/newsfirstlive-kannada/media/post_attachments/wp-content/uploads/2025/04/TRIO_SSLC.jpg)
ಬೆಂಗಳೂರು: 2024-25ನೇ ಶೈಕ್ಷಣಿಕ ವರ್ಷದ ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಸ್ಸಿಇ) ನಡೆಸುವ ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಶನ್ (ಐಸಿಎಸ್‌ಇ)ನ 10ನೇ ತರಗತಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟ ಮಾಡಿದೆ. ಈ ಪರೀಕ್ಷೆಯಲ್ಲಿ ಬೆಂಗಳೂರಿನ TRIO ವರ್ಲ್ಡ್ ಸ್ಕೂಲ್ನ ವಿದ್ಯಾರ್ಥಿಗಳು ಮಹತ್ತರ ಸಾಧನೆ ಮಾಡಿದ್ದಾರೆ.
ಟ್ರಿಯೋ ವರ್ಲ್ಡ್ ಸ್ಕೂಲ್ನ 10ನೇ ತರಗತಿಯ ವಿದ್ಯಾರ್ಥಿಗಳಾದ ಸಂಜಯ್ ಕುಮಾರ್ ಮತ್ತು ವಿಹಾನ್ ಕೌಲ್ ಇಬ್ಬರೂ ಶೇಕಡಾ 99 ರಷ್ಟು ಅಂಕಗಳನ್ನು ಪಡೆದಿದ್ದಾರೆ. ಇಬ್ಬರು ಶಾಲೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸ್ ಆಗಿದ್ದು, ಇದೊಂದು ಸಾಮೂಹಿಕ ಸಾಧನೆ ಆಗಿದೆ. ಇಷ್ಟೇ ಅಲ್ಲದೇ ಟ್ರಿಯೋ ವರ್ಲ್ಡ್ ಸ್ಕೂಲ್ನ 10ನೇ ತರಗತಿಯ ಬಹುತೇಕ ಮಕ್ಕಳು ಶೇಕಡಾ 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. ಇದರಿಂದ ಈ ಹಿಂದಿನ ದಾಖಲೆ ಈಗ ಬ್ರೇಕ್ ಆದಂತೆ ಆಗಿದೆ.
ಇದನ್ನೂ ಓದಿ:ನಮ್ಮ ಮೆಟ್ರೋದಿಂದ ಗುಡ್ನ್ಯೂಸ್.. 50 ವರ್ಷದ ಒಳಗಿನವರಿಗೆ 100ಕ್ಕೂ ಹೆಚ್ಚು ಉದ್ಯೋಗಗಳು
2024-25ನೇ ಶೈಕ್ಷಣಿಕ ವರ್ಷದಲ್ಲಿ ಶಾಲೆಯು ಶೇಕಡಾ 100 ರಷ್ಟು ಫಲಿತಾಂಶವನ್ನು ಪಡೆದಿರುವುದು ಸಿಬ್ಬಂದಿ ವರ್ಗಕ್ಕೆ ಸಂತಸದ ವಿಷಯವಾಗಿದೆ. ವಿದ್ಯಾರ್ಥಿಗಳ ಈ ಸಾಧನೆಯೂ ಟ್ರಿಯೋ ವರ್ಲ್ಡ್ ಸ್ಕೂಲ್ನ ಬದ್ಧತೆ ಹಾಗೂ ಶೈಕ್ಷಣಿಕ ಸಂಸ್ಕೃತಿಗೆ ನೀಡಿರುವ ಮಹತ್ವವನ್ನು ಮನದಟ್ಟು ಮಾಡುತ್ತದೆ. ಹಿಂದಿನ ಬಾರಿಗಿಂತ ಈ ಸಲ ಇನ್ನು ಅತ್ಯುತ್ತಮ ಸಾಧನೆಯನ್ನು ಶಾಲೆ ಮಾಡಿದೆ ಎಂದು ಇದರಿಂದ ಗೊತ್ತಾಗುತ್ತದೆ.
ಇನ್ನು ಟ್ರಿಯೋ ವರ್ಲ್ಡ್ ಸ್ಕೂಲ್ನ ಮ್ಯಾನೆಜಿಂಗ್ ಡೈರೆಕ್ಟರ್ ನವೀನ್ ಕೆ.ಎಂ ಅವರು ಮಾತನಾಡಿ, ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳನ್ನು ತೆಗೆದ ಎಲ್ಲ ವಿದ್ಯಾರ್ಥಿಗಳಿಗೆ ಮೊದಲು ಅಭಿನಂದಿಸಿದರು. ಕ್ರೀಡೆಯ ಜೊತೆ ಜೊತೆ ಶಾಲಾ ಪಠ್ಯದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವುದು ಹೆಮ್ಮೆಯ ಕ್ಷಣ. ಇನ್ನು ಮಕ್ಕಳು ಹೆಚ್ಚು ಹೆಚ್ಚು ಅಂಕಗಳನ್ನು ಪಡೆಯಲು ಶ್ರಮಿಸಿದಂತ ಶಿಕ್ಷಕ ವರ್ಗಕ್ಕೆ ಹೃತ್ಪೂರ್ವಕ ಅಭಿನಂದನೆ ಎಂದು ಹೇಳಿದರು.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ