newsfirstkannada.com

ಯಲ್ಲಮ್ಮ ದೇವಿ ಜಾತ್ರೆಯಲ್ಲಿ ದುರಂತ; ಪಲ್ಲಕಿ ಉತ್ಸವದಲ್ಲಿ ಭಾಗಿಯಾಗಿದ್ದ ಇಬ್ಬರು ದಾರುಣ ಸಾವು

Share :

Published June 2, 2024 at 2:19pm

Update June 2, 2024 at 2:21pm

  ಶ್ರೀ ರೇಣುಕಾ ಯಲ್ಲಮ್ಮ ದೇವಿ ಉತ್ಸವದ ವೇಳೆ ದುರಂತ

  ಗ್ರಾಮದ ಜಾತ್ರೆಯ ಪಲ್ಲಕಿ ಉತ್ಸವದಲ್ಲಿ ಭಾಗಿಯಾಗಿದ್ದಾಗ ಅವಘಡ

  ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವ ಮುಗಿಸಿ ವಾಪಸ್ ಬರುವಾಗ ಸಾವು

ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಗೊಲ್ಲಹಳ್ಳಿ ಗ್ರಾಮದ ಜಾತ್ರೆಯ ಸಂಭ್ರಮದಲ್ಲಿ ದುರಂತ ಸಂಭವಿಸಿದೆ. ಶ್ರೀ ರೇಣುಕಾ ಯಲ್ಲಮ್ಮ ದೇವಿ ಉತ್ಸವದ ವೇಳೆ ಪಲ್ಲಕ್ಕಿ ಟ್ರಾಕ್ಟರ್‌ಗೆ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಸಾವನ್ನಪ್ಪಿದ್ದಾರೆ.

ಹರಿಬಾಬು, ಮೃತಪಟ್ಟ ಯುವಕ

ಎಲೆಕ್ಟ್ರಾನಿಕ್ ಸಿಟಿಯ ಗೊಲ್ಲಹಳ್ಳಿ ಬಳಿ ದಾರುಣ ಘಟನೆ ನಡೆದಿದೆ. ವೀರಸಂದ್ರ ನಿವಾಸಿ ರಂಗನಾಥ (33) ಹಾಗೂ ಯಾರಂಡಹಳ್ಳಿ ನಿವಾಸಿ ಹರಿಬಾಬು (25) ಮೃತ ದುರ್ದೈವಿಗಳು. ಗೊಲ್ಲಹಳ್ಳಿ ಗ್ರಾಮದ ಜಾತ್ರೆಯ ಪಲ್ಲಕಿ ಉತ್ಸವದ ವೇಳೆ ಅವಘಡ ಸಂಭವಿಸಿದೆ.

ಇದನ್ನೂ ಓದಿ: ಬೆಂಗಳೂರಿನ ಹಲವೆಡೆ ಇಂದು ಧಾರಾಕಾರ ಮಳೆ; ಈ ಒಂದು ಏರಿಯಾಗೆ ಹವಾಮಾನ ಇಲಾಖೆ ಎಚ್ಚರಿಕೆ! 

ಗ್ರಾಮ ದೇವಿಯ ಪಲ್ಲಕ್ಕಿ ಉತ್ಸವ ಮುಗಿಸಿ ವಾಪಸ್ ಬರುವಾಗ ಪಲ್ಲಕ್ಕಿಗೆ ವಿದ್ಯುತ್ ತಂತಿ ತಗುಲಿದೆ. ಟ್ರ್ಯಾಕ್ಟರ್ ಚಾಲಕನ ರಕ್ಷಣೆಗೆ ಧಾವಿಸಿದವರಿಗೂ ಕರೆಂಟ್ ಶಾಕ್ ಹೊಡೆದಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಠಾಣಾ ಸಿಬ್ಬಂದಿ ರಕ್ಷಿಸಲು ಹರಸಾಹಸ ಮಾಡಿದ್ದಾರೆ.

ಇದನ್ನೂ ಓದಿ: ಕಾರಿನಲ್ಲಿ ಲೈಂಗಿಕ ದೌರ್ಜನ್ಯ.. ವಿಡಿಯೋ ಮಾಡಿಕೊಳ್ಳುತ್ತಿದ್ದ ವಿಕೃತಕಾಮಿ ಪರಾರಿ; ಪೊಲೀಸರಿಂದ ಹುಡುಕಾಟ 

ವಿದ್ಯುತ್ ತಂತಿ ಸ್ಪರ್ಶಿಸಿರುವ ಇಬ್ಬರು ಯುವಕರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯಲ್ಲಮ್ಮ ದೇವಿ ಜಾತ್ರೆಯಲ್ಲಿ ದುರಂತ; ಪಲ್ಲಕಿ ಉತ್ಸವದಲ್ಲಿ ಭಾಗಿಯಾಗಿದ್ದ ಇಬ್ಬರು ದಾರುಣ ಸಾವು

https://newsfirstlive.com/wp-content/uploads/2024/06/Bangalore-Jaatre-Death-1.jpg

Load More