ಕಿವಿ ಕೇಳದ ಅಪ್ಪ-ಅಮ್ಮ.. ಬೀದಿ ನಾಯಿಗಳ ದಾಳಿಗೆ ಪ್ರಾಣ ಬಿಟ್ಟ 6 ವರ್ಷದ ಬಾಲಕಿ; ಕರುಣಾಜನಕ ಸ್ಟೋರಿ!

author-image
admin
Updated On
ಕಿವಿ ಕೇಳದ ಅಪ್ಪ-ಅಮ್ಮ.. ಬೀದಿ ನಾಯಿಗಳ ದಾಳಿಗೆ ಪ್ರಾಣ ಬಿಟ್ಟ 6 ವರ್ಷದ ಬಾಲಕಿ; ಕರುಣಾಜನಕ ಸ್ಟೋರಿ!
Advertisment
  • ಮಗಳನ್ನು ತೋಟಕ್ಕೆ ಕರೆದುಕೊಂಡು ಹೋಗುತ್ತಿದ್ದ ಕಿವುಡ ಅಪ್ಪ
  • ಪಾಪ ಮಗಳು ಚೀರಾಡಿದರೂ ತಂದೆಗೆ ಮಗಳ ಕೂಗು ಕೇಳಿಸಿಲ್ಲ
  • ಸ್ಥಳೀಯರು ಬಂದು ಮುಟ್ಟಿ ಕರೆದಾಗ ತಂದೆಗೆ ಮಗಳ ಅರಿವು

ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಅಯ್ಯನಬಾವಿ ಭೋವಿ ಕಾಲೋನಿಯಲ್ಲಿ ಘೋರ ದುರುಂತವೊಂದು ನಡೆದಿದೆ. ಬೀದಿ ನಾಯಿಗಳು 6 ವರ್ಷದ ಬಾಲಕಿಯನ್ನು ತೀವ್ರವಾಗಿ ಕಚ್ಚಿ ಭೀಕರವಾಗಿ ಸಾಯಿಸಿವೆ. ಬಾಲಕಿ ತಂದೆಯ ಹಿಂದೆಯೇ ಇದ್ದರೂ ಮಗಳು ಚೀರಾಡಿದರೂ ಆತನಿಗೆ ಕೇಳಿಸಿಯೇ ಇಲ್ಲ.

ಬೀದಿ ನಾಯಿಗಳಿಂದ ಪ್ರಾಣ ಬಿಟ್ಟ ನತದೃಷ್ಟ ಬಾಲಕಿಯ ಹೆಸರು ನವ್ಯಾ. ನಿನ್ನೆ ಸಂಜೆ 5 ಗಂಟೆಗೆ ನವ್ಯಾ ತಂದೆ ಮಗಳನ್ನು ತೋಟಕ್ಕೆ ಕರೆದುಕೊಂಡು ಹೋಗುತ್ತಿದ್ದರು.

ತಂದೆಯ ಹಿಂದೆ ಬಾಲಕಿ ನಡೆದುಕೊಂಡು ಬರುವಾಗ ಬೀದಿ ನಾಯಿಗಳು ದಾಳಿ ಮಾಡಿವೆ. ಪಾಪ ಮಗಳು ಚೀರಾಡಿದರೂ ತಂದೆಗೆ ಮಗಳ ಕೂಗು ಕೇಳಿಸಿಯೇ ಇಲ್ಲ. ಸ್ಥಳೀಯರು ಬಂದು ಮುಟ್ಟಿ ಕರೆದಾಗ ನವ್ಯಾ ತಂದೆಗೆ ಮಗಳ ನರಳಾಟದ ದೃಶ್ಯ ಅರಿವಿಗೆ ಬಂದಿದೆ. ಅಷ್ಟರಲ್ಲಿ ರಾಕ್ಷಸ ಶ್ವಾನಗಳು 6 ವರ್ಷದ ಬಾಲಕಿಯ ತಲೆ ಹಾಗೂ ಹೊಟ್ಟೆ ಭಾಗವನ್ನು ಕಚ್ಚಿ ಎಳೆದಾಡಿದ್ದವು.

ಇದನ್ನೂ ಓದಿ: ಅಮ್ಮನ ಕಳೆದುಕೊಂಡ ನೋವಿನಲ್ಲಿ ಬಿಗ್​ಬಾಸ್​ ಖ್ಯಾತಿಯ ಹಂಸ.. ಭಾವುಕ ಮಾತು 

ಬೀದಿ ನಾಯಿಗಳು ಬಾಲಕಿ ನವ್ಯಾ ಮುಖ, ಕೈ, ಕಾಲು, ತೊಡೆ ಭಾಗವನ್ನು ಕಿತ್ತು ಹಾಕಿದ್ದವು. ರಕ್ತದ ಮಡುವಿನಲ್ಲಿ ಚೀರಾಡಿದ್ದನ್ನು ಕಂಡ ಸ್ಥಳೀಯರು ಕೂಡಲೇ ಬಾಲಕಿಯನ್ನ ಆಸ್ಪತ್ರೆಗೆ ಸಾಗಿಸಿದ್ದಾರೆ. ತುಮಕೂರಿನಿಂದ ಹೆಚ್ಚಿನ ಚಿಕಿತ್ಸೆಗೆಂದು ಹಾಸನದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದ್ರೆ ಮಾರ್ಗ ಮಧ್ಯೆಯೇ ಬಾಲಕಿ ಪ್ರಾಣ ಬಿಟ್ಟಿದ್ದಾಳೆ.

ಕಿವಿ ಕೇಳದ ಅಪ್ಪ-ಅಮ್ಮ!
ನವ್ಯಾ ತಂದೆ ಮಹಲಿಂಗಯ್ಯ ಅವರಿಗೆ ಕಾಲು ಮುರಿದುಕೊಂಡಿದ್ದು, ಕಿವಿ ಕೇಳುವುದಿಲ್ಲ. ತಾಯಿ ಭಾಗ್ಯಮ್ಮಗೂ ಸಹ ಕಿವಿ ಕೇಳುವುದಿಲ್ಲ. ಬೀದಿನಾಯಿಗಳು ಈ ಬಡಪಾಯಿ ಕುಟುಂಬಕ್ಕೆ ಕಣ್ಣಾಗಿದ್ದ ಮಗಳನ್ನು ಕಿತ್ತು ತಿಂದಿವೆ. ಬಾಲಕಿಯ ದುರಂತಕ್ಕೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment