/newsfirstlive-kannada/media/post_attachments/wp-content/uploads/2025/03/Pakistan-Train-Hijack-1.jpg)
ಪಾಕಿಸ್ತಾನದ ಬಲೂಚಿಸ್ತಾನದಲ್ಲಿ 500ಕ್ಕೂ ಹೆಚ್ಚು ಪ್ರಯಾಣಿಕರಿದ್ದ ರೈಲನ್ನು ಹೈಜಾಕ್ ಮಾಡಲಾಗಿದೆ. ಜಾಫರ್ ಎಕ್ಸ್‌ಪ್ರೆಸ್ ರೈಲು ಕ್ವೆಟ್ಟಾದಿಂದ ಪೇಶಾವರ್‌ಗೆ ತೆರಳುತ್ತಿದ್ದ ವೇಳೆ ಬಲೂಚ್ ಲಿಬರೇಷನ್ ಆರ್ಮಿ ಈ ಹೈಜಾಕ್ ಮಾಡಿದೆ ಎನ್ನಲಾಗಿದೆ.
ಬಲೂಚ್ ಲಿಬರೇಷನ್ ಆರ್ಮಿ ರೈಲಿನಲ್ಲಿರುವ ಎಲ್ಲಾ ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿಸಿದೆ. ಇದೇ ರೈಲಿನಲ್ಲಿ ಹಲವು ಪಾಕಿಸ್ತಾನದ ಸೈನಿಕರು ಪ್ರಯಾಣಿಸುತ್ತಿದ್ದರು. ಹೈಜಾಕ್ ಮಾಡುವ ವೇಳೆ ಬಲೂಚ್ ಲಿಬರೇಷನ್ ಆರ್ಮಿ ಪಾಕಿಸ್ತಾನದ ಸೈನಿಕರ ಮೇಲೆ ದಾಳಿ ಮಾಡಿದ್ದು, 6 ಸೈನಿಕರನ್ನು ಹತ್ಯೆ ಮಾಡಿದ್ದಾರೆ.
ಬಲೂಚಿಸ್ತಾನದಲ್ಲಿರುವ ರೈಲಿನಲ್ಲಿ ಈಗ ಪಾಕಿಸ್ತಾನದ ಸೈನಿಕರು ಸೇರಿದಂತೆ ಪ್ರಯಾಣಿಕರೆಲ್ಲಾ ಒತ್ತೆಯಾಳುಗಳಾಗಿದ್ದಾರೆ. ಹೈಜಾಕ್ ಬಳಿಕ ಬಲೂಚ್ ಲಿಬರೇಷನ್ ಆರ್ಮಿಯಿಂದ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಪಾಕಿಸ್ತಾನದ ಸೇನೆಗೆ ಎಚ್ಚರಿಕೆ ನೀಡಿದ್ದು, ತಮ್ಮ ಬೇಡಿಕೆಗಳನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಂತ್ರಾಲಯಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ ಭೀಕರ ಅಪಘಾತ.. ಸ್ಥಳದಲ್ಲೇ 5 ಮಂದಿ ದುರ್ಮರಣ
ಟ್ರೈನ್ ಹೈಜಾಕ್‌ಗೆ ಕಾರಣವೇನು?
ಬಲೂಚ್ ಲಿಬರೇಷನ್ ಆರ್ಮಿ ಪಾಕಿಸ್ತಾನದಿಂದ ಪ್ರತ್ಯೇಕವಾಗಿ ಸ್ವಾತಂತ್ರ್ಯ ಕೇಳುತ್ತಿದೆ. ಬಲೂಚಿಸ್ತಾನ ಪ್ರಾಂತ್ಯವನ್ನೇ ಪ್ರತ್ಯೇಕ ದೇಶವನ್ನಾಗಿ ಮಾಡಲು ಬಲೂಚ್ ಲಿಬರೇಷನ್ ಆರ್ಮಿ ಹೋರಾಡುತ್ತಿದೆ. ಈ ಹಿನ್ನೆಲೆಯಲ್ಲಿ 400ಕ್ಕೂ ಹೆಚ್ಚು ಪ್ರಯಾಣಿಕರಿದ್ದ ರೈಲನ್ನು ಹೈಜಾಕ್ ಮಾಡಿ ಪಾಕಿಸ್ತಾನ ಸೇನೆಗೆ ಖಡಕ್ ವಾರ್ನಿಂಗ್ ನೀಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ