Advertisment

Elephants: ದಾರುಣ ಘಟನೆ.. ಭೀಕರ ರೈಲು ಡಿಕ್ಕಿಗೆ 6 ಆನೆಗಳು ಸ್ಥಳದಲ್ಲೇ ಸಾವು

author-image
Ganesh
Updated On
Elephants: ದಾರುಣ ಘಟನೆ.. ಭೀಕರ ರೈಲು ಡಿಕ್ಕಿಗೆ 6 ಆನೆಗಳು ಸ್ಥಳದಲ್ಲೇ ಸಾವು
Advertisment
  • ಗಜಪಡೆಗೆ ಡಿಕ್ಕಿ ಹೊಡೆದ ಪ್ರಯಾಣಿಕರಿದ್ದ ರೈಲು
  • ಹಳಿ ತಪ್ಪಿದ ರೈಲು, ಪ್ರಯಾಣಿಕರು ಅಪಾಯದಿಂದ ಪಾರು
  • ಆನೆಗಳ ಸಾವಿನ ಬಗ್ಗೆ ತನಿಖೆ ಕೈಗೊಂಡ ಅಧಿಕಾರಿಗಳು

ಗಜಪಡೆಗೆ ಪ್ರಯಾಣಿಕರ ರೈಲು (Passenger train) ಡಿಕ್ಕಿ ಹೊಡೆದ ಪರಿಣಾಮ ಆರು ಆನೆಗಳು (Elephants) ಸ್ಥಳದಲ್ಲೇ ಜೀವ ಬಿಟ್ಟಿರುವ ಘಟನೆ ಶ್ರೀಲಂಕಾದಲ್ಲಿ (Sri Lanka) ನಡೆದಿದೆ. ಶ್ರೀಲಂಕಾದ ಕೊಲಂಬೊ ನಗರದ ಪೂರ್ವಕ್ಕಿರುವ ಹಬರಾನಾ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ.

Advertisment

ವನ್ಯಜೀವಿ ಅಭಯಾರಣ್ಯದ ಬಳಿ ರೈಲು ಹೋಗ್ತಿದ್ದ ವೇಳೆ ಆನೆಗಳ ಹಿಂಡಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ನಾಲ್ಕು ಮರಿ ಆನೆಗಳು ಮತ್ತು ಎರಡು ವಯಸ್ಕ ಆನೆಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಅಪಘಾತದ ರಭಸಕ್ಕೆ ರೈಲು ಹಳಿ ತಪ್ಪಿದ್ದು, ಸದ್ಯ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ 200 ಎಕರೆ ಅರಣ್ಯ ನಾಶ.. ಬೆಂಕಿ ಬಿದ್ದ ಹಿಂದೆ ಕಿಡಿಗೇಡಿಯ ಅನುಮಾನ

ಇದೇ ರೀತಿ 2024ರಲ್ಲಿ 9 ಆನೆಗಳು ಟ್ರೈನಿಗೆ ಬಲಿಯಾಗಿದ್ದವು. 2023ರಿಂದ ಇಲ್ಲಿಯವರೆಗೆ ಒಟ್ಟು 24 ಆನೆಗಳು ಟ್ರೈನ್​​ಗೆ ಸಾವನ್ನಪ್ಪಿವೆ. ದುರ್ಘನಾ ಸ್ಥಳವು ಶ್ರೀಲಂಕಾ ರಾಜಾಧಾನಿ ಕೋಲೊಂಬೋಗೆ 124 ಮೈಲು ದೂರ ಇದೆ. ಪ್ರಕರಣ ಸಂಬಂಧ ವನ್ಯಜೀವಿಗಳ ವಿಭಾಗ ತನಿಕೆ ಆರಂಭಿಸಿದೆ. ಮಿನ್ನೇರಿಯಾ ನ್ಯಾಷನಲ್ ಪಾರ್ಕ್​​ (Minneriya National Park) ತುಂಬಾನೇ ಪ್ರಸಿದ್ಧಿ ಪಡೆದಿದೆ. ಇಲ್ಲಿಗೆ ನಿತ್ಯ ಸಾವಿರಾರು ಪ್ರವಾಸಿಗರು ಆನೆಗಳನ್ನು ನೋಡಲು ಸಫಾರಿಗೆ ಬರುತ್ತಾರೆ.

Advertisment

ಇದನ್ನೂ ಓದಿ: ಮೇಡಂ ಸೆಲ್ಫಿ ಅಂತಾ ಬಂದು ಖ್ಯಾತ ನಟಿಗೆ KISS ಕೊಡಲು ಯತ್ನಿಸಿದ ಫ್ಯಾನ್; ಆಮೇಲೆ ಏನಾಯ್ತು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment