/newsfirstlive-kannada/media/post_attachments/wp-content/uploads/2025/04/shushma3.jpg)
ನಿರೂಪಕಿ, ನಟಿ ಸುಷ್ಮಾ ರಾವ್ ಅವರು ಭಾಗ್ಯಲಕ್ಷ್ಮೀ ಧಾರಾವಾಹಿ ಮೂಲಕ ಹೊಸ ಇನ್ನಿಂಗ್ಸ್​ ಶುರು ಮಾಡಿದ್ದರು​. ಸದ್ಯ ಟಾಪ್​ ಲಿಸ್ಟ್​ನಲ್ಲಿ ಭಾಗ್ಯಲಕ್ಷ್ಮೀ ಸ್ಥಾನ ಪಡೆದುಕೊಂಡು ಮುನ್ನುಗುತ್ತಿದೆ. ಅದರಲ್ಲೂ ಸುಷ್ಮಾ ಅವರ ಅಭಿನಯಕ್ಕೆ ದೊಡ್ಡ ಅಭಿಮಾನಿ ಬಳಗ ಇದೆ. ನಟಿ ಸುಷ್ಮಾ ರಾವ್ ಅವರನ್ನು ತುಂಬಾ ಪ್ರೀತಿಸೋ ಜನರು ಕೂಡ ಇದ್ದಾರೆ.
ಇದನ್ನೂ ಓದಿ:ಮದ್ವೆಗೆ 8 ದಿನ ಬಾಕಿ ಇರುವಾಗ ಮಾಜಿ ಗೆಳೆಯ ಬ್ಲಾಕ್​ಮೇಲ್.. ನೋವಲ್ಲೇ ಜೀವಬಿಟ್ಟ ದೈಹಿಕ ಶಿಕ್ಷಕಿ..
/newsfirstlive-kannada/media/post_attachments/wp-content/uploads/2024/12/bhagya-laxmi.jpg)
ಆದ್ರೆ, ಇದೀಗ ನಟಿ ಸುಷ್ಮಾ ಅವರು ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಹೌದು, ಕನ್ನಡ ಕಿರುತೆರೆಯಲ್ಲಿ ನಟಿಯಾಗಿ, ಆಂಕರ್ ಆಗಿ ಗುರುತಿಸಿಕೊಂಡಿರೋ ನಟಿ ಸುಷ್ಮಾ ಕೆ ರಾವ್ ಅವ್ರಿಗೆ ಟ್ರಿಕ್ಕಿಂಗ್​ ಅಂದ್ರೇ ಸಿಕ್ಕಾಪಟ್ಟೆ ಇಷ್ಟ. ಹೊಸ ಹೊಸ ಜಾಗಗಳನ್ನ ಎಕ್ಸ್​ಪ್ಲೋರ್ ಮಾಡೋದು ಅಂದ್ರೇ ಪಂಚಪ್ರಾಣ.
/newsfirstlive-kannada/media/post_attachments/wp-content/uploads/2025/04/shushma4.jpg)
ಸೀರಿಯಲ್​ ಶೂಟಿಂಗ್​ನಿಂದ ಗ್ಯಾಪ್​ ಸಿಕ್ಕರೇ ಸಾಕು, ಸುಷ್ಮಾ ಅವರನ್ನು ಯಾವುದಾದರೂ, ಬೆಟ್ಟ, ಗುಡ್ಡದಲ್ಲೇ ಹುಡುಕಬೇಕು. ಕೊಂಚ ಬಿಡುವಿನಲ್ಲಿ ಎಲ್ಲರೂ ರೆಸ್ಟ್ ಮಾಡಿದ್ರೇ, ಇವ್ರು ಬ್ಯಾಗ್​ ಪ್ಯಾಕ್​ ಮಾಡ್ಕೊಂಡು ಒಂಟಿಯಾಗಿ ಜಾಲಿ ರೈಡ್​ ಹೊರಟು ಬಿಡ್ತಾರೆ.
/newsfirstlive-kannada/media/post_attachments/wp-content/uploads/2025/04/shushma5.jpg)
ಸದ್ಯ, ಸುಷ್ಮಾ ರಾವ್ ನಡೆ ಮೌಂಟ್ ಎವರೆಸ್ಟ್ ಶಿಖರದ ಕಡೆ. ಮೌಂಟ್ ಎವರೆಸ್ಟ್ ಹತ್ತಬೇಕು ಅನ್ನೋದು ಸುಷ್ಮಾ ರಾವ್ ಅವರ ಬಹುದಿನಗಳ ಕನಸು. ಹಾಗಂತ ಈ ಬಾರಿ ಅವರು ಹೋಗಿದ್ದು, ಮೌಂಟ್ ಎವರೆಸ್ಟ್ ಹತ್ತೋಕೆ ಅಲ್ಲ, ಬದಲಾಗಿ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್‌ಗೆ, ಅದು ಒಂಟಿಯಾಗಿ. ಈ ಬಗ್ಗೆ ಖುದ್ದು ನಟಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಅಲ್ಲಿನ ವಿಶೇಷ ಕ್ಷಣಗಳ ಫೋಟೋಗಳನ್ನ ನಮಗೆ ಶೇರ್​ ಮಾಡಿದ್ದಾರೆ.
View this post on Instagram
ಸದ್ಯ ಎವರೆಸ್ಟ್ ಬೇಸ್ ಕ್ಯಾಂಪ್​ವರೆಗೂ ಟ್ರೆಕ್ಕಿಂಗ್​ ಮಾಡಿ ಸಾಹಸ ಮಾಡಿರೋ ನಟಿ, ಮುಂದಿನ ನಡೆ ಮೌಂಟ್ ಎವರೆಸ್ಟ್ ಹತ್ತೋದು. ಅವರ ಈ ಕನಸು ಆದಷ್ಟು ಬೇಗ ಈಡೇರಲಿ ಅನ್ನೋದೆ ಅಭಿಮಾನಿಗಳ ಆಶಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us