/newsfirstlive-kannada/media/post_attachments/wp-content/uploads/2025/02/JAYALALITHA.jpg)
ತಮಿಳುನಾಡಿನ ಮಾಜಿ ಮುಖ್ಯಂತ್ರಿ ದಿವಂಗತ ಜಯಲಲಿತಾ ಅವರ ಬೆಲೆ ಬಾಳುವ ವಸ್ತುಗಳನ್ನು ಈಗ ತಮಿಳುನಾಡಿನ ಸರ್ಕಾರದ ಸುಪರ್ದಿಗೆ ನೀಡಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಎಸ್ಪಿಪಿ ಕಿರಣ್ ಜವಳಿ, ತಮಿಳುನಾಡು ಸರ್ಕಾರಕ್ಕೆ ಚಿನ್ನಾಭರಣವನ್ನು ಮರಳಿ ಕೊಡುವ ಆದೇಶವಾಗಿದೆ ಈ ಹಿನ್ನೆಲೆಯಲ್ಲಿ ಸರ್ಕಾರದ ಸುಪರ್ದಿಗೆ ಅವುಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕುಂಭ ಮೇಳ ಕಾಲ್ತುಳಿತಕ್ಕೆ ಹೋಗ್ಬಿಟ್ಟ ಅಂದ್ಕೊಂಡ ಕುಟುಂಬ.. ತಿಥಿ ಕಾರ್ಯದ ವೇಳೆ ನಗುನಗುತ್ತ ಎಂಟ್ರಿ ಕೊಟ್ಟ..!
ಸೀರೆ, ಫ್ರಿಡ್ಜ್, ಚಪ್ಪಲಿ ಅಂತ ಬರೆದಿದ್ದರು. ತಮಿಳುನಾಡು ವಿಜಲೇನ್ಸ್ ಅಧಿಕಾರಿಗಳು ಬಂದಿದ್ದರು. ಅವರ ಸಮಕ್ಷಮದಲ್ಲಿ ಪರಿಶೀಲನೆ ಮಾಡಲಾಗಿದ್ದು. ಒಟ್ಟು 11,344 ರೇಷ್ಮೆ ಸೀರೆ, 10 ಟಿವಿ, 12 ಫ್ರಿಡ್ಜ್, 8ವಿಸಆರ್ , 1 ವಿಡಿಯೋ ಕ್ಯಾಮರಾ, 4 ಸಿಡಿ ಪ್ಲೇಯರ್ಸ್, 2 ಆಡಿಯೋ ಡೆಕ್ಸ್, 24 ಟೇಪ್ ರೆಕಾರ್ಡರ್, 1040 ವಿಡಿಯೋ ಕ್ಯಾಸೆಟ್, ಐದು ಕಬ್ಬಿಣದ ಲಾಕರ್ಸ್ಗಳನ್ನು ಸರ್ಕಾರದ ಸುಪರ್ದಿಗೆ ನೀಡಲಾಗಿದೆ.
ಇದರ ಜೊತೆಗೆ ಮಾಜಿ ಸಿಎಂ ಜಯಲಲಿತಾಗೆ ಸಂಬಂಧಿಸಿದ ಒಟ್ಟು 27 ಕೆಜಿ ವಸ್ತುಗಳನ್ನು ಕೂಡ ಸರ್ಕಾರದ ಸುಪರ್ದಿಗೆ ನೀಡಲಾಗಿದೆ.
ಇದನ್ನೂ ಓದಿ:ಪಾಕ್ ಏರ್ಸ್ಪೇಸ್ ಮೇಲೆ ಪ್ರಧಾನಿ ಮೋದಿ ವಿಮಾನ 46 ನಿಮಿಷ ಹಾರಾಟ! ಹೇಗಿತ್ತು ಸೂಪರ್ ಭದ್ರತೆ..?
ಸೀಜ್ ಮಾಡಿದ್ದ ಬಸ್ ಕೂಡ ಸರ್ಕಾರಕ್ಕೆ ಹಸ್ತಾಂತರ ಮಾಡಲಾಗಿದೆ. 1526 ಎಕರೆ ಜಾಗ, ತಂಜಾವೂರು ಸೇರಿದಂತೆ ಬೇರೆ ಬೇರೆ ಕಡೆ ಜಮೀನು ಇದೆ. ಅದನ್ನು ಕೂಡ ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ. ಡಾಬು, ಖಡ್ಗ, ಒಂದು ಕೆಜಿ ಚಿನ್ನದ ಕಿರೀಟ, ಗೋಲ್ಡ್ ವಾಚ್, ಪೆನ್, ಸೀರೆ ಸೇರಿ ಒಟ್ಟು 1606 ವಸ್ತುಗಳನ್ನು ನೀಡಲಾಗಿದೆ ಒಟ್ಟು ೨೫ ಕಿಲೋ ಚಿನ್ನಾಭರಣ ಮತ್ತು ವಜ್ರ, ಒಂದು ಕೆ.ಜಿ ೮೫ ಲಕ್ಷದಂತೆ ಒಟ್ಟು ೩೦೦ ರಿಂದ ೩೫೦ ಕೋಟಿ ಬೆಲೆ ಬಾಳವ ಚಿನ್ನಭರಣಗಳನ್ನು ಸರ್ಕಾರದ ಸುಪರ್ದಿಗೆ ನೀಡಲಾಗಿದೆ ಎಂದು ಕಿರಣ್ ಜವಳಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ