/newsfirstlive-kannada/media/post_attachments/wp-content/uploads/2025/05/rakeshi.jpg)
ಭರ್ಜರಿ ಬ್ಯಾಚುಲರ್ಸ್ ತಂಡ ಹೊಸ ಕಾನ್ಸೆಪ್ಟ್ ಜೊತೆಗೆ ವೀಕೆಂಡ್ ಭರ್ಜರಿ ಮನರಂಜನೆ ಹೊತ್ತು ತರ್ತಿದೆ. ಭರ್ಜರಿ ಬ್ಯಾಚುಲರ್ಸ್ ಸೀಸನ್ 1 ಸ್ಪರ್ಧಿಗಳು ಮರಳಿ ಬ್ಯಾಚುಲರ್ಸ್ ಅಡ್ಡಗೆ ಬಂದಿದ್ದಾರೆ. ಹೌದು, ಸೀಸನ್ 1 ಸ್ನೇಹಿತರು ರಿಯೂನಿಯನ್ ಆಗಿದ್ದಾರೆ.
ಇದನ್ನೂ ಓದಿ: ಜಸ್ಟ್ 7 ತಿಂಗಳಲ್ಲಿ 25 ಮದುವೆ.. 23 ವರ್ಷದ ಸುಂದರಿ ಸಂಚು ಬಾಲಿವುಡ್ ಸಿನಿಮಾನೂ ಮೀರಿಸಿದ ಸ್ಟೋರಿ!
ಲಾಸ್ಯ, ಆಸಿಯಾ ಬೇಗಮ್, ಅಮೂಲ್ಯ, ಯಶಸ್ವಿನಿ, ಸಂಜನಾ, ರಾಘು, ಐಶ್ವರ್ಯಾ, ನವಾಜ್, ಉಮೇಶ್ ಕಿನ್ನಾಳ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ವಿಶೇಷವಾಗಿ ಮರೆಯಾದ ಗೆಳೆಯನಿಗೆ ಟ್ರಿಬ್ಯೂಟ್ ಸಲ್ಲಿಸಿದ್ದಾರೆ ಸ್ನೇಹಿತರು.
ಹಾಸ್ಯ ಕಲಾವಿದ, ಮನರಂಜನೆಗೆ ಮತ್ತೊಂದು ಹೆಸರಾಗಿದ್ದ ಕಾಮಿಡಿ ಕಿಲಾಡಿ ರಾಕೇಶ್ ಪೂಜಾರಿಗೆ ಗೌರವ ಸಲ್ಲಿಸಲಾಗಿದೆ. ‘ಕಾಮಿಡಿ ಕಿಲಾಡಿಗಳು ಸೀಸನ್ -3’ ವಿನ್ನರ್, ಕಿರುತೆರೆ ನಟ ರಾಕೇಶ್ ಪೂಜಾರಿ ಸ್ನೇಹಿತರ ಮೆಹಂದಿ ಕಾರ್ಯಕ್ರಮದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು.
ನಟನ ಅಕಾಲಿಕ ಮರಣಕ್ಕೆ ಇಡೀ ಕಿರುತೆರೆ, ಹಿರಿತೆರೆ ಕಲಾವಿದರು ಕಂಬನಿ ಮಿಡಿದಿದ್ದರು. ಹೀಗಾಗಿ ನಟ ರಾಕೇಶ್ ಪೂಜಾರಿ ಅವರ ಫೋಟೋಗೆ ನಮನ ಸಲ್ಲಿಸಿ ಇಡೀ ವೇದಿಕೆ ಕಣ್ಣೀರು ಹಾಕಿದೆ.
View this post on Instagram
ಇದೀಗ ಭರ್ಜರಿ ಬ್ಯಾಚುಲರ್ಸ್ ವೇದಿಕೆಗೆ ಹಳೆ ಸ್ಪರ್ಧಿಗಳು ರೀ ಎಂಟ್ರಿ ಕೊಟ್ಟು ಮಜಾ ಮಾಡಿದ್ದಾರೆ. ಸದ್ಯ ರಿಯೂನಿಯನ್ ಪ್ರೋಮೋವೊಂದು ರಿಲೀಸ್ ಮಾಡಲಾಗಿದೆ. ಇದೇ ವೇಳೆ ಬ್ಯೂಟಿಫುಲ್ ಕ್ಷಣಗಳನ್ನ ಶೇರ್ ಮಾಡಿಕೊಂಡಿದ್ದಾರೆ ಹಳೆ ಬ್ಯಾಚುಲರ್ಸ್. ಈ ವಾರಂತ್ಯ ಬ್ಯಾಚುಲರ್ಸ್ ರಿಯೂನಿಯನ್ ಸಂಚಿಕೆ ಪ್ರಸಾರವಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ