/newsfirstlive-kannada/media/post_attachments/wp-content/uploads/2024/03/Hardik_Head.jpg)
ಸದ್ಯ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಇಂಡಿಯನ್ ಪ್ರೀಮಿಯರ್ ಲೀಗ್ ಹೈವೋಲ್ಟೇಜ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಟ್ರಾವೀಸ್ ಹೆಡ್ ಭರ್ಜರಿ ಬ್ಯಾಟಿಂಗ್ ಮಾಡಿದ್ರು.
ಮುಂಬೈ ಇಂಡಿಯನ್ಸ್ ಬೌಲರ್ಗಳ ಬೆಂಡೆತ್ತಿದ ಟ್ರಾವೀಸ್ ಹೆಡ್ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಕೇವಲ 24 ಬಾಲ್ನಲ್ಲಿ 3 ಸಿಕ್ಸರ್, 9 ಫೋರ್ ಸಮೇತ 64 ರನ್ ಸಿಡಿಸಿ ದಾಖಲೆ ಬರೆದರು. ಇವರ ಸ್ಟ್ರೈಕ್ ರೇಟ್ 260 ಇತ್ತು.
ಓಪನರ್ ಟ್ರಾವಿಸ್ ಹೆಡ್ಗೆ ಸಾಥ್ ನೀಡಿದ ಅಭಿಶೇಕ್ ಶರ್ಮಾ ಮೊದಲು ಕೇವಲ 16 ಬಾಲ್ನಲ್ಲಿ ಅರ್ಧಶತಕ ಸಿಡಿಸಿದ್ರು. ಬಳಿಕ ತಾನು ಆಡಿದ 23 ಬಾಲ್ನಲ್ಲಿ 7 ಸಿಕ್ಸರ್, 3 ಫೋರ್ ಸಮೇತ 63 ರನ್ ಚಚ್ಚಿ ಕ್ಯಾಚ್ ನೀಡಿದ್ರು.
ಇದನ್ನೂ ಓದಿ:6,6,6,6,6,6,4,4; ಕೇವಲ 16 ಬಾಲ್ನಲ್ಲಿ 50 ರನ್ ಚಚ್ಚಿದ ಅಭಿಶೇಕ್ ಶರ್ಮಾ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ