/newsfirstlive-kannada/media/post_attachments/wp-content/uploads/2024/07/Couple-Umbrella.jpg)
ಮಳೆಯಿಂದ ತಪ್ಪಿಸಲು ಜನರು ಛತ್ರಿ ಮತ್ತು ರೇನ್‌ಕೋಟ್‌ಗಳನ್ನು ಬಳಕೆ ಮಾಡುತ್ತಾರೆ. ಒಂದು ಸಾಮಾನ್ಯವಾದ ಛತ್ರಿಯಲ್ಲಿ ಒಬ್ಬರು ಮಾತ್ರ ಹೋಗಬಹುದು. ಆದರೆ ಅದೇ ಛತ್ರಿಯ ಕೆಳಗೆ ಯಾರಾದರೂ ಬರಲು ಬಯಸಿದ್ದಾಗ ಅದು ತುಂಬಾ ಚಿಕ್ಕದಾಗಿ ಬಿಡುತ್ತೆ. ಆದರೆ ಇದೀಗ ಆನ್‌ಲೈನ್‌ನಲ್ಲಿ ಈ ಛತ್ರಿ ಸಖತ್ ಫೇಮಸ್ ಆಗುತ್ತಿದೆ.
ಇದನ್ನೂ ಓದಿ: ಮಧ್ಯಮ ವರ್ಗದವರಿಗೆ ರಿಲೀಫ್.. ಹೊಸ ಆದಾಯ ತೆರಿಗೆ ನೀತಿಯಿಂದ ನಿಮಗೆ ಉಳಿತಾಯ ಎಷ್ಟು? ಹೇಗೆ?
ಹೌದು, ಸಾಕಷ್ಟು ಛತ್ರಿಗಳು ಅಸ್ತಿತ್ವದಲ್ಲಿದ್ದರೂ ಕೂಡ ಈ 'ಜೋಡಿ ಛತ್ರಿ' ಬಗ್ಗೆಯೇ ಜನರು ಮಾತಾಡುತ್ತಿದ್ದಾರೆ. ಈ ಜೋಡಿ ಛತ್ರಿ ಚೀನಾದ ತೈವಾನ್‌ನಲ್ಲಿ ತಯಾರಿಸಿಲಾಗಿದೆ. ಇದೇ ಜೋಡಿ ಛತ್ರಿಯಲ್ಲಿ ಇಬ್ಬರು ವ್ಯಕ್ತಿಗಳನ್ನು ಆರಾಮದಾಯಕವಾಗಿ ಹೋಗಬಹುದು. ಇದೇ ಟು-ಇನ್-ಒನ್ ಛತ್ರಿಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಇನ್ನು, ಜೋಡಿ ಛತ್ರಿಯನ್ನು ಇಬ್ಬರಿಗಾಗಿಯೇ ವಿನ್ಯಾಸಗೊಳಿಸಲಾಗಿದೆ.
View this post on Instagram
ಇದೇ ವಿಡಿಯೋ ಈಗಾಗಲೇ 3.7 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಇದೇ ವಿಡಿಯೋ ನೋಡಿದ ನೆಟ್ಟಿಗರು ಜೋಡಿ ಛತ್ರಿಯ ಖರೀದಿ ಮಾಡಲು ಶುರು ಮಾಡಿದ್ದಾರೆ. ಅದೇ ವಿಡಿಯೋದಲ್ಲಿ ಈ ಜೋಡಿ ಛತ್ರಿ ಖರೀದಿಸುವ ಇಚ್ಛೆಯ ಬಗ್ಗೆ ವ್ಯಕ್ತಪಡಿಸಿದ್ದಾರೆ. ಹೀಗೆ ದಂಪತಿಗಳು, ಪ್ರೇಮಿಗಳು, ಅಣ್ಣ ಹಾಗೂ ತಮ್ಮ, ಅಕ್ಕ ಅಥವಾ ತಂಗಿ ಹೀಗೆ ಜೋಡಿಯಾಗಿ ಹೊರಗಡೆ ಹೋಗುವಾಗ ಪ್ರತ್ಯೇಕ ಛತ್ರಿಗಳ ಬದಲು ಈ ಜೋಡಿ ಛತ್ರಿ ತೆಗೆದುಕೊಂಡು ಹೋದರೆ ತುಂಬಾ ಸುಂದರವಾಗಿ ಕಾಣುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ