Advertisment

ಲೀವ್ ಇನ್ ಪಾರ್ಟನರ್​ ಜೀವ ತೆಗೆದ ಕಿರಾತಕ; ದೇಹ ಎಷ್ಟು ತುಂಡಾಗಿತ್ತು ಗೊತ್ತಾ?

author-image
Gopal Kulkarni
Updated On
ಮದುವೆಯಾದ ಮೇಲೂ ಮಾಜಿ ಪ್ರೇಯಸಿ ಜೊತೆ ಸಂಬಂಧ.. ಪತ್ನಿ ವಿರೋಧಿಸಿದಾಗ ಈ ಹೆಜ್ಜೆ ಇಟ್ಟ..!
Advertisment
  • ಐದು ವರ್ಷ ಲೀವ್​ ಇನ್​ನಲ್ಲಿಯೇ ಇದ್ದ ಗೆಳತಿಯ ಕಥೆ ಮುಗಿಸಿದ
  • ಮದುವೆಯಾಗಿದ್ದರೂ ನಡೆದಿತ್ತು ಮತ್ತೊಬ್ಬಳ ಜೊತೆ ಲವ್ವಿ ಡವ್ವಿ
  • ಗೆಳತಿಯ ಕಥೆಯನ್ನು ಮುಗಿಸಲು ಕಾರಣ ಕೇಳಿದ್ರ ಶಾಕ್ ಆಗ್ತೀರಾ!

ಬರೋಬ್ಬರಿ 6 ತಿಂಗಳುಗಳ ಕಾಲ ಜೀವ ಹೋಗಿದ್ದ ದೇಹವೊಂದು ರೆಫ್ರಿಜೇಟರ್​ನಲ್ಲಿ ತಣ್ಣಗೆ ಮಲಗಿತ್ತು. ಕೆಲವೇ ಕೆಲವು ಅಡಿ ದೂರದಲ್ಲಿದ್ದ ಪಕ್ಕದ ಮನೆಯವರಿಗೂ ಕೂಡ ಇದರ ಬಗ್ಗೆ ಸಣ್ಣದೊಂದು ಸುಳಿವು ಕೂಡ ಸಿಕ್ಕಿರಲಿಲ್ಲ. ಮಧ್ಯಪ್ರದೇಶದ ನಗರದಲ್ಲಿ ಇಂತಹದೊಂದು ಘಟನೆ ನಡೆದು ಹೋಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ಪಾಟೀದಾರ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತಳನ್ನು ಪಿಂಕಿ ಅಲಿಯಾಸ್​ ಪ್ರತಿಭಾ ಪ್ರಜಾಪತಿ ಎಂದು ಗುರುತಿಸಲಾಗಿದೆ.

Advertisment

ದೇವಾಸ್​ನ ವೃಂದಾವನ್ ಧಾಮ್​ನಲ್ಲಿ ಉದ್ಯಮಿ ಧಿರೇಂಧ್ರ ಶ್ರೀವಾಸ್ತವ್ ಎಂಬುವವರಿಗೆ ಸೇರಿದ ಎರಡಂತಸ್ತಿನ ಮನೆಯಿತ್ತು. ಮನೆಯ ಮಾಲೀಕರು ಕಳೆದ ಆರು ತಿಂಗಳಿನಿಂದ ದುಬೈನಲ್ಲಿ ವಾಸಿಸುತ್ತಿದ್ದಾರೆ. ಗ್ರೌಂಡ್ ಫ್ಲೋರ್​ನಲ್ಲಿ ಕಿಚನ್ ಮತ್ತು ಟಾಯ್ಲೆಟ್​ ಇರುವ 2 ಬೆಡ್​ರೂಮ್ ಹಾಗೂ ಹಾಲ್​ ಇರುವ ಮನೆಯಿತ್ತು. ಮೇಲಿನ ಮನೆಯನ್ನು ಶ್ರೀವಸ್ತಾವ್ ಬಾಡಿಗೆ ಪಡೆದಿದ್ದರು. ಜುಲೈ 2024ರಂದು ಉಜ್ಜೈನಿಯ ಬಲವೀರ್ ರಜಪೂತ್ ಎನ್ನುವವರು ಬಾಡಿಗೆ ಪಡೆದುಕೊಂಡಿದ್ದರು. ಕಳೆದ ಎರಡು ತಿಂಗಳಿಂದ ಆ ಮನೆಯ ಎರಡು ರೂಮ್​ಗಳನ್ನು ನಾನು ಬಳಸಿಲ್ಲ. ಕಾರಣ ಪಾಟೀದಾರ್ ಅವುಗಳನ್ನು ಲಾಕ್ ಮಾಡಿಕೊಂಡು ಹೋಗಿದ್ದ ಎಂದು ಹೇಳಿದ್ದಾರೆ.

ಜೂನ್ 2024ರಂದು ಸಂಜಯ್ ಪಾಟೀದಾರ್​ ಮನೆಯನ್ನು ಖಾಲಿ ಮಾಡಿಕೊಂಡು ಹೋಗಿದ್ದಾನೆ. ಆದರೂ ತನಗೆ ಸಂಬಂಧಪಟ್ಟಿದ್ದ ಕೆಲವು ವಸ್ತುಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾನೆ. ರೆಫ್ರಿಜೇಟರ್​ ಸೇರಿದಂತೆ ಹಲವು ವಸ್ತುಗಳನ್ನು ಬಿಟ್ಟು ಹೋಗಿದ್ದಾನೆ. ಮನೆಯ ಮಾಲೀಕರು ಅವುಗಳನ್ನು ತೆಗೆದುಕೊಂಡು ಹೋಗಿ ಎಂದು ಎಷ್ಟು ಬಾರಿ ಹೇಳಿದರೂ ಹ್ಮು.. ಹಾ.. ಎಂದು ಹೇಳಿ ಕಾಲತಳ್ಳಿದ್ದಾನೆ

ಇದಾದ ಕೆಲವು ದಿನಗಳ ಬಳಿಕ ಮನೆಗೆ ಬಾಡಿಗೆ ಬಂದ ಬಲವೀರ್ ರಜಪೂತ್, ಎರಡು ಕೋಣೆಗಳನ್ನು ಖಾಲಿ ಮಾಡಿ ಕೊಡುವಂತೆ ಕೇಳಿದ್ದಾನೆ. ಕೊನೆಗೆ ಗುರುವಾರದಂದು ಬಲವೀರ್ ಎರಡು ಕೋಣೆಯ ಬೀಗಗಳನ್ನು ಒಡೆದು ನೋಡಿದಾಗ, ವಿಪರೀತ ವಿದ್ಯುತ್ ಬಿಲ್ ಈ ಈ ರೆಫ್ರಿಜೇಟರ್​ನಿಂದಲೇ ಬರುತ್ತಿದೆ ಎಂದು ರೆಫ್ರಿಜೇಟರ್​ ಸ್ವಿಚ್​ನ್ನು ಆಫ್ ಮಾಡಿದ್ದಾನೆ. ಮಾರನೆ ದಿನ ಇಡೀ ಏರಿಯಾಗೆ ದುರ್ವಾಸನೆಯೊಂದು ಹರಡಿಕೊಂಡಿದೆ. ಸ್ಥಳೀಯರು ಪೊಲೀಸರಿಗೆ ಕಂಪ್ಲೆಂಟ್ ಮಾಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ರೆಫ್ರಿಜೇಟರ್​ ಓಪನ್ ಮಾಡಿ ನೋಡಿದಾಗ ಡಿಕಂಪೋಸ್ಡ್​ ಆಗಿ ಬಿದ್ದಿ ಮೃತದೇಹದ ತುಂಡುಗಳನ್ನು ಬೆಡ್​ಶೀಟ್​ನಲ್ಲಿ ಸುತ್ತಿ ಇಡಲಾಗಿದ್ದು ಕಂಡು ಬಂದಿದೆ. ಕೊನೆಗೆ ವಿಚಾರಣೆ ಮಾಡಿದಾಗ ಪೊಲೀಸರಿಗೆ ಸಂಜಯ್ ಪಾಟೀದಾರ್ ಜೊತೆಗೆ ಇರುತ್ತಿರುವುದನ್ನು ಕನ್ಫರ್ಮ್ ಮಾಡಿದ್ದಾರೆ.

Advertisment

ಇದನ್ನೂ ಓದಿ: ಖಾಸಗಿ ಉದ್ಯೋಗಿಗಳಿಗೆ ಬಿಗ್​​ ಶಾಕ್​​; ಇನ್ಮುಂದೆ ದಿನಕ್ಕೆ 15 ಗಂಟೆ ಕೆಲಸ ಮಾಡಬೇಕಾ?

ಸಂಜಯ್​ ಬೆನ್ನು ಬಿದ್ದ ಪೊಲೀಸರು ಕೊನೆಗೂ ಆತನನ್ನು ಬಲೆಗೆ ಕೆಡವಿದ್ದಾರೆ. ವಿಚಾರಣೆ ವೇಳೆ ಬಲಿಪಶುವಾಗಿದ್ದು ಯುವತಿಯ ಹೆಸರು ಪ್ರತಿಭಾ ಕಳೆದ ಐದು ವರ್ಷಗಳಿಂದ ನಾವು ಲೀವ್ ಇನ್ ರಿಲೇಷನ್​ಶಿಪ್​ನಲ್ಲಿ ಇದ್ವಿ, ಮೂರು ವರ್ಷ ಉಜ್ಜೈಯನಿಯಲ್ಲಿ ವಾಸವಿದ್ವಿ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ:ಮತ್ತೊಂದು ಘೋರ ದುರಂತ.. 3ನೇ ತರಗತಿ ವಿದ್ಯಾರ್ಥಿನಿಗೆ ಹೃದಯಾಘಾತ; ಭಯಾನಕ ವಿಡಿಯೋ ಸೆರೆ!

Advertisment

ಪಾಟೀದಾರ್​ ತನ್ನ ತಪ್ಪೊಪ್ಪಿಗೆಯಲ್ಲಿ ನನಗೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿವೆ. ಆದ್ರೆ ಪ್ರತಿಭಾ ಕೂಡ ನನ್ನನ್ನು ಮದುವೆಯಾಗು ಎಂದು ಪದೇ ಪದೇ ಪೀಡಿಸತೊಡಗಿದಳು. ಕೋಪ ಮತ್ತು ಹತಾಶೆಗೊಂಡ ನಾನು ಅವಳನ್ನು ಹತ್ಯೆ ಮಾಡಿದೆ ಎಂದು ಹೇಳಿದ್ದಾನೆ. ಕೊಲೆ ಮಾಡುವುದಕ್ಕೂ ಮೊದಲು ನಾನು ಅವಳ ಬಳಿ ಬ್ರೇಕ್ ಅಪ್ ಮಾಡಿಕೊಳ್ಳೊಣ ಅಂತ ಹೇಳಿದೆ ಆದರೂ ಕೂಡ ಅವಳು ಮದುವೆ ಮಾಡಿಕೋ ಎಂದು ಹಠ ಹಿಡಿದಳು ಹೀಗಾಗಿ ನಾನು ಅವಳ ಜೀವ ತೆಗೆದೆ ಎಂದು ಹೇಳಿದ್ದಾನೆ.

ನಂತರ ನನ್ನ ಸ್ನೇಹಿತನ ಸಹಾಯದಿಂದ ದೇಹವನ್ನು ತುಂಡು ತುಂಡಾಗಿ ಮಾಡಿ ಫ್ರಿಡ್ಜ್​ನಲ್ಲಿಟ್ಟು ಅದನ್ನು ಕೋಲ್ಡೆಸ್ಟ್ ಸೆಟ್ಟಿಂಗ್​ಗೆ ಹಾಕಿ ಕೋಣೆಯನ್ನು ಲಾಕ್ ಮಾಡಿ ನಾವು ಮನೆಯನ್ನು ಖಾಲಿ ಮಾಡಿದೆವು ಎಂದು ಸಂಜಯ್ ಪಾಟೀದಾರ್ ಹೇಳಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment