/newsfirstlive-kannada/media/post_attachments/wp-content/uploads/2025/06/BNG_AKSHAY_BIKE.jpg)
- ಅಪ್ಪನ ಖುಷಿ ಹೆಚ್ಚಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಪುತ್ರ ಅಕ್ಷಯ್
- ಅಪೊಲೊ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್, ಬೆಚ್ಚಿ ಬೀಳಿಸುವ ಅಂಶ ರಿವೀಲ್
- ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಜಯ ಮೃತ್ಯುಂಜಯ ಹೋಮ
ಆತ ಇಡೀ ಕುಟುಂಬದ ಆಧಾರ ಸ್ತಂಭ. ಅಪ್ಪನ ಜೊತೆಗೆ ಅಜ್ಜಿಯನ್ನ ಕೂಡ ಮನೆಯಲ್ಲಿ ಅಡುಗೆ ಮಾಡಿ ನೋಡಿಕೊಳ್ತಿದ್ದ. ಮೊನ್ನೆ ಅಪ್ಪನ ಬರ್ತ್ ಡೇಗೆ ಮಾಂಸ ತರಲು ಹೋಗಿದ್ದಾನೆ. ದಾರಿ ಮಧ್ಯೆ ಎದುರಾಗಿದ್ದು ದುರಂತ. ಪರಿಣಾಮ ಕುಟುಂಬದ ಆಧಾರ ಸ್ತಂಭ ಆಸ್ಪತ್ರೆಯ ಐಸಿಯೂನಲ್ಲಿ ಅಂಗಾತವಾಗಿ ಮಲಗಿದೆ. ಅಷ್ಟಕ್ಕೂ ಇಲ್ಲಾಗಿದ್ದೇನು?
ಆಕ್ರಂದನ, ಕಣ್ಣೀರು, ಅಸಹಾಯಕತೆ. ಅಜ್ಜಿಯ ಆಕ್ರಂದನ ಹಿಂದೆ, ತಾತನ ಕಣ್ಣೀರ ಹಿಂದೆ, ಸಹೋದರನ ಅಸಹಾಯಕತೆ ಹಿಂದೆ ಈ ಕುಟುಂಬಕ್ಕೆ ಬರಸಿಡಿಸಿಲಿನಿಂದ ಅಪ್ಪಳಿಸಿದ ಆಘಾತಕಾರಿ ವಿಚಾರ ಇದೆ. ಅಷ್ಟಕ್ಕೂ ಇವರೆಲ್ಲರ ಕಣ್ಣೀರಿಗೆ ಕಾರಣವಾಗಿದ್ದು, ಒಂದು ದುರಂತ. ಅಷ್ಟಕ್ಕೂ ವಿಧಿಯಾಡಿದ ಆ ಘೋರ ದುರಂತದ ಕಥೆ. ಅದಕ್ಕಿಂತ ಮೊದಲು ಇವರೆಲ್ಲರ ಕಣ್ಣೀರಿಗೆ ಕಾರಣವಾದ, ಇಡೀ ಕುಟುಂಬಕ್ಕೆ ವಿಲನ್ ಆದ ಆ ವ್ಯಕ್ತಿ ಯಾರು?.
ಜಸ್ಟ್ ಮೂರು ಸೆಕಂಡ್ ನ ಹಿಂದೆ ದ್ವಿಚಕ್ರ ವಾಹನದ ಸವಾರನ ಮೇಲೆ ಮರ ಬಿದ್ದು ಸವಾರ ಅಂಗಾತವಾಗಿ ಮಲಗಿದ್ದಾರೆ. ಇಂತಹ ದೃಶ್ಯ ಕಂಡು ಬಂದಿದ್ದು ಬನಶಂಕರಿಯ ಒಂದನೇ ಹಂತದ ಬ್ರಹ್ಮ ಚೈತನ್ಯ ಮಂದಿರದ ಮುಂಭಾಗದಲ್ಲಿ. ಮರದ ಕೊಂಬೆ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡ್ತಿರುವ ವ್ಯಕ್ತಿಯ ಹೆಸರು ಅಕ್ಷಯ್.
ಅಕ್ಷಯ್ ಮೂಲತಃ ಬನಶಂಕರಿಯ ಕತ್ರಿಗುಪ್ಪೆಯ ಶ್ರೀನಗರದ ನಿವಾಸಿ. ರಾಜಾಜಿನಗರದ ಖಾಸಗಿ ಕಂಪನಿವೊಂದರಲ್ಲಿ ಹೆಚ್.ಆರ್. ಕೆಲಸ ಮಾಡ್ತಿದ್ದ. ಇಡೀ ಕುಟುಂಬದ ಆಧಾರ ಸ್ತಂಭವಾಗಿದ್ದ. ತಾನೇ ದುಡಿದು ಇಡೀ ಕುಟುಂವನ್ನ ಸಾಕ್ತಿದ್ದ.ಯಾಕಂದ್ರೆ ಅಕ್ಷಯ್ ಕುಟುಂಬದಲ್ಲಿ ಕಣ್ಣೀರ ಕಹಾನಿದೆ. ದುರಂತ ಕಥೆಗಳ ಅಧ್ಯಾಯ ಇದೆ. ಮೊದಲು ಈ ಘಟನೆ ನಡೆದ ದಿನ ಏನೇನಾಯಿತು?.
ಅಪ್ಪನ ಬರ್ತ್ ಡೇಗೆ ಮಟನ್ ತರಲು ಹೋದವನ ಬದುಕಲ್ಲಿ ವಿಧಿಯಾಟ
ಜೂನ್ 15ರ ಭಾನುವಾರ ಅಕ್ಷಯ್ ತಂದೆ ಶಿವರಾಮ್​ರ 62ನೇ ಬರ್ತ್ ಡೇ. ಅಪ್ಪನಿಗೆ ಮಟನ್ ಇಷ್ಟ ಅನ್ನೋ ಕಾರಣಕ್ಕೆ ಹುಟ್ಟು ಹಬ್ಬದ ದಿನ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಮಟನ್ ತರಲು ಹೋಗಿದ್ದಾನೆ. ಮಟನ್ ತಗೊಂಡು ವಾಪಸ್ ಬರುತ್ತಿದ್ದಾಗ ಬ್ರಹ್ಮ ಮಂದಿರದ ಬಳಿ ಮರದ ಕೊಂಬೆ ಮುರಿದು ಅಕ್ಷಯ್ ತಲೆ ಮೇಲೆ ಬಿದ್ದಿದೆ.
ಮರದ ಕೊಂಬೆ ಬಿದ್ದ ಏಟಿಗೆ ಅಕ್ಷಯ್ ರಸ್ತೆಗೆ ಬಿದ್ದಿದ್ದಾನೆ. ಪ್ರಜ್ಞೆಯನ್ನ ಕಳೆದುಕೊಂಡಿದ್ದಾನೆ. ಪ್ರಜ್ಜೆ ತಪ್ಪಿ ರಸ್ತೆಗೆ ಬಿದ್ದ ಅಕ್ಷಯ್​​ನನ್ನ ಕೂಡಲೇ ಸ್ಥಳೀಯ ಪ್ರಶಾಂತ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ತಲೆ ಭಾಗಕ್ಕೆ ಗಂಭೀರ ಗಾಯವಾದ ಕಾರಣ, ತಲೆಯಲ್ಲಿ ರಕ್ತ ಹರಿಯುತ್ತಿರೋದು ನಿಲ್ಲದ ಕಾರಣ ತ್ಯಾಗರಾಜನಗರದ ಪ್ರಶಾಂತ್ ಆಸ್ಪತ್ರೆಯಿಂದ ಜಯನಗರದ 3ನೇ ಬ್ಲಾಕ್​ನಲ್ಲಿರುವ ಅಪೊಲೊ ಆಸ್ಪತ್ರೆಗೆ ದಾಖಲಿಸಿದ್ದಾರೆ.
ತಲೆಯ ಮೆದುಳಿನ ಚಿಪ್ಪು 12 ಚೂರಾಗಿರೋದು ಸ್ಕ್ಯಾನಿಂಗ್​​ನಲ್ಲಿ ಬಯಲು
ಭಾನುವಾರ ಮಧ್ಯಾಹ್ನ ಜಯನಗರದ ಅಪೊಲೋ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿದಾಗ ಅಕ್ಷಯ್ ಮೆದುಳಿನ ಚಿಪ್ಪು 12 ಚೂರಾಗಿರೋದು ಗೊತ್ತಾಗುತ್ತೆ. ತಲೆ ಭಾಗಕ್ಕೆ ಗಂಭೀರ ಗಾಯವಾದ ಹಿನ್ನೆಲೆ, ಅಪೊಲೋ ಆಸ್ಪತ್ರೆಯ ವೈದ್ಯರು ಕೂಡಲೇ ಆಪರೇಷನ್ ಮಾಡಿದ್ದಾರೆ.
ಆಪರೇಷನ್ ಮಾಡಿ 72 ಗಂಟೆಯಾದರೂ ಅಕ್ಷಯ್​​ಗೆ ಇನ್ನೂ ಪ್ರಜ್ಞೆ ಬಂದಿಲ್ಲ. ಅಕ್ಷಯ್ ಈಗ ಕಣ್ ಬಿಡ್ತಾನೆ, ಮತ್ತೆ ಕಣ್ ಬಿಡ್ತಾನೆಂದು ಇಡೀ ಕುಟುಂಬ ಚಾತಕ ಪಕ್ಷಿಯಂತೆ ಕಾಯ್ತಿದೆ. ಸಿಕ್ಕ ಸಿಕ್ಕ ದೇವರ ಮೊರೆ ಹೋಗಿದೆ. ಕಂಡಲ್ಲಿ ಕಂಡಲ್ಲಿ ಪ್ರಾರ್ಥನೆ ಮಾಡ್ತಿದ್ದಾರೆ. ಬಟ್ ಕುಟುಂಬಸ್ಥರು ಪ್ರಾರ್ಥನೆಯನ್ನ ದೇವರು ಕೇಳಿಸ್ತಿದ್ದಾನೋ ಏನೋ ಗೊತ್ತಿಲ್ಲ. ಅಕ್ಷಯ್ ಮಾತ್ರ 3 ದಿನವಾದ್ರೂ ಕಣ್ಣು ಬಿಟ್ಟಿಲ್ಲ. ಮೆದುಳು ಕೂಡ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.ಇದರಿಂದ ಕುಟುಂಬಸ್ಥರು, ವೈದ್ಯರಲ್ಲೂ ಅಕ್ಷಯ್ ಬದುಕಿ ಬರುತ್ತಾನೆ ಅನ್ನೋ ಕನಸು, ಆಸೆ ಕಮರಲು ಶುರುವಾಗಿದೆ.
ಅಕ್ಷಯ್ ಕಂಡೀಷನ್ ತುಂಬಾ ಕ್ರಿಟಿಕಲ್ ಆಗಿದೆ. ಈಗಾಗಲೇ ವೈದ್ಯರು ಕೂಡ ಅಕ್ಷಯ್ ಬದುಕಿ ಬರ್ತಾರೆ ಅನ್ನೋ ಭರವಸೆಯನ್ನ ಕೂಡ ಬಿಟ್ಟಿದ್ದಾರೆ. ಯಾಕಂದ್ರೆ ಸಾಮಾನ್ಯವಾಗಿ ಆಪರೇಷನ್ ಆದ 48 ಗಂಟೆಯಲ್ಲಿ ಮೆದುಳು ರಿಯಾಕ್ಟ್ ಮಾಡದಿದ್ರೆ ಅದನ್ನ ಬ್ರೈನ್ ಡೆಡ್ ಎಂದು ವೈದ್ಯಕೀಯ ಭಾಷೆಯಲ್ಲಿ ಕರೆಯಲಾಗುತ್ತೆ. ಅದರಂತೆ ಭಾನುವಾರ ಮಧ್ಯಾಹ್ನ ಆಪರೇಷನ್ ಆದ್ರೂ, ಬುಧವಾರ ಸಂಜೆಯಾದ್ರೂ ಅಂದ್ರೆ ಸರಿಸುಮಾರು 70 ಗಂಟೆಯಾದ್ರೂ ಅಕ್ಷಯ್​ಗೆ ಇನ್ನೂ ಪ್ರಜ್ಜೆ ಬಂದಿಲ್ಲ. ಅಕ್ಷಯ್ ಮೆದುಳು ಯಾವುದೇ ರಿಯಾಕ್ಟ್​ ಮಾಡ್ತಿಲ್ಲ. ಇದರಿಂದ ಅಕ್ಷಯ್​ಗೆ ಬ್ರೈನ್ ಡೆಡ್ ಆಗಿರೋ ಸಾಧ್ಯತೆ, ನೀವೂ ಕುಟುಂಬಸ್ಥರಿಗೆ ಹೇಳೋದಿದ್ರೆ ಹೇಳಿ ಅನ್ನೋ ಮೂಲಕ ವೈದ್ಯರು ಕೂಡ ಕೈ ಚೆಲ್ಲಿದ್ದಾರೆ.
ಮೊಮ್ಮಗನ ಉಳಿವಿಗಾಗಿ ದೇವರ ಮೊರೆ ಹೋದ ತಾತಾ ಅಜ್ಜಿ..!
ಒಂದು ಕಡೆ ಅಕ್ಷಯ್ ವಿಚಾರದಲ್ಲಿ ವೈದ್ಯರೇ ಆಸೆಯನ್ನ ಕೈ ಚೆಲ್ಲಿ ಕುಳಿತಿದ್ರೆ, ಇತ್ತ ಕುಟುಂಬಸ್ಥರು ದೇವರ ಮೊರೆ ಹೋಗಿದ್ದಾರೆ. ನಾವೆಲ್ಲ ಪ್ರಯತ್ನ ಮಾಡಿದ್ವಿ, ನೀವೆಲ್ಲಾ ದೇವರ ಮೇಲೆ ಭಾರ ಹಾಕಿ ಎಂದು ಹೇಳಿದ ಹಿನ್ನೆಲೆ, ಮೊಮ್ಮಗ ಉಳಿಯಲಿ, ಆಯಸ್ಸು ಗಟ್ಟಿಯಾಗಲಿ, ಕಣ್ಣು ಬಿಟ್ಟು ನಮ್ಮನ್ನ ನೋಡಲಿ ಅಂತಾ ಹೋಮ ಮಾಡಿದ್ದಾರೆ. ಸೀತಾ ಸರ್ಕಲ್​​ನಲ್ಲಿರೋ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಅಜ್ಜ ಮುನಿಸ್ವಾಮಿ ಮತ್ತು ಅಜ್ಜಿ ಸಾವಿತ್ರಮ್ಮ ಜಯ ಮೃತ್ಯುಂಜಯ ಹೋಮ ಮಾಡ್ಸಿದ್ದು, ಈ ಮೂಲಕ ಅಕ್ಷಯ್​ ಉಸಿರಿಗಾಗಿ ಹೋಮದ ಮೊರೆ ಹೋಗಿದ್ದಾರೆ.
ಹೀಗೆ ಒಂದು ಕಡೆ ಅಕ್ಷಯ್​ ಬದುಕಿ ಬರಲಿ ಅನ್ನೋ ಪ್ರಾರ್ಥನೆ ಜೋರಾಗಿದೆ. ಇಡೀ ಕುಟುಂಬದ ಆಧಾರ ಸ್ತಂಭವಾಗಿದ್ದ ವ್ಯಕ್ತಿ, ಈ ರೀತಿಯಲ್ಲಿ ಕಣ್ಣು ಬಿಚ್ಚಿ ಆಸ್ಪತ್ರೆಯ ಐಸಿಯೂನಲ್ಲಿ ಸೈಲೆಂಟ್ ಆಗಿ ಮಲಗಿದ್ರೆ, ಹೊರಗಡೆ ಅಕ್ಷಯ್ ಉಳಿಸಲು ಇಡೀ ಕುಟುಂಬಸ್ಥರು ತಮ್ಮ ಸರ್ವಸ್ವವನ್ನ ಮೀಸಲಿಟ್ಟಿದ್ದಾರೆ. ಅಕ್ಷಯ್ ಬಿಟ್ಟು ಈ ಕುಟುಂಬವನ್ನ ಊಹೆ ಮಾಡೋದು ಅಸಾಧ್ಯ ಅನ್ನೋದು ಕುಟುಂಬಸ್ಥರಿಗೆ ಗೊತ್ತಿರುವ ವಿಚಾರ.
ಯಾಕಂದ್ರೆ ಅಕ್ಷಯ್ ಕುಟುಂಬದ ಹಿಂದೆ ಅಂತಹ ದುರಂತದ, ಕರುಣಾಜನಕ ಕಹಾನಿಯೇ ಅಡಗಿದೆ. ಅಕ್ಷಯ್ ಕುಟುಂಬದ ಒಂದೊಂದು ಕಹಾನಿ ಕೂಡ ಕಣ್ಣಂಚಿನಿಲ್ಲಿ ನೀರು ಜಿನುಗಿಸಿ ಬಿಡುತ್ತೆ. ಕುಟುಂಬದಲ್ಲಿ ನಡೆದ ಸಾಲು ಸಾಲು ಸಾವುಗಳು ದುರಂತ ಅಧ್ಯಾಯದ ಕಥೆಯನ್ನ ಹೇಳುತ್ತಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ