ಮದುವೆಗೆ 2 ತಿಂಗಳು ಬಾಕಿ.. ಶಾಪಿಂಗ್‌ ಮಾಡಲು ಹೋದ ಯುವಜೋಡಿ ದುರಂತ ಅಂತ್ಯ; ಆಗಿದ್ದೇನು?

author-image
admin
Updated On
ಮದುವೆಗೆ 2 ತಿಂಗಳು ಬಾಕಿ.. ಶಾಪಿಂಗ್‌ ಮಾಡಲು ಹೋದ ಯುವಜೋಡಿ ದುರಂತ ಅಂತ್ಯ; ಆಗಿದ್ದೇನು?
Advertisment
  • ಬಾಳಿ ಬದುಕಬೇಕಿದ್ದ ವಧು-ವರ.. ಅಂತ್ಯವಾಯ್ತು ಕನಸು
  • ಜೂನ್​ನಲ್ಲಿ ಮದುವೆ.. ಭಾರತಕ್ಕೆ ಮರಳಲು ವಿಧಿಯಾಟ
  • ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ ವಧು - ವರ ಇನ್ನಿಲ್ಲ

ಕೇರಳದ ಅಂಬಲವಾಯಲ್ ಮೂಲದ 27 ವರ್ಷದ ಅಖಿಲ್ ಅಲೆಕ್ಸ್ ಹಾಗೂ 26 ವರ್ಷದ ಟೀನಾ ಇನ್ನೆರಡು ತಿಂಗಳಲ್ಲಿ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಡಬೇಕಿತ್ತು. ಆದ್ರೆ ಸೌದಿ ಅರೇಬಿಯಾದಲ್ಲಿ ಕಳೆದ ಏಪ್ರಿಲ್ 2ನೇ ತಾರೀಖು ನಡೆದ ದಾರುಣ ಘಟನೆಯಲ್ಲಿ ಇಬ್ಬರೂ ಜೀವ ಕಳೆದುಕೊಂಡಿದ್ದಾರೆ.

ಹಿರಿಯರ ಸಮ್ಮುಖದಲ್ಲಿ ಇವರಿಬ್ಬರ ಎಂಗೇಜ್ಮೆಂಟ್ ಕೂಡ ಆಗಿತ್ತು. ಭಾರತೀಯ ಸಂಪ್ರದಾಯದಂತೆ ಇದೇ ಜೂನ್​ 16ನೇ ತಾರೀಖಿನ ದಿನ, ಮದುವೆಯ ಮುಹೂರ್ತ ಕೂಡ ಫಿಕ್ಸಾಗಿತ್ತು. 3,748 ಕಿಲೋ ಮೀಟರ್​ ದೂರವಿರೋ ಸೌದಿ ಅರೇಬಿಯಾದಿಂದ ಭಾರತಕ್ಕೆ ವಾಪಸ್ ಆಗಬೇಕಿತ್ತು. ಆದ್ರೆ, ಯಾರ ಕಣ್ಣು ಬಿತ್ತೋ ಏನೋ ಗೊತ್ತಿಲ್ಲ. ಬಾಳಿ ಬದುಕಿಬೇಕಿದ್ದ ಜೋಡಿ, ಅಪಘಾತದಲ್ಲಿ ತಮ್ಮ ಜೀವವನ್ನ ಕಳೆದುಕೊಂಡು ಬಿಟ್ಟಿದ್ದಾರೆ.

publive-image

ಭಾರತೀಯರು ಹೆಚ್ಚಿನ ಹಣ ಸಂಪಾದನೆ ಮಾಡಲು ಹಗಲು ರಾತ್ರಿ ಅನ್ನದೇ ದುಡಿಯಲು ಯುಎಇಗೆ ಹೋಗ್ತಾರೆ. ಅದೇ ರೀತಿ ಇಂಗ್ಲೆಂಡ್‌ನಲ್ಲಿ ಇಂಜಿನಿಯರ್ ಕೆಲಸ ಮಾಡ್ತಿದ್ದ ಅಖಿಲ್, ಮದೀನಾದ ಕಾರ್ಡಿಯಾಕ್‌ ಸೆಂಟರ್‌ನಲ್ಲಿ ಟೀನಾ ನರ್ಸ್​ ಕೆಲಸ ಮಾಡ್ತಿದ್ರು. ಇವರಿಬ್ಬರು ದುಬೈನ ಅಲ್-ಉಲಾದಲ್ಲಿ ಮದುವೆಗೆ ಶಾಪಿಂಗ್ ಮಾಡೋಣ ಅಂತ ತೀರ್ಮಾನ ಮಾಡ್ಕೊಂಡು ಟೀನಾನ ಮೀಟ್ ಮಾಡೋಕೆ ಅಖಿಲ್, ಮದೀನಾಗೆ ಹೋಗ್ತಿದ್ರಂತೆ.

ಇದನ್ನೂ ಓದಿ: ಹಿಂದೆಯಿಂದ ಬಂದು ತಬ್ಬಿಕೊಂಡ.. ಬೆಂಗಳೂರಲ್ಲಿ ಯುವತಿ ಖಾಸಗಿ ಅಂಗ ಸ್ಪರ್ಶಿಸಿ ವಿಕೃತಿ ಮೆರೆದ ಯುವಕ! 

ಸೌದಿ ಅರೇಬಿಯಾದ ಜನಪ್ರಿಯ ಪ್ರವಾಸಿ ತಾಣವಾದ ಅಲ್​​​ಉಲಾದಿಂದ 150 ಕಿ.ಮೀ ದೂರದಲ್ಲಿ ಅಖಿಲ್, ಟೀನಾ ಪ್ರಯಾಣ ಮಾಡ್ತಿದ್ದ ಕಾರು ಹಾಗೂ ಮತ್ತೊಂದು ಕಾರಿಗೆ ಸೌದಿ ನಾಗರಿಕರ ಲ್ಯಾಂಡ್ ಕ್ರೂಸರ್‌ ಡಿಕ್ಕಿ ಹೊಡೆದಿದೆ. ಭಯಂಕರವಾಗಿ ಡಿಕ್ಕಿ ಹೊಡೆದ ಪರಿಣಾಮದಿಂದ ಕಾರು​ಗಳು ಬೆಂಕಿ ಹತ್ತಿಕೊಂಡ್​ ಬಿಟ್ಟಿದೆ. ಎರಡು ಕಾರುಗಳಿಗೂ ಹೆಚ್ಚಿನ ಬೆಂಕಿ ಬಿದ್ದಿದ್ರಿಂದ ಮೃತದೇಹಗಳು ಸುಟ್ಟು ಕರಕಲಾಗಿ ಬಿಟ್ಟಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. ಸೌದಿಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ವಯನಾಡಿಗೆ ಮೃತ ದೇಹಗಳು ತಲುಪಿದೆ.

publive-image

ಮದುವೆಯಾಗೋಣ, ಬಾಳನ್ನ ಕಟ್ಟಿಕೊಳ್ಳೋಣ ಅಂತ ಭಾರತಕ್ಕೆ ವಾಪಸ್ ಆಗಬೇಕಿದ್ದ ಅಖಿಲ್ ಹಾಗೂ ಟೀನಾ, ಪ್ರತ್ಯೇಕವಾಗಿ ಅವರವರ ಸ್ವಗ್ರಾಮಗಳಲ್ಲಿ ಇಬ್ಬರ ಅಂತ್ಯಸಂಸ್ಕಾರ ನೆರವೇರಿಸಿ, ಕುಟುಂಬಸ್ಥರು ಅಂತಿಮ ವಿದಾಯ ಹೇಳಿದ್ದಾರೆ. ಮದುವೆಯಾಗೋಕೆ ಭಾರತಕ್ಕೆ ವಾಪಸ್ ಆಗಬೇಕಿದ್ದ ಇಬ್ಬರೂ, ಬಾರದ ಲೋಕಕ್ಕೆ ಪ್ರಯಾಣ ಮಾಡಿದ್ದಾರೆ. ಇಬ್ಬರನ್ನೂ ಕಳ್ಕೊಂಡು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment