newsfirstkannada.com

ಪ್ರೀತಿಸಿ 5 ಲಕ್ಷಕ್ಕೂ ಹೆಚ್ಚು ಹಣ ಕಳ್ಕೊಂಡ ಯುವಕ; ಕೈ ಕೊಟ್ಟು ಇನ್ನೊಬ್ಬನ ಜತೆ ಎಸ್ಕೇಪ್​ ಆದ ಯುವತಿ

Share :

Published August 12, 2023 at 6:11am

Update August 12, 2023 at 6:49am

  ಬೀಬಿ ಸಿನಿಮಾವನ್ನೇ ಮೀರಿಸುತ್ತೆ ಈ ಲವ್​ ಸ್ಟೋರಿ

  ಲವರ್​​ಗೆ ಕೈ ಕೊಟ್ಟು ಮತ್ತೋರ್ವನೊಂದಿಗೆ ಮದುವೆ

  ದಿಢೀರ್​ ಕೈಕೊಟ್ಟ ಯುವತಿ, ಬೀದಿಗೆ ಬಂದ ಯುವಕ!

ಬೆಂಗಳೂರು: ಇತ್ತೀಚೆಗೆ ರಿಲೀಸ್​ ಆದ ‘ಬೇಬಿ’ ಸಿನಿಮಾ ತೆಲುಗು ಇಂಡಸ್ಟ್ರಿಯಲ್ಲಿ ಕಮಾಲ್​ ಮಾಡಿದ ಬ್ಯೂಟಿಫುಲ್​ ಲವ್​ ಸ್ಟೋರಿ. ಈಗಿನ ಕಾಲದ ಲವ್​ ಹೇಗಿರುತ್ತೆ? ಎಂದು ತೋರಿಸಿದ ಹಿಟ್​​ ಫಿಲ್ಮ್​​. ಬೇಬಿ ಸಿನಿಮಾ ಕ್ಲೈಮ್ಯಾಕ್ಸ್​​ ನೀವು ನೋಡಿದ್ದೀರಾ! ಇಂಥದ್ದೇ ಒಂದು ರಿಯಲ್​​​ ಸೀನ್​​​​​ವೊಂದು ನಿಜ ಜೀವನದಲ್ಲೂ ನಡೆದಿದೆ.

ಹೌದು, ಇದು ಆನಂದ್​​, ವೈಷ್ಣವಿ ಸ್ಟೋರಿಯಲ್ಲ. ಬದಲಾಗಿ ಬೆಂಗಳೂರು ಹೊರ ವಲಯದ ಆವಲಹಳ್ಳಿಯ ಜೋಸೆಫ್,​​ ಕ್ಯಾತ್ರಿನಾಳ ಲವ್​ ಸ್ಟೋರಿ. ಬೇಬಿ ಸಿನಿಮಾದಲ್ಲಿ ಹೇಳಿದಂತೆ ಸ್ಕೂಲ್​ನಲ್ಲಿ ಚಿಗುರಿದ ಪ್ರೀತಿ ಮುಂದಕ್ಕೆ ಹಾಗೇ ಸಾಗುತ್ತೆ. ವರ್ಷಗಳು ಉರುಳುತ್ತೆ. ಚಿಗುರಿದ ಪ್ರೀತಿ ಹೆಮ್ಮರವಾಗಿ ಬೆಳೆದು ಹಸೆಮಣೆವರೆಗೂ ಕಾಲಿಡುತ್ತೆ. ಕ್ಯಾತ್ರಿನಾಳ ಮೇಲೆ ಪ್ರಾಣವನ್ನೇ ಇಟ್ಟಿರೋ ಜೋಸೆಫ್​ ಆಕೆಗಾಗಿ ಏನ್​ ಮಾಡೋದಕ್ಕೂ ತಯಾರಾಗಿರ್ತಾನೆ. ಅದರಂತೆ ಕೊಂಚ ಧೈರ್ಯ ಮಾಡಿದ ಹುಡುಗ ಜೋಸೆಫ್​​, ಪ್ರೀತಿಸಿದ ಹುಡುಗಿಯ ತಾಯಿ ಸೆಲೆನಾ ಮೇರಿ ಬಳಿ ತಮ್ಮ ಪ್ರೀತಿ ವಿಷಯವನ್ನ ಬಿಚ್ಚಿಡ್ತಾನೆ. ಮಗಳ ಖುಷಿ ಬಯಸಿದ ತಾಯಿ ಇಬ್ಬರ ಪ್ರೇಮಕ್ಕೂ ಗ್ರೀನ್​ ಸಿಗ್ನಲ್​ ಕೊಡ್ತಾರೆ. ಮದುವೆ ಮಾಡಿಕೊಡೋದಾಗಿ ಹೇಳಿ ಒಂದು ವರ್ಷದ ಹಿಂದೆ ಇಬ್ಬರಿಗೂ ಎಂಗೇಜ್ಮೆಂಟ್ ಮಾಡಿಸ್ತಾರೆ. ಈಗಷ್ಟೇ ಸ್ಕೂಲ್​ ಮುಗಿಸಿದ್ದ ಕ್ಯಾತ್ರಿನಾ ಕಾಲೇಜ್​ ಮೆಟ್ಟಿಲೇರ್ತಾಳೆ. ದಿನ ಉರುಳಿದಂತೆ ಬದಲಾದ ಕ್ಯಾತ್ರಿನಾಳ ಲೈಫ್​​ನಲ್ಲಿ ಮತ್ತೊಬ್ಬನ ಎಂಟ್ರಿಯಾಗಿದೆ. ಅದು ಸ್ನೇಹಕ್ಕೆ ತಿರುಗಿ ಬಳಿಕ ಪ್ರೇಮಾಂಕುರವಾಗಿ ಎಂಗೇಜ್​ ಆದ ಹುಡುಗನಿಗೆ ಕೈ ಕೊಟ್ಟು ಎಸ್ಕೇಪ್​ ಆಗ್ತಾಳೆ.

ಇತ್ತ ಅವಳೇ ಪ್ರಪಂಚ. ಅವಳಿಂದಲೇ ಎಲ್ಲ. ಅವಳಿಲ್ಲದೇ ಬದುಕಿಲ್ಲ ಅನ್ನೋದನ್ನ ನಂಬಿದ್ದ ಜೋಸೆಫ್‌ಗೆ ಕ್ಯಾತ್ರಿನಾಳ ಕಾಲೇಜ್​ ಲವ್​ ಸ್ಟೋರಿ ಗೊತ್ತೇ ಇರ್ಲಿಲ್ಲ. ಪ್ರೀತಿಯಲ್ಲಿ ಕುರುಡಾಗಿದ್ದ ಜೋಸೆಫ್​ ಅತ್ತ ಕ್ಯಾತ್ರಿನಾಳ ಜೊತೆ ಮದುವೆಗೆ ಸಿದ್ಧತೆ ನಡೆಸ್ತಿದ್ದ. ಕ್ಯಾತ್ರಿನಾಳ ತಾಯಿ ಕೇಳಿದಾಗಲೆಲ್ಲ ಹಣ ಕೊಡ್ತಿದ್ದ. ಆ ಖರ್ಚು, ಈ ಖರ್ಚು ಅಂತ ತನ್ನಲ್ಲಿ ಇಲ್ಲದಿದ್ರೂ ಸಾಲಸೋಲ ಮಾಡಿ ಬರೋಬ್ಬರಿ 5 ಲಕ್ಷಕ್ಕಿಂತಲೂ ಅಧಿಕ ಹಣ ಖರ್ಚು ಮಾಡಿದ್ದ.

ಜೋಸೆಫ್​ ಹೇಳಿದ್ದೇನು?

ಹುಡುಗಿಗೆ ಒಂದು ಹುಡುಗನ ಜೊತೆ ಲವ್​ ಆಯ್ತು, ಆ ಹುಡುಗ ಕಿವಿನ್​ ಅಂತ. ಆ ಮೇಲೆ ಅವರ ಅಮ್ಮ ಅಪ್ಪ ನಮಗೆ ಏನೂ ತಿಳಿಸಿಲ್ಲ. ಚೆನ್ನಾಗಿ ನಡೆಯುತ್ತಿತ್ತು. ಹುಡ್ಗ ಏನ್​ ಮಾಡ್ದ ಅಂದ್ರೆ, ಹುಡುಗಿಯನ್ನ ಮನೆಯಿಂದ ಕರೆದುಕೊಂಡು ಹೋಗಿ, ಎರಡು ದಿನ ಅವರ ಮನೆಯಲ್ಲಿ ಇರಿಸಿಕೊಂಡ್ರು. ಆ ಮೇಲೆ ನ್ಯೂಸ್​ ಬಂತು ಆ ಹುಡುಗಿ ಪ್ರಗ್​ನೆಂಟ್​ ಆಗಿದ್ದಾಳೆ, 6 ತಿಂಗಳು ಅಂತ. ಆಮೇಲೆ ನಾನು ಅವರತ್ರ ಹೋಗಿ ಕೇಳ್ದೆ, ನಾನು ಖರ್ಚು ಮಾಡಿರೋ 5 ಲಕ್ಷ ಕೊಡಿ ಅಂತ. ಆದ್ರೆ ಅವರ ಅಪ್ಪ, ಅಮ್ಮ ಹುಡುಗರನ್ನೆಲ್ಲ ಕರೆದುಕೊಂಡು ಬಂದು ನನಗೆ ಹೊಡೆಯೋದಕ್ಕೆ ಬರ್ತಾರೆ ಎಂದು ನೊಂದ ಯುವಕ ಜೋಸೆಫ್​​ ತನ್ನ ಅಳಲು ತೋಡಿಕೊಂಡಿದ್ದಾರೆ.

ಇನ್ನೇನು ಮದುವೆಗೆ ಡೇಟ್​​ ಹತ್ತಿರ ಬರುತ್ತಿದ್ದಂತೆ ಕ್ಯಾತ್ರಿನಾ ಪ್ರೀತಿ ಕೊಂದು ಮಾಯವಾಗಿದ್ದಾಳೆ. ಕೊಟ್ಟ ಹಣ ಕೇಳಿದ್ರೆ ಕ್ಯಾತ್ರಿನಾ ತಾಯಿ ಕೊಡೋಕೆ ಸಿದ್ಧರಿಲ್ಲ. ಇತ್ತ ಪ್ರೀತಿಸಿದ ಹುಡುಗಿನೂ ಇಲ್ದೇ, ಕೂಡಿಟ್ಟ ಹಣನೂ ಇಲ್ದೇ, ಜೋಸೆಫ್​​ ಅವಲಹಳ್ಳಿ ಠಾಣೆ ಮೆಟ್ಟಿಲೇರಿ ಸದ್ಯ ಕ್ಯಾತ್ರಿನಾ ಕುಟುಂಬಸ್ಥರ ವಿರುದ್ಧ ದೂರು ನೀಡಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೀತಿಸಿ 5 ಲಕ್ಷಕ್ಕೂ ಹೆಚ್ಚು ಹಣ ಕಳ್ಕೊಂಡ ಯುವಕ; ಕೈ ಕೊಟ್ಟು ಇನ್ನೊಬ್ಬನ ಜತೆ ಎಸ್ಕೇಪ್​ ಆದ ಯುವತಿ

https://newsfirstlive.com/wp-content/uploads/2023/08/love-1.jpg

Load More