Advertisment

7 ದಿನ ಜಪ ಮಾಡಿದ ಮನೆಯಲ್ಲಿ ಘೋರ ದುರಂತ.. 2 ಬಲಿ, ಇಬ್ಬರ ಸ್ಥಿತಿ ಗಂಭೀರ, ಇನ್ನಿಬ್ಬರಿಗೆ ಹುಚ್ಚು!

author-image
admin
Updated On
7 ದಿನ ಜಪ ಮಾಡಿದ ಮನೆಯಲ್ಲಿ ಘೋರ ದುರಂತ.. 2 ಬಲಿ, ಇಬ್ಬರ ಸ್ಥಿತಿ ಗಂಭೀರ, ಇನ್ನಿಬ್ಬರಿಗೆ ಹುಚ್ಚು!
Advertisment
  • ವಿಚಿತ್ರ ತಂತ್ರ ವಿದ್ಯೆಗೆ 7 ದಿನಗಳಿಂದ ಅನ್ನ ನೀರು ಬಿಟ್ಟಿತ್ತು ಕುಟುಂಬ
  • ತಂತ್ರ ವಿದ್ಯೆಗೆ ಒಂದಿಡೀ ಕುಟುಂಬ ಬಲಿ, 7 ದಿನ ಘೋರ ಉಪವಾಸ
  • ಜೈ ಗುರುದೇವ್ ಬಾಬಾ ಅವರಿಗೆ ಬಲೆ ಬೀಸಿದ ಪೊಲೀಸ್ ತಂಡ

ಈಗಷ್ಟೇ ಹುಟ್ಟಿದ ಮಕ್ಕಳು ಮೊಬೈಲ್ ಹಿಡಿಯುತ್ತಿದ್ದಾರೆ. ಆ್ಯಂಡ್ರಾಯ್ಡ್​​​ನಲ್ಲಿ ಆಟ ಆಡುತ್ತಿದ್ದಾರೆ. ಇಂಥಾ ವೈಜ್ಞಾನಿಕ ಯುಗದಲ್ಲೂ ಇಲ್ಲೊಂದು ಊರಲ್ಲಿ ಮೂಢನಂಬಿಕೆಗೆ ಜನ ಬಲಿ ಆಗುತ್ತಿದ್ದಾರೆ. ಯಾರೋ ಸ್ವಾಮೀಜಿ ಹೇಳಿದ ಅನ್ನೋ ಕಾರಣಕ್ಕೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಅದೊಂದು ಮನೆ ಇದೀಗ ಭಯ ಹುಟ್ಟಿಸುತ್ತಿದೆ.

Advertisment

7 ದಿನ ಜಪ 2 ಬಲಿ, ಇಬ್ಬರು ಗಂಭೀರ, ಇನ್ನಿಬ್ಬರಿಗೆ ಹುಚ್ಚು!?
ಆ ಮನೆಯಲ್ಲಿ ನಡೀತಿತ್ತು 7 ದಿನದಿಂದ ಘೋರ ಉಪವಾಸ
ಛತ್ತೀಸಗಢದ ಶಕ್ತಿ ತಾಲೂಕಿನ ತಂಡುಲ್ದಿಹ್ ಗ್ರಾಮದ ಅದೊಂದು ಮನೆ 7 ದಿನಗಳಿಂದ ಮುಚ್ಚಿತ್ತು. ಹೊರಗಿನಿಂದ ನೋಡಿದವರಿಗೆ ಭಜನೆ ಹಾಗೂ ಜಪವಷ್ಟೇ ಕೇಳಿಸುತ್ತಿತ್ತು. ಕ್ರಮೇಣ ಸದ್ದು ಕಡಿಮೆ ಆಗುತ್ತಾ ಬಂದಿತ್ತು. ಕೂಡಲೇ ಗ್ರಾಮಸ್ಥರು ಬಾಗಿಲು ತೆರೆದು ನೋಡಿದಾಗ ಅಚ್ಚರಿ ಕಾದಿತ್ತು. ಇಬ್ಬರು ಹೆಣವಾಗಿ ಸತ್ತಿದ್ದರು. ಮತ್ತಿಬ್ಬರ ಸ್ಥಿತಿ ಗಂಭೀರಗೊಂಡಿತ್ತು. ಇನ್ನಿಬ್ಬರು ಅಕ್ಷರಶಃ ಹುಚ್ಚರಂತೆ ವರ್ತಿಸುತ್ತಿದ್ದರು. ಕಾರಣ ಕೆದಕಿದ ಗ್ರಾಮಸ್ಥರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ.

publive-image

ಇದನ್ನೂ ಓದಿ: ಬೆಂಗಳೂರಲ್ಲಿ ದುರಂತ.. ಸಿಲ್ಲಿ ರೀಸನ್‌ಗೆ ಜೀವ ಕಳೆದುಕೊಂಡ BBA ವಿದ್ಯಾರ್ಥಿನಿ; ಕಾರಣವೇನು? 

ಆ ಸ್ವಾಮೀಜಿ ಹೇಳಿದಂತೆ ಮಾಡೋದಕ್ಕೆ ಹೋಗಿ ಅನಾಹುತ
ಉಜ್ಜಯನಿಯ ಜೈ ಗುರುದೇವ್ ಬಾಬಾ ಅನ್ನೋರು ತಾಂತ್ರಿಕ ಪ್ರಯೋಗದ ಭಾಗವಾಗಿ ಇಡೀ ಕುಟುಂಬ ಬಲಿಯಾಗಿದೆ. ಒಂದೇ ಕುಟುಂಬದ ಆರು ಮಂದಿ ಅನ್ನ ನೀರು ಬಿಟ್ಟು ಜೈ ಗುರುದೇವ್ ಬಾಬಾ ಅಂತ ಜಪ ಮಾಡುತ್ತಾ ಕುಳಿತಿದ್ದರು. ಅದ್ಯಾವ ಮೋಡಿಗೆ ಇವರೆಲ್ಲಾ ಬಲಿಯಾದರೋ ಗೊತ್ತಿಲ್ಲ. ಸತತ 7 ದಿನಗಳಿಂದ ಅನ್ನ ನೀರಿಲ್ಲದೇ ಉಪವಾಸ ಮಾಡಿದ್ದರು. ಇದೇ ಕಾರಣಕ್ಕೆ ಕುಟುಂಬದ ಯಜಮಾನಿ ಪಿರಿತ್ ಬಾಯಿ ಮತ್ತು ಮಗಳು ಚಂದ್ರಿಕಾ ಸೀದರ್​ ಗಂಭೀರ ಸ್ಥಿತಿಯಲ್ಲಿದ್ದಾರೆ. ವಿಕ್ಕಿ ಹಾಗೂ ವಿಕ್ರಮ್ ಅನ್ನೋ ಗಂಡು ಮಕ್ಕಳಿಬ್ಬರು ಸಾವನ್ನಪ್ಪಿದ್ದಾರೆ. ಇನ್ನುಳಿದಂತೆ ಹೆಣ್ಣು ಮಕ್ಕಳಾದ ನಿಶಾ ಹಾಗೂ ಅಮ್ರಿತಾ ಹುಚ್ಚರಂತೆ ವರ್ತಿಸುತ್ತಿದ್ದಾರೆ.

Advertisment

publive-image

ಕಿಟಕಿಯಿಂದ ಇಣುಕಿ ನೋಡಿದಾಗ ಭಯಾನಕ ದೃಶ್ಯ!
ತಂಡುಲ್ದಿಹ್ ಗ್ರಾಮಸ್ಥರು ಪಿರಿತ್ ಬಾಯಿ ಕುಟುಂಬಕ್ಕೆ ಏನಾಗಿದೆ ಅಂತ ಕಿಟಕಿಯಿಂದ ಇಣುಕಿ ನೋಡಿದಾಗ ಗಂಭೀರತೆ ಗೋಚರವಾಗಿದೆ. ರಾಯ್​​ಪುರ್​ ಎಸ್​ಪಿ ಶರ್ಮ ಪೊಲೀಸರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂದರ್ಭ ಬಾಗಿಲು ಒಡೆದು ಒಳನುಗ್ಗಿದ ಪೊಲೀಸರಿಗೆ ಎರಡು ಮೃತ ದೇಹ ಹಾಗೂ ಇಬ್ಬರು ಗಂಭೀರ ಸ್ಥಿತಿಯಲ್ಲಿರುವುದು ಪತ್ತೆಯಾಗಿದೆ.

ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆ ಕಳಿಸಲಾಗಿತ್ತು. ಇದೀಗ ಮರಣೋತ್ತರ ವರದಿ ಅಕ್ಷರಶಃ ಬೆಚ್ಚಿಬೀಳಿಸಿದೆ. ಕಾರಣ ಸತ್ತವರ ದೇಹದಲ್ಲಿ ವಿಷದ ಪದಾರ್ಥ ಇರುವುದು ಖಾತ್ರಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment