newsfirstkannada.com

ದಾರಿ ಸರಿಯಿಲ್ಲದ್ದಕ್ಕೆ ಬಾರದ ಆ್ಯಂಬುಲೆನ್ಸ್​.. ರಸ್ತೆಯಲ್ಲೇ ಮಗುವಿನ ಜನ್ಮ ನೀಡಿದ ಬುಡಕಟ್ಟು ಮಹಿಳೆ

Share :

Published April 9, 2024 at 6:52am

    ನಡುರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಬುಡಕಟ್ಟು ಸಮುದಾಯದ ಮಹಿಳೆ

    ಗ್ರಾಮದ ರಸ್ತೆ ಸರಿ ಇಲ್ಲದ ಕಾರಣ ಆಂಬ್ಯುಲೆನ್ಸ್ ಬರಲು ಹಿಂದೇಟು

    ಕಾಲು ದಾರಿಯಲ್ಲಿ ಗರ್ಭಿಣಿಯನ್ನು ಹೊತ್ತೊಯ್ಡ ಊರ ಮಹಿಳೆಯರು

ಆಂಧ್ರಪ್ರದೇಶ: ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ, ಆಂಧ್ರಪ್ರದೇಶದಲ್ಲಿ ನಡೆದಿದೆ. ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಪೆದಕೋಟ ಪಂಚಾಯತ್‌ನ ಚೀಡಿವಲಸ ಎಂಬಲ್ಲಿ ಮಹಿಳೆ ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ.

ವಸಂತಾ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಕುಟುಂಬ ಸದಸ್ಯರು ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ರು, ಗ್ರಾಮಕ್ಕೆ ಬರಲು ರಸ್ತೆ ಸರಿ ಇಲ್ಲದ ಕಾರಣ ಆಂಬ್ಯುಲೆನ್ಸ್ ಗ್ರಾಮದಿಂದ ಸುಮಾರು 1 ಕಿಮೀ ದೂರದಲ್ಲಿರುವ ರಸ್ತೆವರೆಗೆ ಮಾತ್ರ ಬಂದಿತ್ತು.

ಇದನ್ನೂ ಓದಿ: ಹವಾಮಾನ ಇಲಾಖೆಯಿಂದ ಗುಡ್​ ನ್ಯೂಸ್​​.. ಬೆಂಗಳೂರು ಸೇರಿ ರಾಜ್ಯದ ಈ ಭಾಗಗಳಲ್ಲಿ ಮಳೆಯ ಮುನ್ಸೂಚನೆ

ಪತಿ ಭಾಸ್ಕರ ರಾವ್ ಮತ್ತು ಗ್ರಾಮದ ಕೆಲವು ಮಹಿಳೆಯರು ಗರ್ಭಿಣಿ ಮಹಿಳೆಯನ್ನ, ಎತ್ತಿಕೊಂಡು ಹಳ್ಳಿಯಿಂದ ಕಾಲು ದಾರಿಯಲ್ಲಿ ಆಂಬ್ಯುಲೆನ್ಸ್‌ ಇರುವಲ್ಲಿಗೆ ಹೊತ್ತೊಯ್ಯುತ್ತಿದ್ರು. ಈ ವೇಳೆ ರಸ್ತೆಯಲ್ಲೇ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ಮಹಿಳೆಯನ್ನ ಹುಕುಂಪೇಟೆಯ ಆರೋಗ್ಯ ಕೇಂದ್ರಕ್ಕೆ ಆಂಬ್ಯುಲೆನ್ಸ್​ನಲ್ಲಿ ಕರೆತರಲಾಯಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಾರಿ ಸರಿಯಿಲ್ಲದ್ದಕ್ಕೆ ಬಾರದ ಆ್ಯಂಬುಲೆನ್ಸ್​.. ರಸ್ತೆಯಲ್ಲೇ ಮಗುವಿನ ಜನ್ಮ ನೀಡಿದ ಬುಡಕಟ್ಟು ಮಹಿಳೆ

https://newsfirstlive.com/wp-content/uploads/2024/04/Andra-pregnant-women.jpg

Load More