newsfirstkannada.com

ಮಹಾರಾಷ್ಟ್ರದಲ್ಲಿ ತ್ರಿಬಲ್​ ಇಂಜಿನ್​ ಸರ್ಕಾರ; ಅಜಿತ್​ ಪವಾರ್ ಜೊತೆ 8 ಸಚಿವರ ಪ್ರಮಾಣವಚನ

Share :

Published July 3, 2023 at 7:05am

Update July 3, 2023 at 7:06am

    NCP ಬಿಟ್ಟು ಶಿಂಧೆ ಸರ್ಕಾರದ ಜೊತೆ ಸೇರಿದ ಅಜಿತ್​ ಪವಾರ್​

    ಬಂಡಾಯವೆದ್ದ ಬೆನ್ನಲ್ಲೇ ಡಿಸಿಎಂ ಆಗಿ ಅಜಿತ್ ಪವಾರ್ ನೇಮಕ

    ಅಜಿತ್​ ಪವಾರ್​ ಆ್ಯಂಡ್​ ಟೀಂ ವಿರುದ್ಧ ಎನ್​​ಸಿಪಿ ಅನರ್ಹತೆಯ ಬಾಣ

ನೆರೆಯ ಮಹಾರಾಷ್ಟ್ರದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆಯುತ್ತಿದೆ. ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿದ್ದ ಎನ್‌ಸಿಪಿ ನಾಯಕ ಅಜಿತ್ ಪವಾರ್, ಶಿಂಧೆ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ. ಡಿಸಿಎಂಯೂ ಆಗಿ ಪ್ರಮಾಣವಚನ ಕೂಡ ಸ್ವೀಕರಿಸಿದ್ದಾರೆ. ಈ ಬೆನ್ನಲ್ಲೇ ಬಂಡಾಯವೆದ್ದ ಅಜಿತ್ ಪವಾರ್ ಮತ್ತು 8 ಶಾಸಕರ ವಿರುದ್ಧ ಎನ್‌ಸಿಪಿ ಅನರ್ಹತೆಯ ಅಸ್ತ್ರ ಹೂಡಿದೆ.

ನೂತನ ಡಿಸಿಎಂ ಆಗಿ ಅಜಿತ್ ಪವಾರ್ ಪದಗ್ರಹಣ

ಮಹಾರಾಷ್ಟ್ರದಲ್ಲಿ ನಿನ್ನೆ ರಾಜಕೀಯ ಕ್ಷಿಪ್ರಕ್ರಾಂತಿ ನಡೆದು ಹೋಗಿದೆ. ಮಹಾರಾಷ್ಟ್ರ ವಿಧಾನಸಭೆ ವಿಪಕ್ಷ ನಾಯಕನಾಗಿದ್ದ ಅಜಿತ್ ಪವಾರ್ ಮಧ್ಯಾಹ್ನದ ಹೊತ್ತಿಗೆ ಬಿಜೆಪಿ ಹಾಗೂ ಶಿವಸೇನೆ ಸರ್ಕಾರದ ಸಿ ಟೀಂ ಆಗಿದ್ದಾರೆ. ಎನ್‌ಸಿಪಿ ನಾಯಕ ಅಜಿತ್ ಪವಾರ್ ಬಂಡಾಯವೆದ್ದು 9 ಮಂದಿ ಶಾಸಕರೊಂದಿಗೆ ಶಿಂಧೆ ಸರ್ಕಾರ ಸೇರಿದ್ದಾರೆ. ಅಜಿತ್​ ಪವಾರ್​ ಡಿಸಿಎಂ ಆಗಿಯೂ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಬಂಡಾವೆದ್ದ ಶಾಸಕರ ವಿರುದ್ಧ ಅನರ್ಹ ಅಸ್ತ್ರ ಹೂಡಿದ ಎನ್​ಸಿಪಿ

ಶಿಂಧೆ ಬಣ ಸೇರುತ್ತಲೇ ಮಹಾರಾಷ್ಟ್ರದ ನೂತನ ಡಿಸಿಎಂ ಆಗಿ ಅಜಿತ್ ಪವಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪವಾರ್ ಜೊತೆಗೆ ಎನ್​ಸಿಪಿಯ ಹಿರಿಯ ನಾಯಕ ಛಗನ್ ಭುಜಬಲ್ ಸೇರಿ 9 ಮಂದಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದ್ರೆ ಪಕ್ಷ ತೊರೆದು ಶಿಂಧೆ ಸರ್ಕಾರ ಸೇರಿದ ಅಜಿತ್​ ಪವಾರ್​ ಆ್ಯಂಡ್​ ಟೀಂ ವಿರುದ್ಧ ಎನ್​​ಸಿಪಿ ಅನರ್ಹತೆಯ ಬಾಣ ಹೂಡಿದೆ.

ಇನ್ನು ಅಜಿತ್​ ಪಾವರ್​ ಆ್ಯಂಡ್​​ ಟೀಂ ಶಿಂಧೆ ಸರ್ಕಾರ ಸೇರಿದ ಬೆನ್ನಲ್ಲೇ, ಎನ್‌ಸಿಪಿ ಕಾರ್ಯಾಧ್ಯಕ್ಷೆ ಹಾಗೂ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ತಡರಾತ್ರಿ ಸುದ್ದಿಗೋಷ್ಠಿ ನಡೆಸಿದ್ರು. ಅವರೆಲ್ಲಾ ಮತ್ತೆ ಪಕ್ಷಕ್ಕೆ ವಾಪಸ್ ಬಂದರೆ ಖುಷಿಯಾಗುತ್ತೆ. ರಾಜಕೀಯ ಬೇರೆ, ವೈಯಕ್ತಿಕ ಜೀವನ ಬೇರೆ ಅಜಿತ್ ಪವಾರ್ ಈಗಲೂ ನನ್ನ ಸಹೋದರ ಎಂದಿದ್ದಾರೆ. ಅಲ್ಲದೆ ಪಕ್ಷ ತೊರೆದ ಅಷ್ಟೂ ಶಾಸಕರನ್ನ ಅನರ್ಹಗೊಳಿಸೋದಾಗಿ ಹೇಳಿದ್ದಾರೆ.

ಬಳಿಕ ಮಾತನಾಡಿದ ಎನ್‌ಸಿಪಿ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್, ಎನ್‌ಸಿಪಿ ತೊರೆದ 9 ಶಾಸಕರು ಈ ಬಗ್ಗೆ ನಮ್ಮ ರಾಷ್ಟ್ರೀಯ ಅಧ್ಯಕ್ಷರ ಜೊತೆ ಮಾತನಾಡಿಲ್ಲ. ಅವರು ಪ್ರಮಾಣ ವಚನ ಸ್ವೀಕರಿಸಿ ಸರ್ಕಾರಕ್ಕೆ ಸೇರಿದಾಗಲೇ ಅನರ್ಹಗೊಂಡಿದ್ದಾರೆ. ಒಂಬತ್ತೂ ಶಾಸಕರನ್ನ ಅನರ್ಹಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಅರ್ಜಿ ಅಲ್ಲಿಸಿದ್ದೇವೆ. ಅಲ್ಲದೆ ಶಾಸಕರ ಅನರ್ಹತೆ ಕೋರಿ ಸ್ಪೀಕರ್​ಗೂ ಮೇಲ್​ ಮಾಡಿದ್ದೇವೆ ಅಂತಾ ಕಿಡಿಕಾರಿದ್ದಾರೆ.

ನೂತನ ವಿಪಕ್ಷ ನಾಯಕರಾಗಿ ಜಿತೇಂದ್ರ ಅವ್ಹಾದ್ ನೇಮಕ!

ಇನ್ನು ವಿರೋಧ ಪಕ್ಷದ ನಾಯಕರಾಗಿದ್ದ ಎನ್​ಸಿಪಿ ನಾಯಕ ಅಜಿತ್ ಪವಾರ್ ಶಿವಸೇನೆಯ ಸಿಎಂ ಏಕನಾಥ್​ ಶಿಂಧೆ ಸರ್ಕಾರ ಸೇರಿದ ಬೆನ್ನಲ್ಲೇ, ಜಿತೇಂದ್ರ ಅವ್ಹಾದ್​ರನ್ನು ವಿರೋಧ ಪಕ್ಷದ ನಾಯಕ ಮತ್ತು ಮುಖ್ಯ ಸಚೇತಕರನ್ನಾಗಿ ಎನ್​ಸಿಪಿ ನೇಮಕ ಮಾಡಿದೆ.

ಒಟ್ಟಾರೆ ಮಹಾರಾಷ್ಟ್ರದಲ್ಲಿ 3 ಚಕ್ರಗಳ ಸರ್ಕಾರ ರಚನೆ ಆದಂತಾಗಿದೆ. ಆದ್ರೆ ಮೂರನೇ ಚಕ್ರ ಸಾಗುವ ದಾರಿ ಅಷ್ಟೇನು ಸುಲಭವಿಲ್ಲ. ಈಗಾಗಲೇ ಪಕ್ಷ ತೊರೆದು ಶಿಂಧೆ ಸರ್ಕಾರ ಸೇರಿದ 9 ಶಾಸಕರ ವಿರುದ್ಧ ಎನ್​​ಸಿಪಿ ಅನರ್ಹತ್ಯೆಯ ಬಾಣ ಬಿಟ್ಟಿದೆ. ಈ ಅನರ್ಹತೆಯ ಸಂಕಷ್ಟದಿಂದ ನೂತನ ಡಿಸಿಎಂ ಹಾಗೂ ಸಚಿವರು ಪಾರಾಗ್ತಾರ ಅನ್ನೋದೆ ಸದ್ಯದ ಪ್ರಶ್ನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಾರಾಷ್ಟ್ರದಲ್ಲಿ ತ್ರಿಬಲ್​ ಇಂಜಿನ್​ ಸರ್ಕಾರ; ಅಜಿತ್​ ಪವಾರ್ ಜೊತೆ 8 ಸಚಿವರ ಪ್ರಮಾಣವಚನ

https://newsfirstlive.com/wp-content/uploads/2023/07/Ajith-pawar.jpg

Load More