟ್ಟು 27 ಮಂದಿ ಇದುವರೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಸ್ವಸ್ಥರಾದವರಲ್ಲಿ 19 ಮಂದಿ ಬೌರಿಂಗ್‌ನಲ್ಲಿ ದಾಖಲಾಗಿದ್ದು, ಏಳು ಮಂದಿ ಸಾವನ್ನಪ್ಪಿದ್ದಾರೆ. ಮಲ್ಯ ರಸ್ತೆಯ ವೈದೇಹಿ ಆಸ್ಪತ್ರೆಗೆ 8 ಮಂದಿ ದಾಖಲಾಗಿದ್ದು, ಈ ಪೈಕಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಬೌರಿಂಗ್ ಆಸ್ಪತ್ರೆಯಲ್ಲಿ 6, ವೈದೇಹಿ ಆಸ್ಪತ್ರೆಯಲ್ಲಿ 4 ಮಂದಿ ಪ್ರಾಣ ಬಿಟ್ಟಿದ್ದಾರೆ.
ಬೋರಿಂಗ್ ಆಸ್ಪತ್ರೆಯಲ್ಲಿ 8 ವರ್ಷದ ಮಗು, 14 ವರ್ಷದ ಬಾಲಕಿ ದಿವ್ಯಾಂಶಿ ಮೃತಪಟ್ಟಿದ್ದಾರೆ. ಯಲಹಂಕ ಕಣ್ಣೂರಿನ ನಿವಾಸಿ ಶಿವಕುಮಾರ್, ಅಶ್ವಿನಿ ದಂಪತಿ ಮಗಳಾದ ದಿವ್ಯಾಂಶಿ ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದಳು. ದಿವ್ಯಾಂಶಿ ಇಂದು ಚಿನ್ನಸ್ವಾಮಿ ಸ್ಟೇಡಿಯಂಗೆ ಚಿಕ್ಕಮ್ಮ ರಚನಾ ಇನ್ನಿಬರ ಜೊತೆ ಬಂದಿದ್ರು. ದಿವ್ಯಾಂಶಿ ಕಾಲ್ತುಳಿತಕ್ಕೆ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಕಾಲ್ತುಳಿತ ದುರಂತ ಹೇಗಾಯ್ತು?
ಇಂದು ಮಧ್ಯಾಹ್ನ 1 ಗಂಟೆಯಿಂದಲೇ ಚಿನ್ನಸ್ವಾಮಿ ಸ್ಟೇಡಿಯಂ ಬಲಿ ಕಿಲೋಮೀಟರ್ ಗಟ್ಟಲೆ ಅಭಿಮಾನಿಗಳು ನಿಂತಿದ್ದರು. 3 ಗಂಟೆಯವರೆಗೂ RCB ಮ್ಯಾನೇಜ್‌ಮೆಂಟ್ ಕಡೆಯಿಂದ ಟಿಕೆಟ್ ಬಗ್ಗೆ ಕ್ಲಾರಿಟಿ ಇರಲಿಲ್ಲ. ಫ್ರೀ ಎಂಟ್ರಿ ನಾ? ದುಡ್ಡು ಕೊಡಬೇಕಾ ಅನ್ನೋ ಬಗ್ಗೆ ಮಾಹಿತಿ ಇರಲಿಲ್ಲ.
ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ದುರಂತದಲ್ಲಿ ಸಾವಿನ ಸಂಖ್ಯೆ 10ಕ್ಕೆ ಏರಿಕೆ; ಸಂಬಂಧಿಕರ ಕಣ್ಣೀರು
ದುಡ್ಡು ಕೊಟ್ಟು ಟಿಕೆಟ್ ಖರೀದಿ ಮಾಡಲು ಕಿಲೋ ಮೀಟರ್‌ವರೆಗೂ ಜನ ಸಾಲುಗಟ್ಟಿ ನಿಂತಿದ್ದರು. ಗೇಟ್‌ಗಳಲ್ಲಿ ಕಾಯ್ತಾ ಇದ್ದಾಗ ಗೇಟ್ ಅನ್ನು ತೆರೆದಿದ್ದು, ಕಾಲ್ತುಳಿತಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ