newsfirstkannada.com

ಮರ ಬಿದ್ದು ಯುವಕನ ಮೂಳೆ ಮುರಿತ; ಆಸ್ಪತ್ರೆ ಬಿಲ್​​ 8 ಲಕ್ಷ ಆದ್ರೂ ಕ್ಯಾರೇ ಎನ್ನದ ಬಿಬಿಎಂಪಿ!

Share :

Published April 8, 2024 at 8:19pm

    ಸಿಲಿಕಾನ್ ಸಿಟಿಯಲ್ಲಿ ಯಾವಾಗ ಏನ್ ಆಗುತ್ತೆ ಹೇಳೋದಕ್ಕೆ ಆಗಲ್ಲ

    ತನ್ನ ಪಾಡಿಗೆ ತಾನು ಹೊರಟ್ಟಿದ್ದ ವ್ಯಕ್ತಿ ಮೇಲೆ ಏಕಾಏಕಿ ಬಿದ್ದ ಮರ

    ಮರದ ಕೊಂಬೆ ಬಿದ್ದ ರಭಸಕ್ಕೆ ಬೈಕ್ ಸವಾರನ ಬೆನ್ನು ಮೂಳೆ ಮುರಿತ

ಬೆಂಗಳೂರು: ಪಾಪ ಆತ ತನ್ನ ಪಾಡಿಗೆ ತಾನು ಬೈಕ್ ಮೇಲೆ ಹೊರಟ್ಟಿದ್ದ. ಆದ್ರೆ, ಮರದ ರೂಪದಲ್ಲಿ ಬಂದಿದ್ದ ವಿಧಿ ಅವನ ಬದುಕಿಗೆ ಬರೆ ಎಳೆದು ಬಿಟ್ಟಿದೆ. ತನ್ನದಲ್ಲದ ತಪ್ಪಿಗೆ ಆಸ್ಪತ್ರೆ ಪಾಲಾಗಿರೋ ಆತ ನರಕ ಯಾತನೆ ಅನುಭವಿಸ್ತಿದ್ದಾನೆ. ಬಿಬಿಎಂಪಿ ತೋರಿದ ನಿರ್ಲಕ್ಷ್ಯಕ್ಕೆ ಭವಿಷ್ಯದ ಕನಸೇ ಕಮರಿ ಹೋದಂತಾಗಿದೆ. ಟೈಮ್ ಅನ್ನೋದು ಹೇಳೋದಿಕ್ಕೆ ಆಗಲ್ಲ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಯಾವಾಗ ಏನ್ ಆಗುತ್ತೆ ಅನ್ನೋದನ್ನು ಪ್ರೆಡಿಕ್ಟ್ ಮಾಡೋದಕ್ಕೆ ಸಾಧ್ಯವೇ ಇಲ್ಲ ಬಿಡಿ.

ಪಾಪ ಬೈಕ್ ಸವಾರ ತನ್ನ ಪಾಡಿಗೆ ತಾನು ಹೊರಟ್ಟಿದ್ದ ಆದ್ರೆ ಏಕಾಏಕಿ ಮರ ಕುಸಿದು ಬಿದ್ದು ಅವನ ಬದುಕನ್ನೇ ನರಕವಾಗಿಸಿ ಬಿಟ್ಟಿದೆ. ಮರದ ಕೊಂಬೆ ಮರಿದು ಬಿದ್ದ ರಭಸಕ್ಕೆ ಬೈಕ್ ಸವಾರ ನೆಲದ ಮೇಲೆ ಬಿದ್ದು ಒದ್ದಾಡ್ತಿದ್ದಾನೆ. ಮರ ಮುರಿದು ಬೀಳ್ತಿದ್ದಂತೆ ಸ್ಥಳೀಯರೆಲ್ಲ ಬೈಕ್ ಸವಾರನ ಸಹಾಯಕ್ಕೆ ಧಾವಿಸಿದ್ದಾರೆ. ನೀರು ಕೊಟ್ಟು ಸಮಾಧಾನ ಮಾಡಿದ್ದಾರೆ. ಆದ್ರೆ ಮರ ಬಿದ್ದ ರಭಸಕ್ಕೆ ಪಾಪ ಬೈಕ್ ಸವಾರನಿಗೆ ಮೇಲೆಳೋದಕ್ಕೆ ಸಾಧ್ಯವಾಗ್ತಿಲ್ಲ. ಬೆನ್ನು ಮೂಳೆ ಮುರಿದು ಹೋಗಿದೆ. ಕೊನೆಗೆ ಸ್ಥಳೀಯರೆಲ್ಲ ಸೇರಿ ಬೈಕ್​ ಸವಾರನನ್ನ ಆ್ಯಂಬುಲೆನ್ಸ್​ನಲ್ಲಿ ಸಾಗಿಸಿದ್ರು.

ಬಿಬಿಎಂಪಿ ದಿವ್ಯ ನಿರ್ಲಕ್ಷ್ಯ! ಆಸ್ಪತ್ರೆಯಲ್ಲಿ ನರಳಾಡ್ತಿರೋ ಯುವಕ!

ಅಷ್ಟಕ್ಕೂ ಇದು ಕಳೆದ ಮಾರ್ಚ್ 7ರಂದು ನಡೆದ ಘಟನೆ. ಚಂದನ್ ಅನ್ನೋ ವ್ಯಕ್ತಿ ಬೆಳಗ್ಗೆ ಕಚೇರಿಗೆ ಬೈಕ್​ನಲ್ಲಿ ಹೋಗ್ತಿದ್ದಾಗ ರಿಚ್ಮಂಡ್​​ ಸರ್ಕಲ್​​ ಬಳಿ ಇರೋ ಖಾಸಗಿ ಶಾಲೆಯ ಕಾಂಪೌಂಡ್​ ಒಳಗಿದ್ದ ಮರ ದಿಢೀರ್​​ ಆತನ ಮೈಮೇಲೆ ಬಿದ್ದಿದೆ. ಪರಿಣಾಮ ಚಂದನ್​ ಕುತ್ತಿಗೆಗೆ ಗಾಯವಾಗಿದ್ದು, ಬೆನ್ನು ಮೂಳೆ ಮುರಿದಿತ್ತು. ಆದ್ರೆ ಅವತ್ತು ಆಸ್ಪತ್ರೆ ಸೇರಿದ ಚಂದನ್ ಇನ್ನೂ ಮೇಲೆದಿಲ್ಲ. ಒಂದು ತಿಂಗಳ ಸಮಯ ಕಳೆದ್ರೂ ಚಂದನ್​ ಬೆಡ್ ಮೇಲೆಯೇ ಪರದಾಡುವಂತಾಗಿದೆ. ಬೆಂಗಳೂರಲ್ಲಿ ಮರಗಳು ಮುರಿದು ಬೀಳೋದು ಹೊಸದೇನಲ್ಲ. ಆದ್ರೆ ಮುರಿದು ಬೀಳೋ ಹಂತದಲ್ಲಿರುವ ಮರಗಳ ಕೊಂಬೆಯನ್ನ ಕತ್ತರಿಸುವ ಕೆಲಸ ಬಿಬಿಎಂಪಿ ಮಾಡುತ್ತೆ. ಆದ್ರೆ ರಿಚ್ಮಂಡ್ ಸರ್ಕಲ್​ ಕಡೆ ಬಿಬಿಎಂಪಿಯವರು ಕಣ್ಣು ಬಿದ್ದಿಲ್ಲ. ಈಗ ಬಿಬಿಎಂಪಿವರು ತೋರಿದ ನಿರ್ಲಕ್ಷ್ಯಕ್ಕೆ ಬದುಕಿನ ಬಗ್ಗೆ ನೂರಾರು ಕನಸು ಕಟ್ಕೊಂಡಿದ್ದ ಯುವಕ ಆಸ್ಪತ್ರೆ ಬೆಡ್​ ಮೇಲೆ ನರಕ ಯಾತನೆ ಅನುಭವಿಸ್ತಿದ್ದಾನೆ. ಕನಿಷ್ಟ ಪಕ್ಷ ಸೌಜನ್ಯಕ್ಕಾದ್ರೂ ಬಿಬಿಎಂಪಿ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಏನಾಯ್ತು ಅನ್ನೋ ವಿಚಾರವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿಲ್ಲ. ಅಧಿಕಾರಿಗಳ ಜಾಣ ಕುರುಡು ಈಗ ಅಮಾಯಕನೊಬ್ಬನ ಬದುಕಿಗೆ ಸಂಕಷ್ಟ ತಂದೊಡ್ಡಿದೆ.

ಇದನ್ನೂ ಓದಿ: VIDEO: ಸಿಎಂ ಸಿದ್ದರಾಮಯ್ಯ ಕ್ಯಾಂಪೇನ್​​​​ ವೇಳೆ ಗನ್ ಇಟ್ಟುಕೊಂಡು ಬಂದ ವ್ಯಕ್ತಿ; ಆಮೇಲೇನಾಯ್ತು?

ಹೌದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಂದನ್​​ಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ರಭಸವಾಗಿ ಮರ ಬಿದ್ದ ಕಾರಣ ಸೊಂಟದ ಕೆಳಗಿನ ಭಾಗ ಸ್ಪರ್ಶದ ಶಕ್ತಿಯನ್ನ ಕಳೆದುಕೊಂಡಿದೆ. ಚಂದನ್ ಚೇತರಿಕೆಗೆ ಏನಿಲ್ಲ ಅಂದ್ರೂ ಒಂದು ವರ್ಷವೇ ಆಗಬಹುದು ಅಂತ ವೈದ್ಯರು ಹೇಳಿದ್ದು, ಇದು ಚಂದನ್ ಆತಂಕಕ್ಕೆ ಕಾರಣವಾಗಿದೆ. ಮನೆಗೆ ಆಧಾರವಾಗ ಬೇಕಿದ್ದ ಚಂದನ್​ ಹಾಸಿಗೆ ಹಿಡಿದಿದ್ದು, ಈಗಾಗಲೇ ಆಸ್ಪತ್ರೆಗೆ ಎಂಟು ಲಕ್ಷ ರೂಪಾಯಿಗೂ ಅಧಿಕ ವೆಚ್ಚವಾಗಿದೆ. ಆದ್ರೆ ಇನ್ನೂ ಒಂದು ವರ್ಷಗಳ ಕಾಲ ಇದೇ ಪರಿಸ್ಥಿತಿ ಮುಂದುವರಿದ್ರೆ ಹೇಗೆ ಅಂತ ಚಂದನ್ ಕುಟುಂಬ ಆತಂಕಗೊಂಡಿದೆ.

ಈಗಾಗಲೇ ಎಂಟು ಲಕ್ಷ ಬಿಲ್ ಕಟ್ಟಿರೋ ಚಂದನ್ ಕುಟುಂಬ ಬಿಬಿಎಂಪಿಯಿಂದ ನೆರವಿಗಾಗಿ ಕಾಯ್ತಿದೆ. ಆದ್ರೆ ಬಿಬಿಎಂಪಿ ಅಧಿಕಾರಿಗಳು ಮಾತ್ರ ಆ ಬಿಲ್ ಈ ಬಿಲ್ ಅಂತ ಕಚೇರಿಯಿಂದ ಕಚೇರಿಗೆ ಅಲೆದಾಡಿಸ್ತಿರೋ ಆರೋಪ ಕೇಳಿ ಬಂದಿದೆ. ಹೀಗಾಗಿ ಚಂದನ್ ಕುಟುಂಬ್ ಹಣಕ್ಕಾಗಿ ಏನ್ ಮಾಡೋದು ಅಂತ ಕಂಗಲಾಗಿದೆ. ಸದ್ಯ ಘಟನೆ ಬಗ್ಗೆ ಆಶೋಕನಗರ ಪೊಲೀಸ್ ಠಾಣೆಯಲ್ಲಿ ಖಾಸಗಿ ಶಾಲೆ ಹಾಗೂ ಬಿಬಿಎಂಪಿ ವಿರುದ್ಧ FIR ದಾಖಲಾಗಿದೆ. ಬಿಬಿಎಂಪಿ ನಿರ್ಲಕ್ಷ್ಯದಿಂದ ಮನೆಗಿದ್ದ ಒಂದೇ ಒಂದು ಆಧಾರ ಇಂದು ಹಾಸಿಗೆ ಹಿಡಿದಿದ್ದು, ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ. ಇತ್ತ ನೆರವಾಗಬೇಕಿದ್ದ ಪಾಲಿಕೆ ನಿರ್ಲಕ್ಷ್ಯ ತೋರಿರೋ ಆರೋಪ ಕೇಳಿಬಂದಿದ್ದು,ಇನ್ನಾದ್ರೂ ಸೂಕ್ತ ಪರಿಹಾರ ನೀಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮರ ಬಿದ್ದು ಯುವಕನ ಮೂಳೆ ಮುರಿತ; ಆಸ್ಪತ್ರೆ ಬಿಲ್​​ 8 ಲಕ್ಷ ಆದ್ರೂ ಕ್ಯಾರೇ ಎನ್ನದ ಬಿಬಿಎಂಪಿ!

https://newsfirstlive.com/wp-content/uploads/2024/04/tree-fall.jpg

Load More