/newsfirstlive-kannada/media/post_attachments/wp-content/uploads/2024/08/TRAIN.jpg)
ನವದೆಹಲಿ: ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಇಲಾಖೆ ಸಿಹಿ ಸುದ್ದಿಯೊಂದನ್ನ ನೀಡಿದೆ. ಇಷ್ಟು ದಿನ ಪ್ರಯಾಣಿಕರು ರೈಲು ಟಿಕೆಟ್ ಮುಂಗಡವಾಗಿ ಬುಕ್ ಮಾಡಲು 120 ದಿನಗಳನ್ನು ಕಾಯಬೇಕಾಗಿತ್ತು. ಇದೀಗ ಅಷ್ಟು ದಿನಕ್ಕೆ ಚಿಂತೆ ಮಾಡಬೇಕಾಗಿಲ್ಲ. ಮುಂಗಡವಾಗಿ ಟಿಕೆಟ್ ಬುಕ್ ಮಾಡಲು ಪರದಾಡುತ್ತಿದ್ದ ಪ್ರಯಾಣಿಕರು ಇನ್ಮುಂದೆ ಆರಾಮಾಗಿ ತಮ್ಮ ಪ್ರಯಾಣ ಖಚಿತಪಡಿಸಿಕೊಳ್ಳಬಹುದು.
ಇದನ್ನೂ ಓದಿ: ರೈಲು ಕಿಟಕಿಯಿಂದ ಜಾರಿ ಬಿದ್ದ ಕಂದಮ್ಮ; 16 ಕಿ.ಮೀ ಓಡುತ್ತಲೇ ಮಗಳನ್ನ ಉಳಿಸಿಕೊಂಡ ಅಪ್ಪ; ಇದು ಕರುಣಾಜನಕ ಸ್ಟೋರಿ!
ರೈಲ್ವೇ ಇಲಾಖೆ ರೈಲು ಟಿಕೆಟ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದೆ. ಇನ್ಮುಂದೆ ಪ್ರಯಾಣಿಕರು ರೈಲು ಟಿಕೆಟ್‌ಗಳನ್ನ 60 ದಿನ ಮುಂಚಿತವಾಗಿ ಬುಕ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ಇದುವರೆಗೂ 120 ದಿನ ಕಾಯಬೇಕಿತ್ತು. ಇದೀಗ ಮುಂಚಿತವಾಗಿ ಟಿಕೆಟ್ ಬುಕ್ಕಿಂಗ್ ಮಾಡುವ ಅವಧಿಯನ್ನು 60 ದಿನಕ್ಕೆ ಕಡಿತ ಮಾಡಲಾಗಿದೆ.
ರೈಲ್ವೆ ಇಲಾಖೆಯ ಈ ಮಹತ್ವದ ಬದಲಾವಣೆಯ ನಿಯಮ ಇದೇ ನವೆಂಬರ್ 1ರಿಂದ ದೇಶಾದ್ಯಂತ ಜಾರಿಗೆ ಬರುತ್ತಿದೆ. IRCTCನಲ್ಲಿ ಮುಂಚಿತವಾಗಿ ಟಿಕೆಟ್ ಬುಕ್ಕಿಂಗ್ ಮಾಡುವವರು ಮುಂದಿನ ಕನ್ನಡ ರಾಜ್ಯೋತ್ಸವದಿಂದ ಈ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ನವೆಂಬರ್ 1ರಿಂದ ಹೊಸ ವರ್ಷಕ್ಕೆ ರೈಲಿನಲ್ಲಿ ಪ್ರಯಾಣ ಮಾಡುವ ಗ್ರಾಹಕರು ತಮ್ಮ ಟಿಕೆಟ್‌ಗಳನ್ನು ಮುಂಚಿತವಾಗಿ ಪ್ರಯಾಣ ಮಾಡಬಹುದು. ನವೆಂಬರ್ 1ರಿಂದ 60 ದಿನಗಳ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಅಂದ್ರೆ ಜನವರಿ 1, 2025ರಂದು ರೈಲಿನಲ್ಲಿ ಪ್ರಯಾಣ ಬೆಳೆಸಲು ಭಾರತೀಯ ರೈಲ್ವೆ ಇಲಾಖೆ ಅವಕಾಶವನ್ನು ಒದಗಿಸುತ್ತಿದೆ. ಭಾರತೀಯ ರೈಲ್ವೆ ಇಲಾಖೆಯ ಈ ನಿಯಮ ಬದಲಾವಣೆಯಿಂದ ರೈಲುಗಳ ಟಿಕೆಟ್ ಬುಕ್ಕಿಂಗ್ ಪ್ರಮಾಣ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಹೊಂದಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ