/newsfirstlive-kannada/media/post_attachments/wp-content/uploads/2025/06/Roshni-Rajendra-Songhare-7.jpg)
ನಿನ್ನೆ ಮಧ್ಯಾಹ್ನ ಅಹ್ಮದಾಬಾದ್​ನಲ್ಲಿ ಘೋರ ವಿಮಾನ ದುರಂತ ಸಂಭವಿಸಿದೆ. ಕರಾಳ ಘಟನೆಯಲ್ಲಿ ವಿಮಾನದಲ್ಲಿದ್ದ 241 ಪ್ರಯಾಣಿಕರು ಜೀವ ಕಳೆದುಕೊಂಡಿದ್ದಾರೆ. ಮೃತರಲ್ಲಿ ಕ್ಯಾಬಿನ್ ಸಿಬ್ಬಂದಿ ರೊಶ್ನಿ ರಾಜೇಂದ್ರ ಸೋಂಘರೆ ಕೂಡ ಇಬ್ಬರು.
/newsfirstlive-kannada/media/post_attachments/wp-content/uploads/2025/06/Roshni-Rajendra-Songhare-4.jpg)
ತುಂಬಾ ಜನಪ್ರಿಯತೆ..
ಕ್ಯಾಬಿನ್ ಸಿಬ್ಬಂದಿ ಆಗಿದ್ದ ರೋಶ್ನಿ ರಾಜೇಂದ್ರ ಸೋಂಘರೆ ತುಂಬಾನೇ ಜನಪ್ರಿಯತೆ ಪಡೆದುಕೊಂಡಿದ್ದರು. ಪ್ರಯಾಣಿಕರ ಸ್ನೇಹಿಯಾಗಿದ್ದ, ರೋಶ್ನಿ ಸೋಶಿಯಲ್ ಮೀಡಿಯಾ ಮೂಲಕವೂ ಸಕಷ್ಟು ಹೆಸರು ಮಾಡಿದ್ದರು.
/newsfirstlive-kannada/media/post_attachments/wp-content/uploads/2025/06/Roshni-Rajendra-Songhare-6.jpg)
ಇವರು ಇನ್​ಸ್ಟಾಗ್ರಾಮ್​ನಲ್ಲಿ 54 ಸಾವಿರಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದರು. ವಿಮಾನ ಪ್ರಯಾಣದ ವೇಳೆ ಪ್ರಯಾಣಿಕರ ಅಚ್ಚುಮೆಚ್ಚು ಆಗಿದ್ದರು. ಇವರು ಏರ್ ಇಂಡಿಯಾದಲ್ಲಿ ಫ್ಲೈಟ್ ಅಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದರು.
ಮೂಲತಹ ಮಹಾರಾಷ್ಟ್ರದವರಾಗಿದ್ದ ರೋಶ್ನಿ ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಮಗಳ ಕಳೆದುಕೊಂಡ ಕುಟುಂಬದ ದುಃಖದ ಕಟ್ಟೆ ಒಡೆದಿದೆ. ರೋಶ್ನಿ ಅವರು ಅಹ್ಮದಾಬಾದ್​ನಿಂದ ಹೊರಡುವ ಮುನ್ನ ಪೋಷಕರಿಂದ ಬೀಳ್ಕೊಡುಗೆ ಪಡೆದಿದ್ದರು. ಮಹಾರಾಷ್ಟ್ರದ ಮುಂಬೈನ ರಾಜಾಜಿ ಪಾತ್​ನ ನವ ಉಮಿಯಾ ಕೃಪಾ ಸೊಸೈಟಿಯಲ್ಲಿ ರೋಶ್ನಿ ಪೋಷಕರು ವಾಸವಿದ್ದಾರೆ. ತಂದೆಯ ಹೆಸರು ರಾಜೇಂದ್ರ ತಾಯಿ ರಾಜಶ್ರಿ. ಇವರಿಗೆ ಓರ್ವ ಸಹೋದರನಿದ್ದು, ಆತನ ಹೆಸರು ವಿಘ್ನೇಶ್.
/newsfirstlive-kannada/media/post_attachments/wp-content/uploads/2025/06/Roshni-Rajendra-Songhare-5.jpg)
ಅಹ್ಮದಾಬಾದ್​ನಿಂದ ಲಂಡನ್​ಗೆ ಹೊರಟಿದ್ದ ಏರ್​ ಇಂಡಿಯಾದ ಬೋಯಿಂಗ್-787 ಡ್ರೀಮ್‌ಲೈನರ್ ವಿಮಾನ ( Boeing 787 Dreamliner) ಘೋರ ದುರಂತಕ್ಕೆ ಒಳಗಾಗಿದೆ. ಮಧ್ಯಾಹ್ನ 1.38ಕ್ಕೆ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಮಘಾನಿನಗರ ಪ್ರದೇಶದ ಬಿಜೆ ಎಂಬಿಬಿಎಸ್ ಹಾಸ್ಟೆಲ್​​ ಮೇಲೆ ಬಂದು ಅಪ್ಪಳಿಸಿತು.
ಪರಿಣಾಮ ವಿಮಾನದಲ್ಲಿದ್ದ 241 ಪ್ರಯಾಣಿಕರು ಹಾಗೂ ಹಾಸ್ಟೆಲ್​​ನಲ್ಲಿದ್ದ 24 ಭಾವಿ ವೈದ್ಯರು ಜೀವಬಿಟ್ಟಿದ್ದಾರೆ. ಇನ್ನು, ವಿಮಾನದಲ್ಲಿದ್ದ ಓರ್ವ ಪ್ರಯಾಣಿಕ ಜಿಗಿದು ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮೂವರು ಮುದ್ದಾದ ಮಕ್ಕಳೊಂದಿಗೆ ದುರಂತ ಅಂತ್ಯ.. ಈ ದಂಪತಿಗೆ ಇತ್ತು ಬೆಳಗಾವಿ ಲಿಂಕ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us