ಬೆಂಗಳೂರಿನ TRAI ಸಂಸ್ಥೆಯಲ್ಲಿ ಹುದ್ದೆಗಳಿಗೆ ಆಹ್ವಾನ.. ಈ ಕೆಲಸಕ್ಕೆ ಇವರು ಮಾತ್ರ ಅರ್ಹರು

author-image
Bheemappa
Updated On
ESICನಲ್ಲಿ 600ಕ್ಕೂ ಅಧಿಕ ಉದ್ಯೋಗಗಳು.. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು?
Advertisment
  • ಅಧಿಕೃತವಾದ ಅಧಿಸೂಚನೆ ಬಿಡುಗಡೆ ಮಾಡಿರುವ ಟ್ರಾಯ್
  • ಟ್ರಾಯ್ ಸಂಸ್ಥೆ ಕೆಲಸಗಳಿಗೆ ಅರ್ಜಿ ಸಲ್ಲಿಕೆ ಮಾಡುವುದು ಹೇಗೆ?
  • ಯಾರು ಈ ಉದ್ಯೋಗಗಳಿಗೆ ಅರ್ಹರು, ವೇತನ ಶ್ರೇಣಿ ಎಷ್ಟು?

ಕೇಂದ್ರ ಸರ್ಕಾರದಡಿ ಬರುವ ಟ್ರಾಯ್ (Telecom Regulatory Authority of India) ಸಂಸ್ಥೆಯಲ್ಲಿ ಖಾಲಿ ಇರುವಂತ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಸದ್ಯ ಈ ಸಂಬಂಧ ಅರ್ಜಿಗಳನ್ನು ಆಹ್ವಾನ ಮಾಡಲಾಗಿದ್ದು ಅರ್ಹ ಅಭ್ಯರ್ಥಿಗಳು ಇವುಗಳಿಗೆ ಅಪ್ಲೇ ಮಾಡಬಹುದು. ಇವೆಲ್ಲ ಸಹಾಯಕ ಉದ್ಯೋಗಗಳೆಂದು ನೇಮಕಾತಿ ಮಾಡಲಾಗುತ್ತಿದೆ.

ಈ ಉದ್ಯೋಗಗಳಿಗೆ ಸಂಬಂಧಿಸಿದಂತೆ ಟ್ರಾಯ್ ಸಂಸ್ಥೆ ಈಗಾಗಲೇ ಅಧಿಕೃತವಾದ ಅಧಿಸೂಚನೆ ರಿಲೀಸ್ ಮಾಡಿದೆ. ಹೀಗಾಗಿ ಅರ್ಜಿಗಳು ಆರಂಭವಾಗಿವೆ. ಈ ಕೆಲಸಗಳಿಗೆ ಅಪ್ಲೇ ಮಾಡಲು ಮಾನದಂಡಗಳು ಏನೇನು, ಅರ್ಹತೆ ಏನು ಇರಬೇಕು ಎನ್ನುವ ಇತ್ಯಾದಿ ಮಾಹಿತಿ ಇಲ್ಲಿ ನೀಡಲಾಗಿದೆ. ಹೀಗಾಗಿ ಅಭ್ಯರ್ಥಿಗಳು ಈ ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಅರ್ಜಿ ಸಲ್ಲಿಕೆ ಮಾಡಲು ಬಯಸುವ ಅಭ್ಯರ್ಥಿಗಳು ಟ್ರಾಯ್ ಅಧಿಕೃತ ವೆಬ್​ಸೈಟ್​ಗೆ ಹೋಗಿ ಅಲ್ಲಿ Careers ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

ಸಂಸ್ಥೆ- ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ ಬೆಂಗಳೂರು ಕಚೇರಿ.

ಸರ್ಕಾರಿ ಕೆಲಸದ ಹೆಸರು- ಸಹಾಯಕರು (Assistant)

ವೇತನ ಶ್ರೇಣಿ

35,400 ದಿಂದ 1,12,400 ರೂಪಾಯಿಗಳು
ಸ್ಯಾಲರಿ ಜೊತೆ ಜೊತೆಗ ಸರ್ಕಾರದಿಂದ ಭತ್ಯೆ ನೀಡಲಾಗುತ್ತೆ

ಇದನ್ನೂ ಓದಿ: KPSC ಗ್ರೂಪ್​- ಎ, ಬಿ ಹುದ್ದೆಗಳ ಮರುಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ ಮತ್ತೆ ತಪ್ಪು.. ಇಲಾಖೆಗೆ ಪತ್ರ

publive-image

ವಿದ್ಯಾರ್ಹತೆ

  • ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿ
  • ಕಂಪ್ಯೂಟರ್ ಕುರಿತು ಆಳವಾದ ಜ್ಞಾನ ಇರಬೇಕು
  • 10 ವರ್ಷ ಉದ್ಯೋಗದಲ್ಲಿ ಅನುಭವ ಇರಬೇಕು
  • ಕೇಂದ್ರ ಸರ್ಕಾರದಡಿ ಸಂಸ್ಥೆಯಲ್ಲಿ ಅಧಿಕಾರಿ ಆಗಿರಬೇಕು

ಆಯ್ಕೆ ಪ್ರಕ್ರಿಯೆ

  • ಅಭ್ಯರ್ಥಿಗಳ ಹೆಸರು ಶಾರ್ಟ್​ ಲಿಸ್ಟ್
  • ಸಂದರ್ಶನ
  • ಫೈನಲ್ ಆಯ್ಕೆ

ಪ್ರಮುಖ ದಿನಾಂಕಗಳು

ನೋಟಿಫಿಕೆಶನ್ ರಿಲೀಸ್ ದಿನಾಂಕ- 16 ಡಿಸೆಂಬರ್ 2024
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ- 24 ಜನವರಿ 2025

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment