ಅರ್ಧ ಕಿ.ಮೀ ಉದ್ದಕ್ಕೂ ಶವ‌ಗಳ‌ ಆಂಬ್ಯುಲೆನ್ಸ್.. ಏರುತ್ತಲೇ ಇದೆ ಸಾವಿನ ಸಂಖ್ಯೆ; ಕೇರಳ ಘೋರ ದೃಶ್ಯಗಳು ಇಲ್ಲಿವೆ!

author-image
admin
Updated On
ವಯನಾಡು ದುರಂತ; ನೂರಾರು ಮೃತದೇಹಗಳನ್ನು ಹೊತ್ತು ಸಾಗುತ್ತಿರೋ ಆ್ಯಂಬುಲೆನ್ಸ್​ಗಳು; ಎಲ್ಲೆಲ್ಲೂ ಸಾವಿನ ಕೇಕೆ!
Advertisment
  • ಬರೋಬ್ಬರಿ 21 ಆಂಬುಲೆನ್ಸ್​​​​ನಲ್ಲಿ 41 ಶವಗಳು ಮೆಪ್ಪಾಡಿಗೆ ರವಾನೆ
  • ನದಿಯಲ್ಲಿ ಕೊಚ್ಚಿ ಹೋದವರಿಗಾಗಿ ಇನ್ನೂ ಮುಂದುವರಿದ ಶೋಧ
  • ಮುಂಡಕೈ, ಚೂರಲ್​ಮಲಾ ವಯನಾಡಿನ ನಕ್ಷೆಯಿಂದ ಮಾಯ!

ಇದು ಪ್ರಕೃತಿಯ ರುದ್ರತಾಂಡವ.. ಕೇರಳಕ್ಕೆ ಪ್ರಳಯ ರುದ್ರನಾಗಿ ಕಾಡಿದ ವರುಣ ಕೊಟ್ಟ ಪೆಟ್ಟು ಅಂತಿದ್ದಲ್ಲ. ಹಸಿರ ವನರಾಶಿಯ ನಡುವೆ ನಳನಳಿಸುತ್ತಿದ್ದ ಗ್ರಾಮಗಳಲ್ಲಿ ಈಗ ಸ್ಮಶಾನಮೌನ. ಎಲ್ಲೆಲ್ಲೂ ಹೆಣಗಳ ರಾಶಿ.. ಸಾವು-ನೋವಿನ ಚೀತ್ಕಾರ.. ಜಲಾಸುರನ ಅಟ್ಟಹಾಸಕ್ಕೆ ದೇವರನಾಡು ಅಕ್ಷರಶಃ ನಲುಗಿದೆ.

ಇದನ್ನೂ ಓದಿ: 80 ಕಿ.ಮೀ ದೂರ ಕೊಚ್ಚಿ ಹೋದ ಶವ.. ರಾಶಿ ರಾಶಿ ಮೃತದೇಹಗಳು; ಕೇರಳದಲ್ಲಿ ಅಂತ್ಯ ಸಂಸ್ಕಾರವೇ ಘನಘೋರ! 

ನೆಲಸಮವಾದ ಕಟ್ಟಡಗಳು, ಕೆಸರು ತುಂಬಿದ ಹೊಂಡಗಳು, ಬೃಹತ್ ಬಂಡೆ ಕಲ್ಲುಗಳಿಂದ ಕೂಡಿದ ಬಿರುಕು ಬಿಟ್ಟ ನೆಲ ಇದು ಸದ್ಯ ವಯನಾಡಿನ ಮುಂಡಕೈ ಹಾಗೂ ಚೂರಲ್​ಮಲಾದಲ್ಲಿ ಕಂಡುಬರ್ತಿರುವ ಸನ್ನಿವೇಶಗಳು.. ದುರಂತದಲ್ಲಿ ಸಾವಿನ ಸಂಖ್ಯೆ 282 ದಾಟಿದ್ದು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. 132 ಸೇನಾ ಸಿಬ್ಬಂದಿ ಸೇರಿ ಎನ್​ಡಿಆರ್​ಎಫ್​, ಎಸ್​​ಡಿಆರ್​ಎಫ್​ನಿಂದ ಕಾರ್ಯಾಚರಣೆ ಮುಂದುವರಿದಿದೆ.

publive-image

ವಯನಾಡು ಭೂಕುಸಿತ.. ಸಾವಿನ ಸಂಖ್ಯೆ 250ಕ್ಕೂ ಹೆಚ್ಚು
ನದಿಯಲ್ಲಿ ಕೊಚ್ಚಿ ಹೋದವರಿಗಾಗಿ ಮುಂದುವರಿದ ಶೋಧ
ಕೇರಳದ ವಯನಾಡು ಜಿಲ್ಲೆಯ 4 ಗ್ರಾಮಗಳು ಮಳೆ ಹಾಗೂ ರಣಭೀಕರ ಭೂಕುಸಿತಕ್ಕೆ ಕೊಚ್ಚಿ ಹೋಗಿವೆ. ದುರಂತದಲ್ಲಿ ಸಾವಿನ ಸಂಖ್ಯೆ 250ರ ಗಡಿ ದಾಟಿದೆ. 250ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಇದುವರೆಗೂ 90ಕ್ಕೂ ಹೆಚ್ಚು ಮೃತದೇಹಗಳನ್ನು ಹೊರ ತೆಗೆಯಲಾಗಿದೆ.

ಇದನ್ನೂ ಓದಿ:ಕೇರಳ ಭೂಕುಸಿತ, 300 ಜನ ಸಾವನ್ನಪ್ಪಿದ್ದಾರಾ..? ಬೆಚ್ಚಿ ಬೀಳಿಸೋ ಸತ್ಯ ಬಿಚ್ಚಿಟ್ಟ ಸ್ಥಳೀಯ ನಿವಾಸಿ 

ಕೆಸರು ಮಿಶ್ರಿತ ನೀರಿನಲ್ಲಿ ಅಳಿದುಳಿದ ಅವಶೇಷಗಳ ಹುಡುಕಾಟ ಮುಂದುವರಿದಿದೆ. 132 ಸೇನಾ ಸಿಬ್ಬಂದಿ ಸೇರಿ ಎನ್​​ಡಿಆರ್​ಎಫ್​​, ಎಸ್​ಡಿಆರ್​​ಎಫ್ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು ನಿರಂತರ ಹುಡುಕಾಟ ನಡೆಸಿದೆ. ನೂರಾರು ಸಂತ್ರಸ್ತರಿಗೆ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ.

publive-image

21 ಆಂಬುಲೆನ್ಸ್​​​​ನಲ್ಲಿ 41 ಶವಗಳನ್ನ ಮೆಪ್ಪಾಡಿಗೆ ರವಾನೆ
ಗುಡ್ಡ ಕುಸಿತದ ಭೀಕರತೆ ಎಷ್ಟಿತ್ತು ಅಂದ್ರೆ, ಹಲವರ ಶವಗಳು 80 ಕಿಲೋ ಮೀಟರ್​ವರೆಗೂ ಕೊಚ್ಚಿ ಹೋಗಿವೆ. ಸೂಜಿಪಾರ್ ಅರಣ್ಯದ ಮೂಲಕ ನೆಲಂಬೂರಿ ನದಿಯಲ್ಲಿ ಕೊಚ್ಚಿ‌ ಹೋಗಿದ್ದ ಶವಗಳು ಪತ್ತೆ ಆಗಿದ್ದು, 21 ಆ್ಯಂಬುಲೆನ್ಸ್​​​​ನಲ್ಲಿ 41 ಶವಗಳನ್ನ ಮೆಪ್ಪಾಡಿಗೆ ರವಾನೆ ಮಾಡಲಾಗಿದೆ.

5 ಗಂಟೆ ಮೊದಲೇ ದುರಂತದ ಬಗ್ಗೆ ವರದಿ ಮಾಡಿದ್ದ ವರದಿಗಾರ
ಕೇರಳದಲ್ಲಿ ಭೀಕರ ಭೂಕುಸಿತ ಸಂಭವಿಸುವ 5 ಗಂಟೆ ಮೊದಲೇ ವಯನಾಡಿನಲ್ಲಿ ಸ್ಥಳೀಯ ಸುದ್ದಿವಾಹಿನಿ ವರದಿಗಾರ ಸಂಭಾವ್ಯ ದುರಂತದ ಕುರಿತು ವರದಿ ಮಾಡಿದ್ದ ವಿಡಿಯೋ ವೈರಲ್ ಆಗಿದೆ. ವಯನಾಡಿನ ನದಿ ನೀರಿನಲ್ಲಿ ಮಣ್ಣು ಮಿಶ್ರಣವಾಗಿ ಹರಿಯುತ್ತಿದೆ. ನದಿಯಲ್ಲಿ ದೊಡ್ಡ ದೊಡ್ಡ ಬಂಡೆಗಲ್ಲುಗಳು ಹಾಗೂ ಮರದ ತುಂಡುಗಳು ಹರಿಯುತ್ತಿದ್ದು, ಇದು ಗುಡ್ಡದಲ್ಲಿ ಭೂಕುಸಿತವಾಗಿರುವ ಕುರಿತು ಮುನ್ಸೂಚನೆಯಿದೆ ಅಂತ ವರದಿ ಮಾಡಿದ್ದ. 280ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ದುರಂತದ ಬಗ್ಗೆ 5 ಗಂಟೆ ಮೊದಲೇ ಎಚ್ಚರಿಸಿದ್ದರೂ ದುರಂತ ನಡೆದು ಹೋಗಿದೆ.

ಪ್ರಾಣ ಕಳೆದುಕೊಂಡವರು ಒಂದೆಡೆಯಾದರೆ, ಕಣ್ಣೆದುರೇ ತಮ್ಮವರನ್ನು ಕಳೆದುಕೊಂಡವರು ಇನ್ನೊಂದೆಡೆ. ತಮ್ಮವರು ಕೆಸರು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದರೂ, ಅವಶೇಷಗಳಡಿ ಹೂತು ಹೋಗುತ್ತಿದ್ದರೂ ಕಾಪಾಡಲಾಗದಂತಹ ಅಸಹಾಯಕ ಪರಿಸ್ಥಿತಿ ಕೆಲವರದು. ಬದುಕುಳಿದವರು ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡು, ಮನೆಗಳನ್ನು ಕಳೆದುಕೊಂಡು ಹೋರಾಡುತ್ತಿದ್ದಾರೆ. ಕೇರಳದ ದುರಂತಕ್ಕೆ ಹಲವು ರಾಷ್ಟ್ರಗಳ ನಾಯಕರು ಸಂತಾಪ ಸೂಚಿಸಿದ್ದಾರೆ.

publive-image

ಒಟ್ಟಿನಲ್ಲಿ ದುರಂತದ ಬಳಿಕ ಮುಂಡಕೈ ಹಾಗೂ ಚೂರಲ್​ಮಲಾ ವಯನಾಡಿನ ನಕ್ಷೆಯಿಂದ ಮರೆಯಾಗಿವೆ. ಅಲ್ಲಿ ಈಗ ಏನೂ ಉಳಿದಿಲ್ಲ. ಮಣ್ಣು ಹಾಗೂ ಬಂಡೆಗಳ ಹೊರತು ಬೇರೇನೂ ಇಲ್ಲ. ಎಲ್ಲವೂ ಕೆಸರುಮಯವಾಗಿದ್ದು ಮರೆಯಲಾಗದ ದುರಂತವಾಗಿ ಇತಿಹಾಸದ ಪುಟ ಸೇರಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment