/newsfirstlive-kannada/media/post_attachments/wp-content/uploads/2025/07/klb-train.jpg)
ಕಲಬುರಗಿ: ಹಾಸನ್- ಸೋಲಾಪುರ ಎಕ್ಸ್‌ಪ್ರೆಸ್​ ರೈಲಿನಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿದೆ. ಇದರಿಂದ ಆತಂಕಗೊಂಡ ಪ್ರಯಾಣಿಕರು ರೈಲಿನಿಂದ ಆಚೆ ಓಡಿ ಬಂದಿದ್ದಾರೆ. ಶಹಾಬಾದ್ ತಾಲೂಕಿನ ಮರತೂರ ಸಮೀಪದಲ್ಲಿ ಹಾಸನ- ಸೋಲಾಪುರ ಎಕ್ಸ್‌ಪ್ರೆಸ್ ರೈಲಿನ ಬ್ರೇಕ್ ಬೈಂಡಿಂಗ್‌ನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡು ಕೆಲ ಹೊತ್ತು ಪ್ರಯಾಣಿಕರಲ್ಲಿ ಆತಂಕ ಉಂಟು ಮಾಡಿತು.
/newsfirstlive-kannada/media/post_attachments/wp-content/uploads/2025/07/klb-train1.jpg)
ಹಾಸನ್- ಸೋಲಾಪುರ ನಂಬರ್ 11312 ಎಕ್ಸಪ್ರೇಸ್​ನ ಬ್ರೇಕ್ ಬೈಡಿಂಗ್ ತಾಂತ್ರಿಕ ದೋಷದಿಂದ ಈ ಹೊಗೆ ಕಾಣಿಸಿಕೊಂಡಿದೆ. ಇಂದು ಬೆಳಿಗ್ಗೆ 5:45ರ ಸುಮಾರಿಗೆ ಬ್ರೇಕ್ ಬೈಂಡಿಂಗ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಆ ಕೂಡ ತಕ್ಷಣ ಪಾಯಿಂಟ್ ಮ್ಯಾನ್ ಗಮನಿಸಿ ರೇಡ್ ಹ್ಯಾಂಡ್ ಸಿಗ್ನಲ್ ತೋರಿಸಿ ರೈಲು ನಿಲ್ಲಿಸಲಾಗಿತ್ತು. 19 ನಿಮಿಷ ರೈಲು ನಿಲ್ಲಿಸಿ ದೋಷ ಸರಿಪಡಿಸಿದ ಬಳಿಕ ರೈಲು ಪುನಃ ಸಂಚಾರ ಮಾಡಿತು. ಇದಾದ ಬಳಿಕ ಪ್ರಯಾಣಿಕರು ನಿಟ್ಟುಸಿರು ಬಿಟ್ಟು ಮತ್ತೆ ರೈಲಿನ ಒಳಗೆ ಹೋಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us