/newsfirstlive-kannada/media/post_attachments/wp-content/uploads/2024/10/JOBS_BEML.jpg)
ಟ್ರಾಯ್ (Telecom Regulatory Authority of India) ಉದ್ಯೋಗ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಿತ್ತು. ಈಗಾಗಲೇ ಅರ್ಜಿಗಳು ಆರಂಭವಾಗಿವೆ. ಅರ್ಹ ಅಭ್ಯರ್ಥಿಗಳು ನಾಳೆ ಅಂದರೆ ಜನವರಿ 24ರ ಒಳಗಾಗಿ ಅಪ್ಲೇ ಮಾಡಬಹುದಾಗಿದೆ. ಇವೆಲ್ಲ ಸಹಾಯಕ ಉದ್ಯೋಗಗಳು ಎಂದು ತಿಳಿಸಲಾಗಿದೆ.
ಉದ್ಯೋಗಗಳಿಗೆ ಅಪ್ಲೇ ಮಾಡುವುದಕ್ಕೂ ಮೊದಲು ಮಾನದಂಡಗಳು ಏನೇನು, ಅರ್ಹತೆ ಏನು ಇರಬೇಕು ಎನ್ನುವ ಮಾಹಿತಿ ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ಈ ಆರ್ಟಿಕಲ್ ಅನನು ಸಂಪೂರ್ಣವಾಗಿ ಓದಿಕೊಂಡು ಬಳಿಕ ಅರ್ಜಿ ಅಪ್ಲೇಗೆ ಮುಂದಾಗಿ. ಅರ್ಜಿ ಸಲ್ಲಿಕೆ ಮಾಡಲು ಬಯಸುವ ಅಭ್ಯರ್ಥಿಗಳು ಟ್ರಾಯ್ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೆಕು. ಅಲ್ಲಿ Careers ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ಇದನ್ನೂ ಓದಿ:KPSC ಇಂದ ಅಧಿಸೂಚನೆ.. ಕರ್ನಾಟಕ ಲೋಕೋಪಯೋಗಿ ಇಲಾಖೆಯ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರಿನಲ್ಲಿರುವ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ ಸಂಸ್ಥೆಯಲ್ಲಿ ಈ ಕೆಲಸಗಳು ಇರುತ್ತವೆ. ಸಹಾಯಕರು (Assistant) ಉದ್ಯೋಗ ಇದಾಗಿದ್ದು ಇದಕ್ಕೆ ವೇತನ ಶ್ರೇಣಿ ಮಾಸಿಕವಾಗಿ 35,400 ದಿಂದ 1,12,400 ರೂಪಾಯಿಗಳನ್ನು ನೀಡಲಾಗುತ್ತದೆ. ಸ್ಯಾಲರಿ ಜೊತೆ ಜೊತೆಗ ಸರ್ಕಾರದಿಂದ ಭತ್ಯೆ ಕೂಡ ಇರುತ್ತದೆ.
ವಿದ್ಯಾರ್ಹತೆಯ ವಿಷಯಕ್ಕೆ ಬಂದರೆ ಅಭ್ಯರ್ಥಿಯು ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು. ಕಂಪ್ಯೂಟರ್ ಕುರಿತು ಆಳವಾದ ಜ್ಞಾನ ಹೊಂದಿರಬೇಕು. ಇವುಗಳ ಜೊತೆ ಕೇಂದ್ರ ಸರ್ಕಾರದಡಿ ಸಂಸ್ಥೆಯಲ್ಲಿ ಅಧಿಕಾರಿ ಆಗಿರಬೇಕು. 10 ವರ್ಷ ಉದ್ಯೋಗದಲ್ಲಿ ಅನುಭವ ಇರಬೇಕು. ಉದ್ಯೋಗಕ್ಕೆ ಆಯ್ಕೆಯು ಅಭ್ಯರ್ಥಿಗಳ ಹೆಸರು ಶಾರ್ಟ್ ಲಿಸ್ಟ್, 2ನೇಯದಾಗಿ ಸಂದರ್ಶನ ಮಾಡಿ ಬಳಿಕ ಕೆಲಸಕ್ಕೆ ಆಯ್ಕೆ ಮಾಡಲಾಗುತ್ತದೆ. ಈ ಸರ್ಕಾರಿ ಉದ್ಯೋಗಕ್ಕೆ ಅಭ್ಯರ್ಥಿಗಳು 24 ಜನವರಿ 2025ರ ಒಳಗಾಗಿ ಅರ್ಜಿ ಸಲ್ಲಿಕೆ ಮಾಡಬೇಕು.
ಸಂಪೂರ್ಣ ಮಾಹಿತಿಗಾಗಿ- https://vacancies.trai.gov.in/show_vacancy.action
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ