Advertisment

ರಾಯಚೂರಲ್ಲಿ ವಿದ್ರಾವಕ ಘಟನೆ.. ಊಟ ಮಾಡಿ ಮಲಗಿದ್ದ ತಂದೆ, ಇಬ್ಬರು ಹೆಣ್ಮಕ್ಕಳು ಇನ್ನಿಲ್ಲ

author-image
Ganesh
Updated On
ರಾಯಚೂರಲ್ಲಿ ವಿದ್ರಾವಕ ಘಟನೆ.. ಊಟ ಮಾಡಿ ಮಲಗಿದ್ದ ತಂದೆ, ಇಬ್ಬರು ಹೆಣ್ಮಕ್ಕಳು ಇನ್ನಿಲ್ಲ
Advertisment
  • ಕವಿತಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರಂತ
  • ದುರಂತದಲ್ಲಿ ಮೂವರು ಗಂಭೀರ, ಆಸ್ಪತ್ರೆಯಲ್ಲಿ ಚಿಕಿತ್ಸೆ
  • ಪದ್ಮಾವತಿ ಅನ್ನೋರ ಸ್ಥಿತಿ ತುಂಬಾನೇ ಗಂಭೀರವಾಗಿದೆ

ರಾಯಚೂರು: ರಾತ್ರಿ ಊಟ ಸೇವಿಸಿದ ನಂತರ ಹೊಟ್ಟೆನೋವು ಕಾಣಿಸಿಕೊಂಡು ತಂದೆ, ಇಬ್ಬರು ಹೆಣ್ಮಕ್ಕಳು ಪ್ರಾಣಬಿಟ್ಟಿರುವ ದಾರುಣ ಘಟನೆ ಜಿಲ್ಲೆಯ ಸಿರವಾರ ತಾಲ್ಲೂಕಿನ ಕೆ.ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.

Advertisment

ತಂದೆ ರಮೇಶ (35), ಮಗಳು ನಾಗಮ್ಮ (8), ದೀಪಿಕಾ (6) ಮೃತ ದುರ್ದೈವಿ. ಇನ್ನು ಮೂವರು ಮಕ್ಕಳು, ಮೃತ ಪತ್ನಿ ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಪತ್ನಿ ಪದ್ಮಾವತಿ (34) ಸ್ಥಿತಿ ಗಂಭಿರ ಎನ್ನಲಾಗಿದೆ. ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಪದ್ಮಾವತಿಯನ್ನು ದಾಖಲು ಮಾಡಲಾಗಿದೆ.

ಕೃಷ್ಣ, ಚೈತ್ರಾ ಮತ್ತಿಬ್ಬರು ಮಕ್ಕಳನ್ನ ಲಿಂಗಸುಗೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಊಟ ಮಾಡಿ ಮಲಗಿದ ಕೆಲವೇ ಕ್ಷಣಗಳಲ್ಲಿ ಹೊಟ್ಟೆನೋವು ಕಾಣಿಸಿಕೊಂಡಿದೆ. ಕಳೆದ ರಾತ್ರಿ ರೊಟ್ಟಿ, ಚವಳೆಕಾಯಿ ಪಲ್ಯ, ಅನ್ನ, ಸಾಂಬಾರ್ ಸೇವಿಸಿದ್ದರು. ಕವಿತಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರಂತ ನಡೆದಿದೆ.

ಇದನ್ನೂ ಓದಿ: ಹರ್ಭಜನ್​ ಸಿಂಗ್ ಕರಿಯರ್ ಮುಗಿಸಿದ್ದು ಅಶ್ವಿನ್​​..? ಸತ್ಯ ರಿವೀಲ್ ಮಾಡಿದ ಭಜ್ಜಿ..!

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment