/newsfirstlive-kannada/media/post_attachments/wp-content/uploads/2025/02/Virat-Kohli-On-Rcbcaptain-1.jpg)
ಪವರ್ ಪ್ಲೇ ಅನ್ನೋದು ಬ್ಯಾಟರ್ಗಳ ಪವರ್ ತೋರಿಸೋಕೆ ಅಖಾಡ. ಇದೇ ಪವರ್ ಪ್ಲೇನಲ್ಲಿ ಬ್ಯಾಟ್ಸ್ಮನ್ಗಳನ್ನ ಯಾಮಾರಿಸಿ ವಿಕೆಟ್ ಬೇಟೆಯಾಡೋವರು ಇದ್ದಾರೆ. ಪವರ್ ಫುಲ್ ಸ್ಪೆಲ್ ಹಾಕಿ ಎಕಾನಮಿ ಕಾಯ್ದುಕೊಳ್ಳೋ ಖತರ್ನಾಕ್ಗಳಿದ್ದಾರೆ. ಪವರ್ ಪ್ಲೇನ ಪಂಟರ್ಸ್ ಕುರಿತ ಸ್ಪೆಷಲ್ ಸ್ಟೋರಿ ಇಲ್ಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಬ್ಯಾಟ್ಸ್ಮನ್ಗಳ ಗೇಮ್. ಫಸ್ಟ್ ಬಾಲ್ ಟು ಲಾಸ್ಟ್ ಬಾಲ್ ತನಕ ಬ್ಯಾಟರ್ಗಳು, ಬೌಂಡರಿ, ಸಿಕ್ಸರ್ಗಳನ್ನ ಚಚ್ಚಿ ಆರ್ಭಟಿಸ್ತಾರೆ. ಬ್ಯಾಟರ್ಗಳ ಆರ್ಭಟಕ್ಕೆ ಬೌಲರ್ಗಳು ಪರದಾಡ್ತಾರೆ. ಪವರ್ ಪ್ಲೇಗಳಲ್ಲಂತೂ ಬೌಲರ್ಗಳಿಗೆ ನರಕ ದರ್ಶನವಾಗುತ್ತೆ. ಇಂಥ ಬ್ಯಾಟರ್ಗಳ ಗೇಮ್ನಲ್ಲಿ ಮೂವರು ಬೌಲರ್ಗಳು ಬ್ಯಾಟ್ಸ್ಮನ್ಗಳ ಪಾಲಿಗೆ ಸಿಂಹಸ್ವಪ್ನವಾಗಿ ಕಾಡ್ತಿದ್ದಾರೆ.
ಇದನ್ನೂ ಓದಿ: ಗುಜರಾತ್ ಟೈಟನ್ಸ್ ಸೇರಿದ ಮೇಲೂ ಚಡಪಡಿಕೆ.. RCB, ಕೊಹ್ಲಿ ಸಹಾಯ ಸ್ಮರಿಸಿ ಸಿರಾಜ್ ಭಾವುಕ
ಹೊಸ ಬಾಲ್ನಲ್ಲಿ ಇವ್ರು ಡೇಂಜರ್..ಡೇಂಜರ್..!
ಟಿ20 ಗೇಮ್ನಲ್ಲಿ ಬೌಲರ್ಗಳಿಗೆ ಸಕ್ಸಸ್ ಸಿಗೋದು ತೀರಾ ಅಪರೂಪ. ಅದ್ರಲ್ಲೂ ಪವರ್ ಪ್ಲೇನಲ್ಲಿ ಸಕ್ಸಸ್ ಕಾಣ್ತಾರೆ, ಅತಿ ಹೆಚ್ಚು ವಿಕೆಟ್ ಪಡೀತಾರೆ ಅಂದ್ರೆ ಅವರು ಸ್ಕಿಲ್ ಫುಲ್ ಬೌಲರ್ಸ್ ಅನ್ನೋದ್ರಲ್ಲಿ ಡೌಟೇ ಇಲ್ಲ. ಪವರ್ ಪ್ಲೇನಲ್ಲಿ ಬ್ಯಾಟರ್ಗಳಿಗೆ ಅಡ್ವಾಂಟೇಜ್ ಜಾಸ್ತಿ. ಬಾರಿಸಿದ್ರೆ ಬೌಂಡರಿ, ಸಿಡಿಸಿದ್ರೆ ಸಿಕ್ಸರ್ ಎಂಬಂತಿರುತ್ತೆ. ಈ ಸಂದರ್ಭದಲ್ಲೂ ಬ್ಯಾಟರ್ಗಳನ್ನು ಕಾಡಿ, ಖೆಡ್ಡಾಗೆ ಕೆಡವೋ ಬೌಲರ್ಗಳಿದ್ದಾರೆ. ಆ ಸ್ಪೆಷಲ್ ಬೌಲರ್ಗಳೇ ಮುಂಬೈ ಇಂಡಿಯನ್ಸ್ನ ಟ್ರೆಂಟ್ ಬೋಲ್ಟ್, ದೀಪಕ್ ಚಹರ್ ಹಾಗೂ ಸನ್ ರೈಸರ್ಸರ್ ಹೈದ್ರಾಬಾದ್ ತಂಡದ ಮೊಹಮ್ಮದ್ ಶಮಿ.
ಇದನ್ನೂ ಓದಿ: ಆರ್ಸಿಬಿ ತಂಡಕ್ಕೆ ಡೇಂಜರಸ್ ಬೌಲರ್ ಎಂಟ್ರಿ; ಬೆಂಗಳೂರಿಗೆ ಬಂತು ಆನೆ ಬಲ
ಐಪಿಎಲ್ನಲ್ಲಿ ಪವರ್ ಫುಲ್ ಸ್ಪೆಲ್ ಮಾಡ್ತಾ ಬ್ಯಾಟರ್ಗಳನ್ನು ಕಾಡಿರುವ ಇವರು ರಿಯಲ್ ಗೇಮ್ ಚೇಂಜರ್ಸ್. 2019ರಿಂದ ಈವರೆಗೆ ಪವರ್ ಪ್ಲೇನಲ್ಲಿ ಅತಿ ಹೆಚ್ಚು ವಿಕೆಟ್ ಬೇಟೆಯಾಡಿದವರಲ್ಲಿ ಇವರೇ ಟಾಪ್-3 ಬೌಲರ್ಸ್!
2019ರಿಂದ ಪವರ್ ಪ್ಲೇನಲ್ಲಿ ವಿಕೆಟ್ ಬೇಟೆ
2019ರಿಂದ 75 ಪಂದ್ಯಗಳಲ್ಲಿ ಪವರ್ ಪ್ಲೇನಲ್ಲಿ ಬೌಲಿಂಗ್ ಮಾಡಿರುವ ಟ್ರೆಂಟ್ ಬೋಲ್ಟ್, 53 ವಿಕೆಟ್ ಬೇಟೆಯಾಡಿ 6.86 ಎಕಾನಮಿಯಲ್ಲಿ ರನ್ ಬಿಟ್ಟು ಕೊಟ್ಟಿದ್ದಾರೆ. ದೀಪಕ್ ಚಹರ್ 64 ಪಂದ್ಯಗಳಿಂದ 47 ವಿಕೆಟ್ ಬೇಟೆಯಾಡಿ 7.86ರ ಎಕಾನಮಿ ಕಾಯ್ದುಕೊಂಡಿದ್ದಾರೆ. ಇನ್ನುಳಿದಂತೆ ಶಮಿ, 74 ಪಂದ್ಯಗಳಿಂದ 42 ವಿಕೆಟ್ ಪಡೆದು 7.5ರ ಎಕಾನಮಿಯಲ್ಲಿ ರನ್ ಬಿಟ್ಟು ಕೊಟ್ಟಿದ್ದಾರೆ.
ಸೀಸನ್-18ರಲ್ಲೂ ಇದೇ ಲಯ ಕಾಯ್ದಕೊಳ್ತಾರಾ?
ಪವರ್ ಪ್ಲೇನಲ್ಲಿ ಪವರ್ ಫುಲ್ ಸ್ಪೆಲ್ ಮಾಡಿರುವ ಇವರು, ಈಗ ನ್ಯೂ ಟೀಮ್ಗೆ ಎಂಟ್ರಿ ನೀಡಿದ್ದಾರೆ. ನ್ಯೂಜಿಲೆಂಡ್ನ ಟ್ರೆಂಟ್ ಬೋಲ್ಟ್, ದೀಪಕ್ ಚಹರ್ ಮುಂಬೈ ಇಂಡಿಯನ್ಸ್ ಸೇರಿದ್ರೆ, ಸ್ಟೀಡ್ ಸ್ಟರ್ ಮೊಹಮ್ಮದ್ ಶಮಿ ಸನ್ ರೈಸರ್ಸ್ ಹೈದ್ರಾಬಾದ್ ಸೇರಿದ್ದಾರೆ. ಈ ತ್ರಿಮೂರ್ತಿಗಳಿಗೆ ಸಾಥ್ ನೀಡುವ ಬೌಲರ್ಗಳು, ಇವರು ಎಂಟ್ರಿ ನೀಡಿರುವ ಟೀಮ್ನಲ್ಲಿದ್ದಾರೆ. ಹೀಗಾಗಿ ಹಳೇ ಖದರ್ ಮುಂದುವರಿಸಿದ್ರೆ, ಎದುರಾಳಿಗಳು ಖಲ್ಲಾಸ್ ಆಗೋದು ಗ್ಯಾರಂಟಿ.
ಬೋಲ್ಟ್, ದೀಪಕ್, ಬೂಮ್ರಾ..
ಜಸ್ಪ್ರೀತ್ ಬೂಮ್ರಾ ಡೆಡ್ಲಿ ಬೌಲರ್ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಪವರ್ ಪ್ಲೇನಲ್ಲಿ ಹೆಚ್ಚು ವಿಕೆಟ್ ಬೇಟೆಯಾಡದಿದ್ದರೂ, ಎಕಾನಮಿಕಲ್ ಸ್ಪೆಲ್ ಹಾಕೋದ್ರಲ್ಲಿ ಬೂಮ್ರಾ ಪಂಟರ್. ಇದೀಗ ಈ ಡೆಡ್ಲಿ ಬೌಲರ್ಗೆ ಟ್ರೆಂಟ್ ಬೋಲ್ಟ್, ದೀಪಕ್ ಚಹರ್ ಸಾಥ್ ಸಿಕ್ಕಿದೆ. ಮೂವರು ಸಾಲಿಡ್ ಸ್ಪೆಲ್ ಹಾಕಿದ್ರೆ ಈ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ಮ್ಯಾಜಿಕ್ ಮಾಡೋದು ಫಿಕ್ಸ್.
ಇದನ್ನೂ ಓದಿ: ಡಯೆಟ್ ಪ್ಲ್ಯಾನ್ ಫಾಲೋ ಮಾಡೋರೇ ಎಚ್ಚರ.. 23 ವರ್ಷದ ಯುವತಿ ಜೀವಕ್ಕೆ ಕುತ್ತು; ಆಗಿದ್ದೇನು?
ಈ ವಿಚಾರದಲ್ಲಿ ಸನ್ ರೈಸರ್ಸ್ ಕೂಡ ಲಕ್ಕಿ. ಚಾಣಾಕ್ಷ ಪ್ಯಾಟ್ ಕಮಿನ್ಸ್, ಹರ್ಷಲ್ ಪಟೇಲ್ ಜೊತೆಗೆ ಮೊಹಮ್ಮದ್ ಶಮಿಯ ಬೌಲಿಂಗ್ ಬಲ ತಂಡಕ್ಕೆ ಸಿಕ್ಕಿದೆ. ಬಲಾಢ್ಯ ಬ್ಯಾಟಿಂಗ್ ಪಡೆ ಹೊಂದಿರೋ ಸನ್ ರೈಸರ್ಸ್ ಪರ ಬೌಲರ್ಗಳು ಮಿಂಚಿದ್ರೆ ಟೂರ್ನಿಯಲ್ಲಿ ಹೈದ್ರಾಬಾದ್ನ ತಡೆಯೋದು ಕಷ್ಟ, ಕಷ್ಟ! ಈ ಸೀಸನ್ ಐಪಿಎಲ್ನಲ್ಲಿ ಮುಂಬೈ ಹಾಗೂ ಹೈದ್ರಾಬಾದ್ ತಂಡದಲ್ಲಿ ಪವರ್ ಫುಲ್ ಬೌಲರ್ಗಳ ಸಂಗಮವಾಗಿದೆ. ಈ ಎರಡು ಟೀಮ್ಗಳ ಫಾಸ್ಟ್ ಬೌಲಿಂಗ್ ಅಟ್ಯಾಕ್ ಟೂರ್ನಿಯಲ್ಲಿ ಜಾದೂ ಮಾಡಿದ್ರೆ ಗೆಲುವಿನ ಓಟ ಫಿಕ್ಸ್.
ಇದನ್ನೂ ಓದಿ: ಹನಿಟ್ರ್ಯಾಪ್ ಗುಟ್ಟು ರಟ್ಟು.. K.N ರಾಜಣ್ಣ ಹೇಳಿಕೆ ಬೆನ್ನಲ್ಲೇ ಸ್ಫೋಟಕ ಟ್ವಿಸ್ಟ್; ಕಾಂಗ್ರೆಸ್ ಪಕ್ಷದಲ್ಲಿ ಏನಾಗ್ತಿದೆ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್