4,4,4,4,4,4,4,4,4,4,4,4,4,4,4,4,4,4; ಭಾರತ-ಆಸೀಸ್ ಟೆಸ್ಟ್​​ನಲ್ಲಿ ಸ್ಫೋಟಕ ಶತಕ ಸಿಡಿಸಿದ ಸ್ಟಾರ್ ಬ್ಯಾಟರ್​​

author-image
Ganesh Nachikethu
Updated On
ಆಸ್ಟ್ರೇಲಿಯಾ ವಿರುದ್ಧ 4ನೇ ಟೆಸ್ಟ್​; ಈ ಮುನ್ನವೇ ಟೀಮ್​ ಇಂಡಿಯಾಗೆ ಭರ್ಜರಿ ಗುಡ್​ನ್ಯೂಸ್​
Advertisment
  • ಟೀಮ್​ ಇಂಡಿಯಾ, ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್‌
  • ಗಬ್ಬಾ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಮಹತ್ವದ ಪಂದ್ಯ
  • ಸ್ಫೋಟಕ ಶತಕ ಸಿಡಿಸಿದ ಆಸ್ಟ್ರೇಲಿಯಾದ ಸ್ಟಾರ್​ ಬ್ಯಾಟರ್​​​

ಟೀಮ್​ ಇಂಡಿಯಾ, ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್‌ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯುತ್ತಿದೆ. ಗಬ್ಬಾ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಟ್ರಾವಿಸ್‌ ಹೆಡ್‌ ಅಬ್ಬರಿಸಿದ್ದಾರೆ. ಭರ್ಜರಿ ಫಾರ್ಮ್​ನಲ್ಲಿರೋ ಟ್ರಾವಿಸ್​ ಹೆಡ್​​​ ಟೀಮ್​ ಇಂಡಿಯಾ ಪಾಲಿಗೆ ತಲೆನೋವಾಗಿ ಪರಿಣಮಿಸಿದ್ದಾರೆ.

ಮೂರನೇ ಟೆಸ್ಟ್‌ ಪಂದ್ಯದ ಮೊದಲ ದಿನಕ್ಕೆ ಮಳೆ ಅಡ್ಡಿಯಾಗಿತ್ತು. ಹಾಗಾಗಿ ಕೇವಲ 13 ಓವರ್​ ಮಾತ್ರ ಬೌಲಿಂಗ್​​ ಎಸೆಯಲಾತ್ತು. 2ನೇ ದಿನದಾಟದಲ್ಲಿ ಆಸ್ಟ್ರೇಲಿಯಾ ಅತ್ಯುತ್ತಮ ಆಟ ಮುಂದುವರಿಸಿದೆ. ಬ್ಯಾಕ್​ ಟು ಬ್ಯಾಕ್​ ಕಳೆದುಕೊಂಡ ಆಸ್ಟ್ರೇಲಿಯಾ ತಂಡಕ್ಕೆ ಟ್ರಾವಿಸ್‌ ಹೆಡ್‌ ನೆರವಾದರು. ನೆಲಕಚ್ಚಿ ನಿಂತು ಬ್ಯಾಟಿಂಗ್​​ ನಡೆಸಿದ್ರು.

ಟ್ರಾವಿಸ್​​ ಹೆಡ್‌ ಅಬ್ಬರ

ಆಡಿಲೇಡ್‌ 2ನೇ ಟೆಸ್ಟ್​ ಪಂದ್ಯದಲ್ಲಿ ಅಬ್ಬರಿಸಿದ್ದ ಟ್ರಾವಿಸ್ ಹೆಡ್‌ ಅದೇ ಫಾರ್ಮ್‌ ಮುಂದುವರಿಸಿದ್ರು. ಬ್ರಿಸ್ಬೇನ್​ನಲ್ಲೂ ಮಿಂಚಿದ ಅವರು ಟೀಮ್ ಇಂಡಿಯಾ ಬೌಲರ್‌ಗಳಿಗೆ ಕಾಟ ನೀಡಿದರು. ಇನ್ನಿಂಗ್ಸ್​ ಉದ್ದಕ್ಕೂ ಬೌಲರ್​​ಗಳ ಬೆಂಡೆತ್ತಿದ ಹೆಡ್​​​ 160 ಬಾಲ್​​ನಲ್ಲಿ 152 ರನ್​ ಚಚ್ಚಿದ್ರು. ಬರೋಬ್ಬರಿ 18 ಬೌಂಡರಿ ಸಿಡಿಸಿದ್ರು.

ಸ್ಮಿತ್ ಶತಕ

ಇಷ್ಟು ದಿನ ರನ್‌ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದ ಸ್ಟೀವ್ ಸ್ಮಿತ್ ಕೂಡ ಅಬ್ಬರಿಸಿದರು. ಇವರು ಭಾರತದ ವಿರುದ್ಧವೇ 10ನೇ ಶತಕ ಬಾರಿಸಿದರು. ತಾನು ಎದುರಿಸಿದ 185 ಎಸೆತಗಳಲ್ಲಿ 12 ಬೌಂಡರಿ ನೆರವಿನಿಂದ ಶತಕ ಬಾರಿಸಿ ಅಬ್ಬರಿಸಿದರು. ಈ ಮೂಲಕ 500ಕ್ಕೂ ಹೆಚ್ಚು ದಿನಗಳ ಬಳಿಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಶತಕ ಬಾರಿಸಿ ಮಿಂಚಿದರು.

2ನೇ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ ಬರೋಬ್ಬರಿ 405 ರನ್​​ ಕಲೆ ಹಾಕಿದೆ. 7 ವಿಕೆಟ್​​ ಕಳೆದುಕೊಂಡು ಬೃಹತ್​​ ರನ್​ ಕಲೆ ಹಾಕಿರೋ ಆಸ್ಟ್ರೇಲಿಯಾ ಟೀಮ್​ ಇಂಡಿಯಾಗೆ ಸವಾಲ್​ ಹಾಕಿದೆ. ಸ್ಮಿತ್​​, ಟ್ರಾವಿಸ್​ ಹೆಡ್​ ಭಾರತವನ್ನು ಕಾಡಿದ್ರು.

ಇದನ್ನೂ ಓದಿ:6,6,6,6,6,6; ಸಿಡಿಲಬ್ಬರದ ಅರ್ಧಶತಕ ಸಿಡಿಸಿದ RCB ಸ್ಫೋಟಕ ಬ್ಯಾಟರ್​​ ರಜತ್ ಪಾಟಿದಾರ್​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment