Advertisment

ಮೊಬೈಲ್ ನೋಡಿಕೊಂಡು ಕುಳಿತ ಸ್ಟೇಷನ್ ಮಾಸ್ಟರ್.. ಆಟೋಗೆ ರೈಲು ಡಿಕ್ಕಿ; ತಂದೆ, ಮಕ್ಕಳು ಗಂಭೀರ

author-image
Bheemappa
Updated On
ಮೊಬೈಲ್ ನೋಡಿಕೊಂಡು ಕುಳಿತ ಸ್ಟೇಷನ್ ಮಾಸ್ಟರ್.. ಆಟೋಗೆ ರೈಲು ಡಿಕ್ಕಿ; ತಂದೆ, ಮಕ್ಕಳು ಗಂಭೀರ
Advertisment
  • ಮೊಬೈಲ್​​ನಲ್ಲಿ ಮಗ್ನನಾಗಿದ್ದ ಸ್ಟೇಷನ್ ಮಾಸ್ಟರ್ ಯಡವಟ್ಟು
  • ದಸರಾಗೆ ಬಿಟ್ಟಿರುವ ವಿಶೇಷ ರೈಲು ಆಟೋಗೆ ಡಿಕ್ಕಿ
  • ಸ್ಟೇಷನ್ ಮಾಸ್ಟರ್ ಯಡವಟ್ಟಿಗೆ ಜನರಿಂದ ಭಾರೀ ಆಕ್ರೋಶ

ಮೈಸೂರು: ಸ್ಟೇಷನ್ ಮಾಸ್ಟರ್ ಮೊಬೈಲ್​ ನೋಡಿಕೊಂಡು ಕುಳಿತ್ತಿದ್ದ ವೇಳೆ ರೈಲು ಬಂದು ಗೂಡ್ಸ್​ ಆಟೊಗೆ ಡಿಕ್ಕಿಯಾಗಿ ತಂದೆ ಸೇರಿ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೈಸೂರಿನ ಇಲವಾಲ ಹೋಬಳಿಯ ಮಲ್ಲೇಗೌಡನ ಕೊಪ್ಪಲು ಗ್ರಾಮದ ರೈಲ್ವೆ ಗೇಟ್ ಬಳಿ ದುರ್ಘಟನೆ ನಡೆದಿದೆ.

Advertisment

ಇಲವಾಲದ ಮಲ್ಲೇಗೌಡನ ಕೊಪ್ಪಲು ಗ್ರಾಮದ ಬಳಿ ದಸರಾ -ಅರಸೀಕೆರೆ ವಿಶೇಷ ರೈಲು ಹೋಗುತ್ತಿತ್ತು. ನಿಯಮದಂತೆ ಸ್ಟೇಷನ್ ಮಾಸ್ಟರ್ ಗೇಟ್ ಹಾಕಬೇಕಿತ್ತು. ಮೊಬೈಲ್​ನಲ್ಲಿ ಸ್ಟೇಷನ್ ಮಾಸ್ಟರ್ ಮಗ್ನನಾಗಿ ಗೇಟ್ ಹಾಕುವುದನ್ನೇ ಮರೆತು ಬಿಟ್ಟಿದ್ದಾನೆ. ಹೀಗಾಗಿ ರೈಲು ಬರುವುದನ್ನು ಗಮನಿಸಿದೇ ತನ್ನೆರಡು ಮಕ್ಕಳೊಂದಿಗೆ ತಂದೆ ಗೂಡ್ಸ್ ಆಟೊದಲ್ಲಿ ಹಳಿ ದಾಟಲು ಮುಂದಾಗಿದ್ದಾರೆ. ಆಗ ವೇಗವಾಗಿ ಬಂದ ರೈಲು ಆಟೊಗೆ ಡಿಕ್ಕಿಯಾಗಿದೆ. ಇದರಿಂದ ಆಟೊದಲ್ಲಿದ್ದ ತಂದೆ ಹಾಗೂ 9, 5 ವರ್ಷದ ಎರಡು ಮಕ್ಕಳು ಗಾಯಗೊಂಡಿದ್ದಾರೆ.

ಇದನ್ನೂ ಓದಿ:ಇಂದು ಥಿಯೇಟರ್​​ಗಳಲ್ಲಿ ‘ಮಾರ್ಟಿನ್’ ಹವಾ.. ಆ್ಯಕ್ಷನ್​ ಪ್ರಿನ್ಸ್ ಧ್ರುವ ಸರ್ಜಾ ಅಬ್ಬರ ಜೋರು

publive-image

ರೈಲು ಡಿಕ್ಕಿಯಾದ ರಭಸಕ್ಕೆ ಆಟೋ ಜಖಂ ಆಗಿದ್ದು, ದಸರಾ -ಅರಸೀಕೆರೆ ಸ್ಪೆಷಲ್ ರೈಲಿಗೆ ಆಟೋ ಸಿಲುಕಿತ್ತು. ಬಳಿಕ ಅದನ್ನು ಬೇರ್ಪಡಿಸಲಾಗಿದೆ. ಸ್ಟೇಷನ್​ ಮಾಸ್ಟರ್ ಯಡವಟ್ಟಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಅಪಘಾತ ಸಂಬಂಧ ಗ್ರಾಮಸ್ಥರೆಲ್ಲ ಸೇರಿ ರೈಲ ಅನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.

Advertisment

ಇದನ್ನೂ ಓದಿ: ಸಚಿವ ಸಂಪುಟ ಸಭೆಯಲ್ಲಿ ಸಿದ್ದರಾಮಯ್ಯ ಕಿಡಿ; ವಿರೋಧಿಗಳಿಗೆ ಕೊಟ್ಟ ಸಂದೇಶ ಏನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment