/newsfirstlive-kannada/media/post_attachments/wp-content/uploads/2024/10/ICMR-HOMEMADE-FOOD-1.jpg)
ನಾವು ಬಹುತೇಕರು ಮರೆಯುತ್ತೇವೆ ನಮ್ಮ ದೇಹವನ್ನು ಹೆಚ್ಚು ಗಟ್ಟಿಯಾಗಿಡುವುದೇ ರೋಗ ನಿರೋಧಕ ವ್ಯವಸ್ಥೆ. ಈ ರೋಗ ನಿರೋಧಕ ಶಕ್ತಿ ನಮ್ಮ ದೇಹದಲ್ಲಿ ಹೆಚ್ಚು ಇದ್ದಷ್ಟು ನಮ್ಮನ್ನು ರೋಗಗಳು ಹಾಗೂ ಸೋಂಕುಗಳು ಕಾಡುವುದಿಲ್ಲ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವಲ್ಲಿ ಅನೇಕ ಜನರು ಅನೇಕ ಪ್ರಯತ್ನಗಳನ್ನು ಮಾಡಿರುತ್ತಾರೆ. ನೂರಾರು ಮನೆಮದ್ದನ್ನು ಸೇವಿಸಿರುತ್ತಾರೆ. ಆದ್ರೆ ಕೆಲವೊಮ್ಮೆ ಸರಳವಾದ ಪರಿಹಾರಗಳೇ ನಿಮ್ಮ ಮುಂದೆ ಇದ್ದರೂ ಅದನ್ನು ನೀವು ಗಮನಿಸುವುದಿಲ್ಲ. ದೇಹದಲ್ಲಿ ಇಮ್ಯುನಿಟಿಯನ್ನು ಹೆಚ್ಚಿಸಿಕೊಳ್ಳಲು ಕೆಲವು ಟಿಪ್ಸ್ಗಳನ್ನ ನಾವು ಇಲ್ಲಿ ಕೊಡುತ್ತೇವೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಹೆಚ್ಚಿ ಸೇವಿಸಿ
ಆಹಾರ ಸೇವನೆ ಅಂದ್ರೆನೇ ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳು ಎಂದೇ ಅರ್ಥ ಇವುಗಳಲ್ಲಿಯೇ ಹೆಚ್ಚು ಜೀವಸತ್ವಗಳು ಇರುವುದು. ಇದರೊಂದಿಗೆ ಪ್ರೊಟೀನ್ ಹೊಂದಿರುವ ಆಹಾರ ಹಾಗೂ ಧಾನ್ಯಗಳು ಕಡಿಮೆ ಫ್ಯಾಟ್ ಇರುವ ಡೈರಿ ಪದಾರ್ಥಗಳನ್ನು ಸೇವಿಸುವುದರಿಂದ. ಇವುಗಳಲ್ಲಿ ಇರುವ ಜೀವಸತ್ವಗಳು ಹಾಗೂ ಪೋಷಕಾಂಶಗಳು ನಮ್ಮ ದೇಹದಲ್ಲಿ ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಸೃಷ್ಟಿಸುತ್ತವೆ. ಅತಿಹೆಚ್ಚು ಫ್ಯಾಟ್, ಕೊಲೆಸ್ಟ್ರಾಲ್ ಹಾಗೂ ಹೆಚ್ಚು ಉಪ್ಪು ತಿನ್ನುವ ಮೊದಲ ಹಲವು ಬಾರಿ ಯೋಚಿಸಿ. ಇಷ್ಟು ನೀವು ಪಾಲಿಸಿದರೆ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಪವಾಡ ಸದೃಶ್ಯದಂತೆ ಹೆಚ್ಚುತ್ತದೆ.
ದೈಹಿಕವಾಗಿ ಚಟುವಟಿಕೆಯಿಂದ ಇರಿ
ನಿತ್ಯ ದೈಹಿಕ ಚಟುವಟಿಕೆಗಳು ನಮ್ಮನ್ನು ಉತ್ತಮವಾಗಿ ಇಡುವುದು ಮತ್ತು ಒಳ್ಳೆಯ ನಿದ್ರೆಯನ್ನು ನೀಡುವುದು ಮಾತ್ರವಲ್ಲ ಇದು ಆ್ಯಂಗ್ಸೈಟಿಯನ್ನು ಕಡಿಮೆ ಮಾಡಿ ಇಮ್ಯುನಿಟಿಯನ್ನು ವೃದ್ಧಿಸುತ್ತದೆ. ಸರಿಯಾದ ವ್ಯಾಯಾಮ ಹಾಗೂ ಸರಿಯಾದ ಆಹಾರ ಕ್ರಮ ಇವು ಎರಡರಲ್ಲಿಯೂ ನಾವು ಸಮತೋಲನ ಕಾಯ್ದುಕೊಂಡರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ತನ್ನಿಂದ ತಾನೆ ವೃದ್ಧಿಯಾಗುತ್ತದೆ.
ಸರಿಯಾದ ತೂಕವನ್ನು ಕಾಪಾಡಿಕೊಳ್ಳಿ
ದೇಹದ ತೂಕ ಅತಿ ಹೆಚ್ಚಿದ್ದರೂ, ಅತಿ ಕಡಿಮೆಯಿದ್ದರೂ ಕೂಡ ಅದು ಆರೋಗ್ಯದ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಅದರಲ್ಲೂ ಬೊಜ್ಜು ಹೊಂದಿದ ದೇಹ ತುಂಬಾ ಅಪಾಯ. ಹೀಗಾಗಿ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಸರಿಯಾದ ತೂಕ ನಿರ್ವಹಣೆ ಮಾಡಿದರೆ ಒತ್ತಡ, ಆತಂಕಗಳು ಕೂಡ ದೂರ ಆಗುವುದರೊಂದಿಗೆ ದೇಹದಲ್ಲಿ ಇಮ್ಯುನಿಟಿ ಕೂಡ ಬೂಸ್ಟ್ ಆಗುತ್ತದೆ.
ಸಾಕಷ್ಟು ನಿದ್ದೆ ಮಾಡಬೇಕು
ನಿದ್ದೆ, ತುಂಬಾ ಮುಖ್ಯವಾದದ್ದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರಿಯಾದ ನಿದ್ದೆ, ಊಟವಿಲ್ಲದೆ ಜನರು ಬಳಲುತ್ತಿದ್ದಾರೆ. ನಿಮ್ಮ ದೇಹ ರೋಗದ ಗೂಡಾಗಬಾರದು ಅಂದ್ರೆ ಅದು ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೊಂದಿರಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕು ಅಂದ್ರೆ ನಮ್ಮ ಆಹಾರ, ನಿತ್ಯ ಚಟುವಟಿಕೆ ಹಾಗೂ ನಿದ್ರೆ ಸರಿಯಾಗಿ ಇರಬೇಕು. ಆಯಾ ಆಯಾ ವಯಸ್ಸಿಗೆ ಎಷ್ಟು ನಿದ್ದೆ ಮಾಡಬೇಕೋ ಅಷ್ಟು ನಿದ್ದೆಯನ್ನು ತಪ್ಪದೇ ಮಾಡಬೇಕು
ದೂಮಪಾನ ಮಾಡುತ್ತಿದ್ದರೆ ನಿಲ್ಲಿಸಿಬಿಡಿ
ದೂಮಪಾನದಿಂದಾಗಿ ನಮ್ಮ ದೇಹ ರೋಗಗಳೊಂದಿಗೆ ಹೋರಾಡುವ ಶಕ್ತಿಯನ್ನೇ ಕಳೆದುಕೊಂಡು ಬಿಡುತ್ತದೆ. ಒಂದು ವೇಳೆ ನೀವು ಸಿಗರೇಟು ಸೇದುತ್ತಿದ್ದರೆ ಅದನ್ನು ಇಂದೇ ಬಿಟ್ಟು ಬಿಡಿ. ಅದು ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅತಿಯಾಗಿ ಸಿಗರೇಟು ಸೇದುವವರ ದೇಹದಲ್ಲಿ ಸರಳವಾಗಿ ರೋಗ ನಿರೋಧಕ ಶಕ್ತಿ ಇಳಿದು ಹೋಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ