/newsfirstlive-kannada/media/post_attachments/wp-content/uploads/2025/06/SRS-JOGAN-HAKKALU.jpg)
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮತ್ತಿಘಟ್ಟ ಸಮೀಪದ ಜೋಗನ ಹಕ್ಕಲು ಜಲಪಾತದಲ್ಲಿ ದುರ್ಘಟನೆ ಸಂಭವಿಸಿದೆ. ಫಾಲ್ಸ್​ ವೀಕ್ಷಣೆಗೆ ಹೋದಾಗ ಯುವಕ ಕಾಲು ಜಾರಿಬಿದ್ದು ಕಣ್ಮರೆಯಾಗಿದ್ದಾನೆ.
ಪವನ್ ಗಣಪತಿ ಜೋಗಿ (24) ಕಣ್ಮರೆಯಾದ ಯುವಕ. ಈತ ಮೂಲತಃ ಸೋಮನಳ್ಳಿ ಗ್ರಾಮದ ಉಂಬಳೆಕೊಪ್ಪದ ಯುವಕ. ಸ್ನೇಹಿತನಾದ ವಾಸುದೇವ್ ಜೊತೆ ಜೋಗನ ಹಕ್ಕಲು ಫಾಲ್ಸ್ ನೋಡಲು ಹೋಗಿದ್ದ.
ಫಾಲ್ಸ್ ಹತ್ತಿರ ರಭಸವಾಗಿ ಹರಿಯುತ್ತಿದ್ದ ಹಳ್ಳವನ್ನ ದಾಟುವಾಗ ಕಾಲು ಜಾರಿ ಬಿದ್ದು ಕೊಚ್ಚಿಕೊಂಡು ಹೋಗಿ ಕಣ್ಮರೆಯಾಗಿದ್ದಾನೆ. ಸ್ಥಳಕ್ಕೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳು ಭೇಟಿ ನಿಡಿದ್ದಾರೆ. ಕೊಚ್ಚಿಕೊಂಡು ಹೋಗಿರುವ ಯುವಕನಿಗಾಗಿ ಹುಡುಕಾಟ ನಡೆಯುತ್ತಿದೆ. ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅಮೆರಿಕ ದಾಳಿ ಬೆನ್ನಲ್ಲೇ ಯುದ್ಧಕ್ಕೆ ಹೊಸ ತಿರುವು.. ಪುಟಿನ್ ಭೇಟಿಯಾಗಿ ‘Game is not over’ ಎಂದ ಇರಾನ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ