ಬೆಂಗಳೂರಲ್ಲಿ ಭೀಕರ ದುರಂತ.. ಇಬ್ಬರು ಮಕ್ಕಳ ಜೀವ ತೆಗೆದ ಹೆತ್ತತಾಯಿ; ಕಾರಣವೇನು?

author-image
admin
Updated On
ಬೆಂಗಳೂರಲ್ಲಿ ಭೀಕರ ದುರಂತ.. ಇಬ್ಬರು ಮಕ್ಕಳ ಜೀವ ತೆಗೆದ ಹೆತ್ತತಾಯಿ; ಕಾರಣವೇನು?
Advertisment
  • ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಯಾನಕ ಘಟನೆ
  • 7 ಹಾಗೂ 3 ವರ್ಷದ ಇಬ್ಬರು ಮಕ್ಕಳ ಜೀವ ತೆಗೆಯಲು ತಾಯಿ ಮಾಡಿದ್ದೇನು?
  • ಗಂಡನಿಗೆ ಸೆಲ್ಫ್‌ ಕಳಿಸಿ ಗಲತ್ ಹೋಗಯಾ.. ಮಾಫ್ ಕರೋ ಎಂದ ಮಹಿಳೆ

ಬೆಂಗಳೂರಿನ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಯಾನಕ ಘಟನೆ ನಡೆದಿದೆ. ಹೆತ್ತತಾಯಿಯೇ 7 ಹಾಗೂ 3 ವರ್ಷದ ಇಬ್ಬರು ಮಕ್ಕಳ ಜೀವ ತೆಗೆದು ತಾನು ಪ್ರಾಣ ಬಿಡಲು ಯತ್ನಿಸಿದ್ದಾರೆ. ನಿನ್ನೆ ರಾತ್ರಿ ನಡೆದಿರುವ ಈ ಕೃತ್ಯ ಬೆಚ್ಚಿ ಬೀಳಿಸುವಂತಿದೆ.

ಜಾರ್ಖಂಡ್ ಮೂಲದ ಮಮತಾ ದಂಪತಿ ಕಳೆದ 6 ತಿಂಗಳಿಂದ ಸುಬ್ರಮಣ್ಯಪುರದಲ್ಲಿ ವಾಸವಿದ್ದರು. ಮಮತಾ ಪತಿ ಆಟೋ ಡ್ರೈವರ್‌ ಆಗಿದ್ದರು. ಈ ದಂಪತಿಗೆ 7 ವರ್ಷದ ಶಂಭು ಸಾಹು ಹಾಗೂ 3 ವರ್ಷದ ಶಿಯಾ ಸಾಹು ಎಂಬ ಇಬ್ಬರು ಮಕ್ಕಳಿದ್ದರು.

ಇದನ್ನೂ ಓದಿ: ಅಯ್ಯೋ ಪಾಪ.. ಮುದ್ದಿನ ಮೊಲ ಕಚ್ಚಿ ಪ್ರಾಣಬಿಟ್ಟ ಮಹಿಳೆ; ಅಸಲಿಗೆ ಆಗಿದ್ದೇನು..? 

ನಿನ್ನೆ ರಾತ್ರಿ ಮಮತಾ ಪತಿ ಡ್ಯೂಟಿಗೆ ಹೋಗಿದ್ದಾಗ ಈ ದುರಂತ ಸಂಭವಿಸಿದೆ. ರಾತ್ರಿ 9.30ರ ಸುಮಾರಿಗೆ ದಾರದಿಂದ ಶಂಭು (7), ಶಿಯಾ (3) ಇಬ್ಬರ ಜೀವ ತೆಗೆದ ಮಮತಾ ತಾನು ಕೂಡ ಪ್ರಾಣ ಬಿಡಲು ಯತ್ನಿಸಿದ್ದಾರೆ.

ದುರಂತಕ್ಕೆ ಕಾರಣವೇನು?
ಮನೆಯಲ್ಲಿ ದಂಪತಿ ಮಧ್ಯೆ ಆಗಾಗ ಗಲಾಟೆ ಆಗುತ್ತಾ ಇತ್ತು. ಬೇರೊಂದು ಯುವತಿ ಜೊತೆ ಮಾತನಾಡುತ್ತಿದ್ದ ಪತಿ ಜೊತೆ ಮಮತಾ ಜಗಳ ಮಾಡುತ್ತಾ ಇದ್ದರು. ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಮಮತಾ ಪತಿ ಜೊತೆ ಕಿತ್ತಾಡಿದ್ದಾರೆ. ಜಗಳದ ನಡುವೆ 5.30ರ ಸುಮಾರಿಗೆ ಪತಿ ಮನೆಯಿಂದ ಹೊರಗೆ ಹೋಗಿದ್ದಾರೆ.

ಗಂಡ ಹೊರಗೆ ಹೋಗುತ್ತಿದ್ದಂತೆ ಮನೆ ಲಾಕ್ ಮಾಡಿಕೊಂಡ ಮಮತಾ, ಮಕ್ಕಳ ಜೊತೆ ತಾನು ಪ್ರಾಣ ಕಳೆದುಕೊಳ್ಳುವ ನಿರ್ಧಾರ ಮಾಡಿದ್ದಾರೆ. ಬಳಿಕ ಗಂಡನಿಗೆ ಸೆಲ್ಫ್‌ ಕಳಿಸಿ ಗಲತ್ ಹೋಗಯಾ.. ಮಾಫ್ ಕರೋ ಅಂತಾ ಮೆಸೇಜ್ ಮಾಡಿದ್ದಾರೆ. ಮೆಸೇಜ್ ನೋಡಿದ ಕೂಡಲೇ ಮಮತಾ ಪತಿ ಮನೆಗೆ ಬಂದಿದ್ದಾರೆ. ನಂತರ ಸುಬ್ರಹ್ಮಣ್ಯಪುರ ಠಾಣೆಗೆ ಗಂಡ ಮಾಹಿತಿ ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment